Bangalore News

ನಾಯಿ ಸಾಕಿರುವ ಬೆಂಗಳೂರು ಜನಕ್ಕೆ BBMP ಹೊಸ ರೂಲ್ಸ್! ರಾತ್ರೋರಾತ್ರಿ ಜಾರಿಗೊಂಡ ಹೊಸ ನಿಯಮ

ಇದನ್ನು ಫ್ಯಾಷನ್ (fashion) ಅಂತನಾದ್ರೂ ಕರೀಬಹುದು ಅಥವಾ ಕ್ರೇಜ್ (Craze) ಅಂತಾನೂ ಅನ್ನಬಹುದು. ಅದರೆ ಈ ಅಭ್ಯಾಸ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಿದೆ. ಅದರಲ್ಲೂ ನಗರ ಭಾಗಗಳಲಿಯೇ (Urban) ಹೆಚ್ಚು.

ಅದುವೇ ನಾಯಿ (Dog) ಗಳನ್ನು ಸಾಕುವ ಅಭ್ಯಾಸ. ಇಂದು, ಮನುಷ್ಯರನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನಾಯಿಯನ್ನು ಜನ ಪ್ರೀತಿಸುತ್ತಾರೆ ಅಂದರೆ ತಪ್ಪಾಗಲಿಕ್ಕಿಲ್ಲ. ನಗರದಲ್ಲಿ ಬಹುತೇಕ ಎಲ್ಲಾ ಮನೆಯಲ್ಲೂ ನಾಯಿ ಸಾಕುವುದನ್ನು ನೋಡಬಹುದು.

BBMP new rules for dog owners in Bengaluru

ಆದರೆ ಹೀಗೆ ನಾಯಿ ಸಾಕುವವರು ಇನ್ನು ಮುಂದೆ ಈ ಹೊಸ ನಿಯಮದ (New Rules) ಬಗ್ಗೆ ತಿಳಿದುಕೊಳ್ಳಲೇಬೇಕು. ಇಲ್ಲವಾದರೆ ಶ್ವಾನ ಪ್ರಿಯರು (Dog Lovers) ನಾಯಿ ಸಾಕುವುದಕ್ಕೆ ಯೋಚನೆ ಮಾಡಬೇಕಾಗುತ್ತೆ!

ಕಡೆಗೂ ಬಿಡುಗಡೆಯಾಯ್ತು BPL ಕಾರ್ಡ್ ರದ್ದಾದವರ ಪಟ್ಟಿ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ

ನಾಯಿ ಸಾಕುವುದಕ್ಕೂ ಇದೆ ನಿಯಮ!

ಹೌದು ನೀವು ಶ್ವಾನ ಪ್ರಿಯರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ ನಿಮ್ಮ ಮನೆಯಲ್ಲಿ ಒಂದೇ ಒಂದು ನಾಯಿ ಸಾಕಿದ್ರು ಸಾಕು ನಿಮಗೆ ಈ ನಿಯಮ ಅಪ್ಲೈ ಆಗುತ್ತದೆ. ಸದ್ಯದಲ್ಲಿಯೇ ಬಿ ಬಿ ಎಂ ಪಿ (BBMP)- ಬೆಂಗಳೂರು ಮಹಾನಗರ ಪಾಲಿಕೆ, ಸರ್ಕಾರಕ್ಕೆ ಈ ಹೊಸ ನಿಯಮದ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ತಕ್ಷಣವೇ ಈ ಯೋಜನೆ ಜಾರಿಗೆ ಬರಲಿದೆ.

ಬೆಂಗಳೂರು ನಗರದಲ್ಲಿ ಶ್ವಾನ ಸಾಕುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ವಿವಿಧ ತಳಿಯ ನಾಯಿಗಳನ್ನು ಸಾಕುವುದು ಮಾರಾಟ ಮಾಡುವುದು ಕೂಡ ಹೆಚ್ಚಾಗಿದೆ.

ಹೀಗೆ ಶ್ವಾನ ಮಾರಾಟ ಪ್ರಕ್ರಿಯೆಯಲ್ಲಿ ಮೋಸ ಆಗಬಾರದು ಎನ್ನುವ ಕಾರಣಕ್ಕೆ ಹೊಸ ನಿಯಮದ ಪ್ರಸ್ತಾವನೆಯನ್ನು ಬಿಬಿಎಂಪಿ ಸರ್ಕಾರದ ಮುಂದೆ ಇಟ್ಟಿದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ನಾಯಿಗಳ ಸಮೀಕ್ಷೆ ನಡೆಸಿದ್ದು, ಶ್ವಾನ ಪ್ರಿಯರಿಗೆ ಈ ನಿಯಮ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದೆ.

ಫ್ರೀ ವಿದ್ಯುತ್! ಮನೆಗಳಿಗೆ ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಪಡೆದಿರುವ ಎಲ್ಲರಿಗೂ ಮತ್ತೊಂದು ಅಪ್ಡೇಟ್

New Rules For Dog Ownersಬಿಬಿಎಂಪಿ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಏನಿದೆ?

ಇನ್ನು ಮುಂದೆ ನಾಯಿ ಸಾಕುವುದು ಹಾಗೂ ಮಾರಾಟ ಮಾಡುವುದು ಎಲ್ಲವೂ ಸ್ಥಳೀಯ ಅಧಿಕಾರಿಗಳಿಂದ ಅನುಮೋದನೆ ಪಡೆದುಕೊಂಡಿರಬೇಕು. ಇನ್ನು ಎರಡನೆಯದಾಗಿ ನಾಯಿಗಳಿಗೆ ಕಡ್ಡಾಯವಾಗಿ ರೇಬಿಸ್ ಲಸಿಕೆಯನ್ನು ಹಾಕಿಸಿರಲೇಬೇಕು.

ಮೂರನೆಯದಾಗಿ ನಗರ ಭಾಗದಲ್ಲಿ ಒಂದು ಮನೆಯಲ್ಲಿ ಒಂದು ನಾಯಿ ಸಾಕಲು ಮಾತ್ರ ಅನುಮತಿ ಕೊಡಬೇಕು, ಹಾಗೆಯೇ ಸಾಕು ನಾಯಿಗಳನ್ನು ಬೀದಿಗೆ ಬಿಡುವಂತಿಲ್ಲ. ಮನುಷ್ಯರ ಹಾಗೂ ಇತರ ನಾಯಿಗಳ ಸುರಕ್ಷತಾ ದೃಷ್ಟಿಯಿಂದ ಸಾಕಿದ ನಾಯಿಗೆ ಪ್ರತಿ ತಿಂಗಳು ಲಸಿಕೆ ಹಾಕಿಸುವುದು ಅದರ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಕಡ್ಡಾಯ.

ಬಿಬಿಎಂಪಿ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಈ ಮೇಲಿನ ವಿಚಾರಗಳ ಬಗ್ಗೆ ಹೇಳಲಾಗಿದ್ದು, ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ಶ್ವಾನ ಪ್ರಿಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ಒಂದಕ್ಕಿಂತ ಹೆಚ್ಚು ನಾಯಿ ಸಾಕಿದ್ದರೆ ಮಾತ್ರ ನಿರಾಸೆಯಾಗಬಹುದು.

BBMP new rules for dog owners in Bengaluru

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories