ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿದ್ರೆ ಈ ಹೊಸ ರೂಲ್ಸ್ ತಿಳಿಯಿರಿ! ಹೊಸ ನಿಯಮ ತಂದ ಸರ್ಕಾರ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Vidhanasabha Election) ಇದ್ದ ಕಾರಣ ಸರ್ಕಾರವು ರೇಷನ್ ಕಾರ್ಡ್ (Ration Card) ಗೆ ಸಂಬಂಧಿಸಿದ ಕೆಲಸಗಳಿಗೆ ಬ್ರೇಕ್ ನೀಡಿತ್ತು. ಇತ್ತ ಜನರು ರಾಜ್ಯ ಸರ್ಕಾರದ ಪ್ರಯೋಜನಗಳನ್ನು ಪಡೆಯಲು ರೇಷನ್ ಕಾರ್ಡ್ ಬೇಕು ಎಂದು ತಿದ್ದುಪಡಿ (Ration Card Update) ಮತ್ತು ಹೊಸ ರೇಷನ್ ಕಾರ್ಡ್ ಮಾಡಿಸಲು ಕಾಯುತ್ತಿದ್ದಾರೆ.
ಹೀಗಿರುವಾಗ ರಾಜ್ಯ ಸರ್ಕಾರ ಹೊಸ ರೇಷನ್ ಕಾರ್ಡ್ ಮಾಡಿಸಲು ಅನುಮತಿ ನೀಡುವುದಿಲ್ಲ ಎನ್ನುವ ಮಾತುಗಳು ಕೆಲವು ಕಡೆ ಕೇಳಿಬರುತ್ತಿದೆ. ಆದರೆ ಇದೀಗ ಆಹಾರ ಸಚಿವರಾದ ಕೆ.ಹೆಚ್ ಮುನಿಯಪ್ಪ (K H Muniyappa) ಅವರು ಈ ವಿಚಾರದ ಬಗ್ಗೆ ಹೊಸ ಅಪ್ಡೇಟ್ ನೀಡಿದ್ದು, ಇದರಿಂದ ಜನರಿಗೆ ಸ್ವಲ್ಪ ನೆಮ್ಮದಿಯಾಗಿದೆ.
ಮೊಬೈಲ್‌ಗೆ ಮೆಸೇಜ್ ಬಂದು ಗೃಹಲಕ್ಷ್ಮಿ ಯೋಜನೆ ಹಣ ಅಕೌಂಟ್‌ಗೆ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ
ಮುನಿಯಪ್ಪ ಅವರು ನೀಡಿರುವ ಮಾಹಿತಿ ಪ್ರಕಾರ ಹೊಸ ರೇಷನ್ ಕಾರ್ಡ್ (New Ration Card) ಅರ್ಜಿ ಸಲ್ಲಿಕೆ ಶೀಘ್ರದಲ್ಲೇ ಶುರು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಇದರಿಂದ ಜನರಿಗೆ ನೆಮ್ಮದಿಯಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವವರಲ್ಲಿ ಅರ್ಹತೆ ಇರುವವರಿಗೆ ಬಿಪಿಎಲ್ ಕಾರ್ಡ್ (BPL Ration Card) ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಿದ್ದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
*ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ಖಾಸಗಿ ಫ್ರಾಂಚೈಸಿಗಳು, ಜನಸ್ನೇಹಿ ಕೇಂದ್ರ, ಗ್ರಾಮ್ ಪಂಚಾಯತ್ ಇಲ್ಲೆಲ್ಲಾ ಕೂಡ ಅರ್ಜಿ ಹಾಕಬಹುದು.
*ಅರ್ಜಿ ಹಾಕುವವರು, ಅವರ ಮತ್ತು ಮನೆಯವರ ಆಧಾರ್ ಡೀಟೇಲ್ಸ್ ಮತ್ತು ಬಯೋಮೆಟ್ರಿಕ್ ನೀಡಬೇಕಾಗುತ್ತದೆ.
*5 ವರ್ಷದ ಒಳಗಿನ ಮಕ್ಕಳಿಗೆ ದೃಢೀಕರಣ ಬೇಕಿಲ್ಲ ಆದರೆ ಆಧಾರ್ ಕಾರ್ಡ್ ಬೇಕಾಗುತ್ತದೆ..
*NPHH ಗೆ ಆಧಾರ್ ಕಾರ್ಡ್ ಮಾತ್ರ ಬೇಕಾಗುತ್ತದೆ. ಬೇರೆ ಯಾವ ಕಾರ್ಡ್ ಬೇಕಾಗುವುದಿಲ್ಲ. ಹೆಸರು, ಫೋಟೋ, ವಯಸ್ಸು, ಲಿಂಗ, ಮೊಬೈಲ್ ನಂಬರ್, ಅಡ್ರೆಸ್ ಈ ಮಾಹಿತಿ ಬೇಕಾಗುತ್ತದೆ.
*ಅರ್ಜಿ ಹಾಕುವವರು ತಮ್ಮ ಪ್ರೆಸೆಂಟ್ ಅಡ್ರೆಸ್ ಅನ್ನು ಹೊಂದಿರಬೇಕು, ಅದು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಆಗಿರಬೇಕು. ಅಥವಾ ಕುಟುಂಬದಲ್ಲಿರುವ ಒಬ್ಬರಾದರು ಕೂಡ ಅವರ ಆಧಾರ್ ಕಾರ್ಡ್ ನಲ್ಲಿ ಪ್ರೆಸೆಂಟ್ ಅಡ್ರೆಸ್ ಅಪ್ಡೇಟ್ ಮಾಡಿಸಿರಬೇಕು. ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.
ಫ್ರೀ ಕರೆಂಟ್! ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಗೆ ಸರ್ಕಾರದಿಂದ ರಾತ್ರೋ ರಾತ್ರಿ ಬಿಗ್ ಅಪ್ಡೇಟ್
*ಅರ್ಜಿ ಹಾಕುತ್ತಿರುವವರು ತಮ್ಮ ವಾರ್ಡ್ ನಂಬರ್ ಅನ್ನು ಸರಿಯಾಗಿ ಹಾಕಿರಬೇಕು. ಇನ್ನು ಹಳ್ಳಿ ಜನರು ಗ್ರಾಮ ಪಂಚಾಯತ್ ನಲ್ಲಿ ಪಿಹೆಚ್ ಕಾರ್ಡ್ ಗಾಗಿ ತಮ್ಮ ಸಿಟಿ ಅಥವಾ ನಗರಗಳಲ್ಲಿ ನ್ಯಾಯಬೆಲೆ ಅಂಗಡಿಯನ್ನು ಆಯ್ಕೆ ಮಾಡಿಕೊಳ್ಳಬಹುದು..
*2013ರ ರಾಷ್ಟ್ರೀಯ ಭದ್ರತಾ ಕಾಯ್ದೆಯ ನಿಯಮದ ಪ್ರಕಾರ ಮನೆಯ ಹಿರಿಯ ಸದಸ್ಯರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬಹುದು.
*ಅರ್ಜಿ ಹಾಕಿರುವ ಗ್ರಾಹಕರಿಗೆ ಬೇರೆ ಬೇರೆ ಹಂತಗಳಲ್ಲಿ SMS ಕಳಿಸುವ ಮೂಲಕ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ.. ಅರ್ಜಿ ಹಾಕಿರುವವರ ಮನೆಗೆ ವಾಸಸ್ಥಳ ದೃಢೀಕರಣಕ್ಕಾಗಿ ಅಧಿಕಾರಿಗಳು ಬರುವ ಮಹಿತಿವನ್ನು ಕೂಡ ಮೊದಲೇ SMS ಮೂಲಕ ತಿಳಿಸಲಾಗುತ್ತದೆ.
*ರೇಷನ್ ಕಾರ್ಡ್ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿ ಹಾಕಿರುವವರ ಮನೆ ತಲುಪುತ್ತದೆ.
*ಮ್ಯಾಕ್ಸಿಮಮ್ 40 ದಿನಗಳ ಒಳಗೆ ಹೊಸ ರೇಷನ್ ಕಾರ್ಡ್ ಆಹಾರ ಇಲಾಖೆಯಿಂದ ಸಿಗುತ್ತದೆ.
Know these new rules If you have applied for a new ration card