ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮುಖ್ಯ ಯೋಜನೆಗಳಲ್ಲಿ ಒಂದು ಅನ್ನಭಾಗ್ಯ ಯೋಜನೆ (Annabhagya Yojane) ಆಗಿದೆ. ಈ ಯೋಜನೆಯ ಸೌಲಭ್ಯ ಈಗಾಗಲೇ ಸಾಕಷ್ಟು ಜನರಿಗೆ ಸಿಕ್ಕಿದೆ.

ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ನೀಡುವುದಾಗಿ ತಿಳಿಸಿದ್ದ ಸರ್ಕಾರ ನಂತರದ ದಿನಗಳಲ್ಲಿ 5ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿ ಅಕ್ಕಿಯ ಬದಲು ಹಣ ನೀಡುವುದಾಗಿ ಹೇಳಿತ್ತು.

BPL Ration Card

ಈ ಹಣವು ಕೆಲವು ಜನರಿಗೆ ಸಿಕ್ಕಿದೆ, ಇನ್ನು ಕೆಲವು ಜನರಿಗೆ ಸಿಕ್ಕಿಲ್ಲ. ಆದರೆ ಈ ಯೋಜನೆಯ ಬಗ್ಗೆ ಒಂದಲ್ಲಾ ಒಂದು ವಿಚಾರ ಕೇಳಿಬರುತ್ತಲೇ ಇದ್ದು, ಅದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ವಿದ್ಯುತ್ ಬಿಲ್ ಬಾಕಿ ಇದ್ದವರಿಗೆ ಗೃಹಜ್ಯೋತಿ ಯೋಜನೆ ಬಗ್ಗೆ ನಿಯಮ ಬದಲಾವಣೆ ಮಾಡಿದ ಸರ್ಕಾರ

ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಅನ್ನಭಾಗ್ಯ ಯೋಜನೆಯ (Annabhagya Scheme) ಹಣ ಬಂದಿಲ್ಲ ಎಂದರೆ, ಮೊದಲಿಗೆ ನೀವು ಅದನ್ನು ಚೆಕ್ ಮಾಡಬೇಕಾಗುತ್ತದೆ. ಅದಕ್ಕಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.

ahara.kar.nic.in ಇದು ಅಧಿಕೃತ ವೆಬ್ಸೈಟ್ ಆಗಿದ್ದು, ಈ ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ಕೇಳಲಾಗುವ ಮಾಹಿತಿಯನ್ನು ನೀವು ಫಿಲ್ ಮಾಡಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ರೇಷನ್ ಕಾರ್ಡ್ (Ration Card) ನಂಬರ್ ಮತ್ತು ಇನ್ನಿತರ ಮಾಹಿತಿ ಕೇಳುತ್ತದೆ. ಅದೆಲ್ಲವನ್ನು ನೀವು ಫಿಲ್ ಮಾಡಬೇಕಾಗುತ್ತದೆ..

ನಂತರ ಅಲ್ಲಿಯೇ ಕೆಳಗೆ ವೆರಿಫಿಕೇಶನ್ ನಂಬರ್ ಅನ್ನು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಅದನ್ನೇ ಎಂಟ್ರಿ ಮಾಡಬೇಕಾಗುತ್ತದೆ. ಬಳಿಕ ನೀವು ಮುಂದಿನ ಮಾಹಿತಿ ಪಡೆಯಲು ಮುಂದುವರೆಯಬಹುದು.

ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿದ್ರೆ ಈ ಹೊಸ ರೂಲ್ಸ್ ತಿಳಿಯಿರಿ! ಹೊಸ ನಿಯಮ ತಂದ ಸರ್ಕಾರ

ಈ ಯೋಜನೆಯಲ್ಲಿ ಒಂದು ವೇಳೆ ನಿಮಗೆ 680 ರೂಪಾಯಿ ಪಡೆಯುವ ಅರ್ಹತೆ ಇದೆ ಎಂದರೆ, ಆ ಹಣ ಇದೇ ತಿಂಗಳು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುತ್ತಾ ಎಂದು ತಿಳಿದುಕೊಳ್ಳಲು, ಈ ರೀತಿ ಚೆಕ್ ಮಾಡುವ ಮೂಲಕ ಕನ್ಫರ್ಮ್ ಮಾಡಿಕೊಳ್ಳಬಹುದಾಗಿದೆ.

Annabhagya Yojane Moneyಇದೇ ರೀತಿಯಾಗಿ ಬಂದರೆ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಖಂಡಿತವಾಗಿ ಬರುತ್ತದೆ ಎಂದು ಹೇಳಬಹುದು. ಆದರೆ ಈಗ ಮತ್ತೊಂದು ಮಾಹಿತಿ ಪ್ರಕಾರ ಕೆಲವು ಕಡೆಗಳಲ್ಲಿ NCPI ಅಥವಾ ಆಧಾರ್ ಚೆಕ್ ಆಗದೆ ಇರುವ ಕಾರಣದಿಂದ ಅಂಥವರ ಬ್ಯಾಂಕ್ ಅಕೌಂಟ್ ಗೆ ಹಣ ಬಂದಿರದೇ ಇರುವ ಸಾಧ್ಯತೆ ಸಹ ಇರುತ್ತದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ರೀತಿ ಆಗಿದ್ದರೆ ಏನು ಮಾಡಬೇಕು ಎನ್ನುವುದನ್ನು ಈಗ ತಿಳಿಸುತ್ತೇವೆ ನೋಡಿ..

ನೀವು ಚೆಕ್ ಮಾಡಿದಾಗ, NCPI ಚೆಕ್ ಎಂದು ಬಂದಿದ್ದರೆ ನೀವು ಬ್ಯಾಂಕ್ ನಲ್ಲಿ ಫಿಂಗರ್ ಪ್ರಿಂಟ್ (Fingers Print) ಕೊಟ್ಟಿಲ್ಲ ಎಂದು ಅರ್ಥ ಆಗಿರುತ್ತದೆ. ಆ ರೀತಿ ಆದಾಗ ನೀವು ನಿಮಗೆ ಹತ್ತಿರ ಇರುವ ಬ್ಯಾಂಕ್ ಗೆ ಹೋಗಿ ನಿಮ್ಮ Thumb Impression ಕೊಟ್ಟು ಬರಬಹುದಾಗಿದೆ.

ಮೊಬೈಲ್‌ಗೆ ಮೆಸೇಜ್ ಬಂದು ಗೃಹಲಕ್ಷ್ಮಿ ಯೋಜನೆ ಹಣ ಅಕೌಂಟ್‌ಗೆ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ

ಒಂದು ವೇಳೆ ಆಧಾರ್ ಚೆಕ್ ಆಗಿದ್ದರೆ, ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ, ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು.. ಈ ಎರಡು ಕೆಲಸಗಳು ಸರಿಯಾಗಿ ನಡೆದರೆ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

Do This if you Not Received Annabhagya Yojana Money to your Bank account