ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡಲು ಬ್ಯಾಂಕ್ ಮುಂದೆ ಕ್ಯೂ ನಿಂತ ಮಹಿಳೆಯರು! ಆದ್ರೆ ಆಗಿದ್ದೇ ಬೇರೆ
ಗೃಹಲಕ್ಷ್ಮಿ ಯೋಜನೆಯ ಹಣ ತಮ್ಮ ಅಕೌಂಟ್ ಗೆ ಬಂದಿದ್ಯಾ ಎಂದು ಚೆಕ್ ಮಾಡಲು ಬ್ಯಾಂಕ್ ಗಳಿಗೆ ಮಹಿಳೆಯರು ಸಾಲು ಸಾಲಾಗಿ ಬರುತ್ತಿದ್ದಾರೆ.
ರಾಜ್ಯದಲ್ಲಿ ಈಗ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹವಾ ಜೋರಾಗಿದೆ. ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಮೈಸೂರಿನಲ್ಲಿ ಬೃಹತ್ ಕಾರ್ಯಕ್ರಮವೇ ನಡೆಯಿತು. ಯೋಜನೆಗೆ ಚಾಲನೆ ಸಿಕ್ಕ ದಿನವೇ, ಎಲ್ಲಾ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಡೆಪಾಸಿಟ್ ಆಗುತ್ತದೆ ಎಂದು ಕೂಡ ಹೇಳಲಾಗಿತ್ತು.
ಅದೇ ಮಾತಿನಂತೆ ಒಂದಷ್ಟು ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ (Bank Account) ಹಣ ವರ್ಗಾವಣೆ ಆಗಿದೆ. ಇನ್ನಷ್ಟು ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿಲ್ಲ (Money Not Deposited To Account).
ಫ್ರೀ ವಿದ್ಯುತ್! ಮನೆಗಳಿಗೆ ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಪಡೆದಿರುವ ಎಲ್ಲರಿಗೂ ಮತ್ತೊಂದು ಅಪ್ಡೇಟ್
ಈ ರೀತಿ ಇದ್ದಾಗ ಗೃಹಲಕ್ಷ್ಮಿ ಯೋಜನೆಯ ಹಣ ತಮ್ಮ ಅಕೌಂಟ್ ಗೆ ಬಂದಿದ್ಯಾ ಎಂದು ಚೆಕ್ ಮಾಡಲು ಬ್ಯಾಂಕ್ ಗಳಿಗೆ ಮಹಿಳೆಯರು ಸಾಲು ಸಾಲಾಗಿ ಬರುತ್ತಿದ್ದಾರೆ. ಚಿಕ್ಕಮಗಳೂರಿನ ಎಂ.ಜಿ ರೋಡ್ ನಲ್ಲಿರುವ ಐಡಿಬಿಐ ಬ್ಯಾಂಕ್ ಗೆ (IDBI Bank) ಬರೋಬ್ಬರಿ 600 ಮಹಿಳೆಯರು ಪಾಸ್ ಬುಕ್ ಎಂಟ್ರಿ ಮಾಡಿಸಿ ಬ್ಯಾಲೆನ್ಸ್ ಚೆಕ್ ಮಾಡಿಸಲು ಬಂದಿದ್ದರು.
ಇವರುಗಳನ್ನು ಕಂಟ್ರೋಲ್ ಮಾಡುವುದಕ್ಕೆ ಸೆಕ್ಯೂರಿಟಿಗು ಕೂಡ ಕಷ್ಟವಾಗಿತ್ತು. ಈ ಥರದ ಪರಿಸ್ಥಿತಿ ಈಗ ಗೃಹಲಕ್ಷ್ಮಿ ಯೋಜನೆಯಿಂದ ಎದುರಾಗಿದೆ. ಒಂದಷ್ಟು ಮಹಿಳೆಯರಿಗೆ ಇನ್ನು ಯಾಕೆ ಗೃಹಲಕ್ಷ್ಮಿ ಯೋಜನೆಯ ಹಣ ಕ್ರೆಡಿಟ್ ಆಗಿಲ್ಲ (Not Credited) ಎನ್ನುವುದಕ್ಕೆ ಉತ್ತರ ಕೂಡ ಇದ್ದು, ಇದಕ್ಕೆ ಕಾರಣ ರೇಷನ್ ಕಾರ್ಡ್ ನಲ್ಲಿ ಹೆಸರು ಸರಿಯಾಗಿ ಅಪ್ಡೇಟ್ ಆಗದೆ ಇರುವುದು ಕೂಡ ಇರಬಹುದು.
2 ಎಕರೆಗಿಂತ ಕಡಿಮೆ ಭೂಮಿ ಇರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ! 4 ಲಕ್ಷದ ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ
ಇಂತಹವರ ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ಗೆ ಬಂದರೂ ಕೈಗೆ ಸಿಗೋಲ್ಲ! ಬ್ಯಾಂಕ್ ಹೊಸ ನಿರ್ಧಾರ
ಒಂದು ವೇಳೆ ರೇಷನ್ ಕಾರ್ಡ್ ನಲ್ಲಿ ಒಂದು ಹೆಸರಿದ್ದು ಆಧಾರ್ ಕಾರ್ಡ್ ನಲ್ಲಿ (Aadhaar Card) ಇನ್ನೊಂದು ಹೆಸರಿದ್ದು ಮ್ಯಾಚ್ ಆಗದೆ ಇರುವವರಿಗೆ ಅಂಥವರಿಗೂ ಕೂಡ ಹೆಸರು ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿಲ್ಲ ಎಂದರೆ, ಇದೆಲ್ಲವನ್ನು ಅಪ್ಡೇಟ್ ಮಾಡಿಸಿ ನಂತರ ಅರ್ಜಿ ಸಲ್ಲಿಸಬಹುದು.
Women queuing in front of the bank to check Gruha lakshmi Yojana money
Follow us On
Google News |