ಬಸ್ ಪ್ರಯಾಣಕ್ಕೆ ಈಗ ನಮ್ಮ ರಾಜ್ಯದಲ್ಲಿ ಭಾರಿ ಬೇಡಿಕೆ ಇದೆ. ಶಕ್ತಿ ಯೋಜನೆ (Shakti Scheme) ಶುರುವಾದಾಗಿನಿಂದ ಎಲ್ಲಾ ಹೆಣ್ಣುಮಕ್ಕಳು ಕೂಡ ಬಸ್ ನಲ್ಲಿಯೇ ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ರಾಜ್ಯದ ಹೆಣ್ಣುಮಕ್ಕಳು ಹಣ ನೀಡದೆ, ಉಚಿತವಾಗಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡುತ್ತಿದ್ದಾರೆ.
ಹೀಗೆ ಸರ್ಕಾರಿ ಬಸ್ ಗಳನ್ನು ಬಳಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಒಂದು ರೀತಿ ಸರ್ಕಾರಕ್ಕೆ ಒಳ್ಳೆಯದು ಕೂಡ ಹೌದು.
ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡಲು ಬ್ಯಾಂಕ್ ಮುಂದೆ ಕ್ಯೂ ನಿಂತ ಮಹಿಳೆಯರು! ಆದ್ರೆ ಆಗಿದ್ದೇ ಬೇರೆ
ಇನ್ನು ಬಸ್ ನಲ್ಲಿ ಪ್ರಯಾಣ ಮಾಡುವುದು ಎಂದರೆ ಸಾಮಾನ್ಯವಾಗಿ ಚೇಂಜ್ ಗಾಗಿ ಎಲ್ಲಾ ಕಡೆ ಸಮಸ್ಯೆ ಆಗುತ್ತದೆ. ಈಗ ಮಹಿಳೆಯರಿಗೆ ಫ್ರೀ ಬಸ್ ಇರುವುದರಿಂದ ಅವರಿಗೆ ಚಿಲ್ಲರೆ ಸಮಸ್ಯೆ ಎದುರಾಗುತ್ತಿಲ್ಲ, ಅದರೆ ಪುರುಷರಿಗೆ ಇನ್ನು ಕೂಡ ಆ ಸಮಸ್ಯೆ ಕಾಡುತ್ತಿದೆ.
ಕಂಡಕ್ಟರ್ ಗಳ ಜೊತೆಗೆ ಟಿಕೆಟ್ ಗೆ ಸರಿಯಾದ ಚೇಂಜ್ ಸಿಗದ ಕಾರಣ ಪುರುಷರು ಮತ್ತು ಬಸ್ ಕಂಡಕ್ಟರ್ ಗಳ ನಡುವೆ ಜಗಳ ಆಗುತ್ತಿದ್ದು, ಇಂಥ ಹಲವು ಘಟನೆಗಳು ಬೆಳಕಿಗೆ ಬರುತ್ತಲೇ ಇದೆ.
ಇದು ಸಾಮಾನ್ಯ ಸಮಸ್ಯೆಯ ಹಾಗೆ ಕಾಣಿಸಿದರು ಕೂಡ, ಒಂದು ರೀತಿ ಇದು ಗಂಭೀರ ಸಮಸ್ಯೆ ಕೂಡ ಹೌದು. ಹೀಗಿದ್ದಾಗ ಚಿಲ್ಲರೆ ಸಮಸ್ಯೆಗಳು, ಟಿಕೆಟ್ ವಿಚಾರಕ್ಕೆ ಪ್ರಯಾಣಿಕರು ಮತ್ತು ಬಸ್ ಕಂಡಕ್ಟರ್ ಗಳ ನಡುವೆ ನಿರಂತರವಾಗಿ ನಡೆಯುತ್ತಲೇ ಇರುವ ಈ ಸಮಸ್ಯೆಗೆ ಒಂದು ಬ್ರೇಕ್ ಹಾಕುವುದಕ್ಕೆ ಈಗ ಸರ್ಕಾರ ನಿರ್ಧಾರ ಮಾಡುತ್ತಿದೆ.
ಇದಕ್ಕಾಗಿ ಪುರುಷರಿಗೆ ಹಾಗೂ ಇತರ ಪ್ರಯಾಣಿಕರಿಗೆ ಅನುಕೂಲ ಆಗುವ ಹಾಗೆ ಒಂದು ಯೋಜನೆಯನ್ನು ಜಾರಿಗೆ ತರಲು ಪ್ಲಾನ್ ಮಾಡಿದೆ.
ಫ್ರೀ ವಿದ್ಯುತ್! ಮನೆಗಳಿಗೆ ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಪಡೆದಿರುವ ಎಲ್ಲರಿಗೂ ಮತ್ತೊಂದು ಅಪ್ಡೇಟ್
ಅದೇನು ಎಂದರೆ, ಇನ್ನುಮುಂದೆ ಸರ್ಕಾರಿ ಬಸ್ ಗಳಲ್ಲಿ ಟಿಕೆಟ್ ಪಾವತಿ (Bus Ticket) ಮಾಡುವುದಕ್ಕೆ, ಚಿಲ್ಲರೆ ಪಡೆಯುವುದಕ್ಕೆ ಯಾವುದೇ ಸಮಸ್ಯೆ ಉಂಟಾಗಬಾರದು ಎಂದು ಈ ಒಂದು ನಿರ್ಧಾರ ಮಾಡಲಾಗಿದ್ದು, ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರವು ಈಗ ಸಾರಿಗೆ ಇಲಾಖೆಯ ಬಸ್ ಗಳಲ್ಲಿ UPI Scanner Code ಗಳನ್ನು ಹಾಕಲು ನಿರ್ಧಾರ ಮಾಡಿದೆ.
ಇಂತಹವರ ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ಗೆ ಬಂದರೂ ಕೈಗೆ ಸಿಗೋಲ್ಲ! ಬ್ಯಾಂಕ್ ಹೊಸ ನಿರ್ಧಾರ
ಈ ಮೂಲಕ ಸ್ಕ್ಯಾನ್ ಮಾಡಿ ಸುಲಭವಾಗಿ ಟಿಕೆಟ್ ಹಣ ಪಾವತಿ ಮಾಡಬಹುದು. ದೊಡ್ಡ ಸಮಸ್ಯೆಗೆ ಇದು ಒಳ್ಳೆಯ ಪರಿಹಾರ ಎಂದು ಹೇಳಬಹುದು.
ಬಸ್ ಗಳಲ್ಲಿ ಟಿಕೆಟ್ ಪಡೆಯಲು ಹೆಚ್ಚಿಗೆ ಹಣ ಕೊಟ್ಟಾಗ, ವಾಪಸ್ ಕೊಡಲು ಚೇಂಜ್ ಇಲ್ಲದೆ, ಸರಿಯಾದ ಚೇಂಜ್ ಸಿಗದೆ ಜಗಳಗಳು ಉಂಟಾಗುತ್ತಿದ್ದವು. ಆದರೆ ಇನ್ನುಮುಂದೆ ಆ ಸಮಸ್ಯೆ ಇರುವುದಿಲ್ಲ.
ಪ್ರಯಾಣಿಕರು ಯುಪಿಐ ಮೂಲಕ ಹಣ ಪಾವತಿ ಮಾಡಿ ಸುಲಭವಾಗಿ ಟಿಕೆಟ್ ಪಡೆಯಬಹುದು. ಇದರಿಂದಾಗಿ ಯಾವುದೇ ತೊಂದರೆ ಆಗುವುದಿಲ್ಲ. ಫೋನ್ ಪೇ (Phonpe), ಗೂಗಲ್ ಪೇ (Google Pay), ಪೇಟಿಎಂ (Paytm) ಇಂದ ಹಣ ಪಾವತಿ ಮಾಡಬಹುದು.
UPI Scanner System Implement in KSRTC Bus
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.