ರಾಜ್ಯದಲ್ಲಿ ಚುನಾವಣೆ ನಡೆಯುವ ವೇಳೆ ಕಾಂಗ್ರೆಸ್ ಸರ್ಕಾರ (Congress Government) ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತು. ಗೆದ್ದು ಅಧಿಕಾರಕ್ಕೆ ಬಂದ ನಂತರ ಆ 5 ಗ್ಯಾರೆಂಟಿ ಯೋಜನೆಗಳನ್ನು ಕೂಡ ಜಾರಿಗೆ ತರಲಾಗುತ್ತಿದೆ.
ಈಗಾಗಲೇ 4 ಯೋಜನೆಗಳು ಜಾರಿಗೆ ಬಂದಿದೆ. ಅದರಲ್ಲಿ ಒಂದು ಪ್ರಮುಖ ಯೋಜನೆ ಗೃಹಜ್ಯೋತಿ ಯೋಜನೆ (Gruha Jyothi Yojana) ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಬಡಜನತೆಗೆ 200 ಯೂನಿಟ್ ಉಚಿತ ವಿದ್ಯುತ್ (Free Electricity) ನೀಡುವ, ಎಲ್ಲರಿಗೂ ಈ ಯೋಜನೆ ತಲುಪುವ ಹಾಗೆ ಮಾಡುವ ಯೋಜನೆಯನ್ನು ಸರ್ಕಾರ ಹೊಂದಿದೆ. ಈ ಯೋಜನೆಯು ಜನರಿಗೆ ಅನುಕೂಲ ನೀಡುತ್ತಿದೆ.
ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿದ್ರೆ ಈ ಹೊಸ ರೂಲ್ಸ್ ತಿಳಿಯಿರಿ! ಹೊಸ ನಿಯಮ ತಂದ ಸರ್ಕಾರ
ಸೇವಾಸಿಂಧು ಪೋರ್ಟಲ್ (Seva Sindhu Portal) ಮೂಲಕ ರಾಜ್ಯದ ಅನೇಕ ಜನರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಬಹುತೇಕ ಜನರು ಈ ಯೋಜನೆಯ ಸೌಲಭ್ಯ ಪಡೆಯುವ ಸಾಧ್ಯತೆ ಇದೆ. ರಾಜ್ಯದ ಜನರಿಗೆ ಕಾಂಗ್ರೆಸ್ ಇಂದ ಈ ಸೌಲಭ್ಯ ಪೂರ್ತಿಯಾಗಿ ಸಿಗುತ್ತದೆ ಎಂದು ಕೂಡ ಹೇಳಲಾಗುವುದಿಲ್ಲ.
ಕಳೆದ ಒಂದು ವರ್ಷದಿಂದ ಆಯಾ ಮನೆಯಲ್ಲಿ ಎಷ್ಟು ಯೂನಿಟ್ ಬಳಕೆ ಆಗಿದೆ ಎನ್ನುವುದನ್ನು ಚೆಕ್ ಮಾಡಿ, ಅದರ ಆವರೇಜ್ ತೆಗೆದು, ಜೊತೆಗೆ 10% ವಿದ್ಯುತ್ ಅನ್ನು ಹೆಚ್ಬುವರಿಯಾಗಿ ಬಳಸಲು ಅನುಮತಿ ಕೊಡಲಾಗುತ್ತದೆ.
ಅಷ್ಟೇ ವಿದ್ಯುತ್ ಬಳಕೆ ಮಾಡಿದರೆ, ಜನರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಒಂದು ವೇಳೆ ಅದಕ್ಕಿಂತ ಹೆಚ್ಚು ಯೂನಿಟ್ ಬಳಕೆ ಮಾಡಿದರೆ ಪೂರ್ತಿ ವಿದ್ಯುತ್ ಬಳಕೆಯ ಹಣ ಕಟ್ಟಬೇಕಾಗುತ್ತದೆ. ಹಾಗೆಯೇ ಈ ಯೋಜನೆಯ ಸೌಲಭ್ಯ ಸಿಗುವುದು ಜನರಿಗೆ, ಮನೆಯಲ್ಲಿ ವಿದ್ಯುತ್ ಬಳಕೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಹೊರತು ವಾಣಿಜ್ಯ ಕಟ್ಟಡಗಳಿಗೆ ಉಚಿತ ವಿದ್ಯುತ್ ಕೊಡಲು ಸಾಧ್ಯ ಆಗುವುದಿಲ್ಲ ಎನ್ನುವುದನ್ನು ಕೂಡ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿತ್ತು.
ಮೊಬೈಲ್‌ಗೆ ಮೆಸೇಜ್ ಬಂದು ಗೃಹಲಕ್ಷ್ಮಿ ಯೋಜನೆ ಹಣ ಅಕೌಂಟ್‌ಗೆ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ
ಒಟ್ಟಿನಲ್ಲಿ ಸಾಮಾನ್ಯ ಗೃಹ ಬಳಕೆಗೆ ವಿದ್ಯುತ್ ಬಳಸುವ ಜನರು ತಾವು ಗೃಹಜ್ಯೋತಿ ಯೋಜನೆಯ ಫಲ ಪಡೆದುಕೊಳ್ಳಬಹುದು ಎಂದು ಬಯಸಿದ್ದರು. ಆದರೆ ಈಗ ಅಂಥ ಎಲ್ಲಾ ಜನರಿಗೆ ದೊಡ್ಡ ಶಾಕ್ ಸಿಕ್ಕಿದೆ.
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಹಾಗೆ ರಾಜ್ಯ ಸರ್ಕಾರದ ಹೊಸ ನಿರ್ಧಾರ ಈಗ ಜನರಿಗೆ ದೊಡ್ಡ ಬದಲಾವಣೆ ಆಗಿ ಪರಿಣಮಿಸಬಹುದು ಎಂದು ಹೇಳಲಾಗುತ್ತಿದೆ. ಇದೀಗ ಗೃಹಜ್ಯೋತಿ ಯೋಜನೆಯ ಬಗ್ಗೆ ಸಿಕ್ಕಿರುವ ಹೊಸ ಅಪ್ಡೇಟ್ ಹಳೆಯ ಬಾಕಿ ಕಟ್ಟುವ ಬಗ್ಗೆ..
ಸರ್ಕಾರದಿಂದ ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಸರ್ಕಾರ ಈ ಮೊದಲೇ ಹಳೆಯ ವಿದ್ಯುತ್ ಬಾಕಿಯನ್ನು 4 ತಿಂಗಳ ಒಳಗೆ ಕ್ಲಿಯರ್ ಮಾಡಬೇಕು ಎಂದು ತಿಳಿಸಿತ್ತು.
ಅದಕ್ಕಾಗಿ ಈಗ ಸೆಪ್ಟೆಂಬರ್ 30ರ ಒಳಗೆ ಹಳೆಯ ಬಾಕಿ ಕ್ಲಿಯರ್ ಮಾಡಬೇಕು ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಕ್ಲಿಯರ್ ಮಾಡದೆ ಇದ್ದರೆ ಅಂಥ ಮನೆಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಸಧ್ಯಕ್ಕೆ ಸೋಷಿಯಲ್ ಮೀಡಿಯಾ ಮತ್ತು ಸುದ್ದಿವಾಹಿನಿಗಳಲ್ಲಿ ಕೇಳಿಬರುತ್ತಿದೆ ಹೊರತು ಅಧಿಕೃತ ಮಾಹಿತಿ ಸಿಕ್ಕಿಲ್ಲ.
The government has changed the rules regarding Gruha Jyothi Yojana
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.