ಗೃಹಜ್ಯೋತಿ, ಗೃಹಲಕ್ಷ್ಮಿ ನಂತರ ಅಂಥದ್ದೇ ಮತ್ತೊಂದು ಯೋಜನೆ ತರಲು ಮುಂದಾದ ಸರ್ಕಾರ
ಗೃಹಲಕ್ಷ್ಮಿ ಯೋಜನೆ ಕಳೆದ ವಾರ ಜಾರಿಗೆ ಬಂದಿದ್ದು, ಈ ಯೋಜನೆಯ ಮೂಲಕ ಹೆಣ್ಣು ಮಕ್ಕಳಿಗೆ 2000 ರೂಪಾಯಿ ಪ್ರತಿ ತಿಂಗಳು ಸಿಗುತ್ತಿದೆ. ಇನ್ನು ಗೃಹಜ್ಯೋತಿ ಯೋಜನೆಯ ಮೂಲಕ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡಲಾಗುತ್ತಿದೆ
ರಾಜ್ಯದ ಜನತೆಯ ನಂಬಿಕೆಯನ್ನು ತಮ್ಮ ಭರವಸೆಯಿಂದಲೇ ಪಡೆದುಕೊಂಡಿರುವ ಕಾಂಗ್ರೆಸ್ ಸರ್ಕಾರವು, ಆ ಭರವಸೆಯನ್ನು ಉಳಿಸಿಕೊಳ್ಳುತ್ತಿದೆ. ತಾವು ನೀಡಿದ್ದ 5 ಭರವಸೆಗಳಲ್ಲಿ 4 ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದು, ಜನರಿಗೆ ಅದರ ಉಪಯೋಗವನ್ನು ನೀಡುವ ಮೂಲಕ ಜನರ ನಂಬಿಕೆಯನ್ನು ಸುಳ್ಳು ಮಾಡದೆ ನಡೆಯುತ್ತಿದೆ. ಇದೇ ಕಾರಣಕ್ಕೆ ಜನರು ಕೂಡ ಕಾಂಗ್ರೆಸ್ ಪಕ್ಷವನ್ನು ನಂಬುತ್ತಿದ್ದಾರೆ. ಸರ್ಕಾರದ 4 ಯೋಜನೆಗಳು ಈಗ ಯಶಸ್ವಿಯಾಗಿ ಜಾರಿಯಾಗಿದೆ.
ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಕಳೆದ ವಾರ ಜಾರಿಗೆ ಬಂದಿದ್ದು, ಈ ಯೋಜನೆಯ ಮೂಲಕ ಹೆಣ್ಣು ಮಕ್ಕಳಿಗೆ 2000 ರೂಪಾಯಿ ಪ್ರತಿ ತಿಂಗಳು ಸಿಗುತ್ತಿದೆ (To Bank Account). ಇನ್ನು ಗೃಹಜ್ಯೋತಿ ಯೋಜನೆಯ (Gruha Jyothi Scheme) ಮೂಲಕ ಉಚಿತವಾಗಿ 200 ಯೂನಿಟ್ ವಿದ್ಯುತ್ (Free Electricity) ನೀಡಲಾಗುತ್ತಿದೆ..
ಗೃಹಜ್ಯೋತಿ ಯೋಜನೆ ಶುರುವಾದ ಒಂದೇ ತಿಂಗಳಿಗೆ ಸರ್ಕಾರದಿಂದ ಹೊಸ ನಿಯಮ! ಧಿಡೀರ್ ಬದಲಾವಣೆ
ಇನ್ನು ಶಕ್ತಿ ಯೋಜನೆಯಲ್ಲಿ ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಕೂಡ ಬಸ್ ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ. ಯುವನಿಧಿ ಯೋಜನೆ (Yuva Nidhi Yojane) ಈ ವರ್ಷಾಂತ್ಯಕ್ಕೆ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ ಇದೇ ಹೆಸರಿನಲ್ಲಿ ಮತ್ತೊಂದು ಹೊಸ ಯೋಜನೆ ತರುವುದಕ್ಕೆ ಮುಂದಾಗಿದೆ ಸರ್ಕಾರ. ಈ ಮೂಲಕ ಜನರ ಅಭಿವೃದ್ಧಿಗೆ ಸರ್ಕಾರ ಒತ್ತು ಕೊಡುತ್ತಿದೆ.
5 ಯೋಜನೆಗಳು ಮಾತ್ರವಲ್ಲದೆ ಇನ್ನು ಕೆಲವು ಹೊಸ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಮುಂದಾಗಿದೆ. ಇದೀಗ ಸರ್ಕಾರದ ಹೊಸ ಪ್ಲಾನ್ ಗೆ ಸೇರಿಕೊಳ್ಳುವುದು ನ್ಯಾಷನಲ್ ಹೆಲ್ತ್ ಸ್ಕೀಮ್ ಆಗಿದೆ.
ಇದನ್ನು ರಾಷ್ಟ್ರೀಯ ಆರೋಗ್ಯ ಯೋಜನೆ (National Health Scheme) ಎಂದು ಕೂಡ ಕರೆಯುತ್ತಾರೆ. ನಮ್ಮ ರಾಜ್ಯದಲ್ಲಿ ಇದನ್ನು ಗೃಹ ಆರೋಗ್ಯ ಯೋಜನೆ (Gruha Arogya scheme) ಎಂದು ಕರೆಯಲಾಗುತ್ತಿದ್ದು, ಈ ಯೋಜನೆಯ ಮೂಲಕ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಈಗ ಸರ್ಕಾರದಲ್ಲಿ ಚರ್ಚೆಗಳು ಶುರುವಾಗಿದೆ.. ಹಾಗೆಯೇ ಕ್ಯಾಬಿನೆಟ್ ನಲ್ಲಿ ಇದಕ್ಕಾಗಿ ಒಪ್ಪಿಗೆ ಪಡೆಯುವ ಕೆಲಸ ಶುರುವಾಗಿದೆ.
ಇನ್ಮುಂದೆ ಸ್ಮಾರ್ಟ್ ರೇಷನ್ ಕಾರ್ಡ್ ಇದ್ರೆ ಮಾತ್ರ ರೇಷನ್ ಸಿಗೋದು! ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ
ಈ ಯೋಜನೆಯ ಶುರುವಿನ ಹಂತದಲ್ಲಿ ಈಗ ರಾಜ್ಯದ 8 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಗೃಹ ಆರೋಗ್ಯ ಯೋಜನೆಯಿಂದ ಜನರ ಮನೆಯ ಬಾಗಿಲಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹೋಗಿ ಅವರ ಆರೋಗ್ಯವನ್ನು ಚೆಕ್ ಮಾಡುತ್ತಾರೆ.
ಜನರು ಸಾಮಾನ್ಯವಾಗಿ ಬಿಪಿ, ಶುಗರ್, ಹೈಪರ್ ಟೆನ್ಷನ್ ಇಂಥ ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ..ಆದರೆ ಅಂಥ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಹಾಗಾಗಿ ಜನರ ಮನೆಗೆ ಹೋಗಿ ಈ ಸಮಸ್ಯೆಗಳನ್ನು ಚೆಕ್ ಮಾಡಿ, ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ. ರೋಗಗಳು ಶುರುವಾಗುವ ಮೊದಲೇ ಅವುಗಳಿಗೆ ಚಿಕಿತ್ಸೆ ನೀಡುವ ಪ್ರಯತ್ನ ಇದಾಗಿದೆ.
ನಾಯಿ ಸಾಕಿರುವ ಬೆಂಗಳೂರು ಜನಕ್ಕೆ BBMP ಹೊಸ ರೂಲ್ಸ್! ರಾತ್ರೋರಾತ್ರಿ ಜಾರಿಗೊಂಡ ಹೊಸ ನಿಯಮ
ಇಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಥವಾ ಆಶಾ ಕಾರ್ಯಕರ್ತೆಯರು ನಿಮ್ಮ ಮನೆಗೆ ಬಂದು, ನಿಮ್ಮ ಆರೋಗ್ಯವನ್ನು ಚೆಕ್ ಮಾಡುತ್ತಾರೆ. ಸಣ್ಣ ಸಮಸ್ಯೆಗಳು ಉಂಟಾದರೇ, ಅವರಿಗೆ ಅಲ್ಲಿಯೇ ಚಿಕಿತ್ಸೆ ಕೊಡುತ್ತಾರೆ.
ಅಥವಾ ಗಂಭೀರವಾದ ಸಮಸ್ಯೆ ಇದೆ ಎಂದು ಅನ್ನಿಸಿದರೆ, ಆಸ್ಪತ್ರೆಗೆ ಬರುವುದಕ್ಕೆ ಹೇಳುತ್ತಾರೆ.. ಈ ಮೂಲಕ ಜನರ ಆರೋಗ್ಯದ ಬಗ್ಗೆ ಕಾಳಜಿ ಹಾಗೂ, ರೋಗ ಶುರು ಆಗುವುದಕ್ಕಿಂತ ಮೊದಲೇ ಜಾಗ್ರತೆಯಿಂದ ಇರುವ ಪ್ರಯತ್ನ ಆಗಿದೆ. ರಾಜ್ಯ ಸರ್ಕಾರದ 5 ಯೋಜನೆಗಳ ಜೊತೆಗೆ ಈ ಯೋಜನೆ ಕೂಡ ಸೇರುವ ಹಾಗೆ ಕಾಣಿಸುತ್ತಿದೆ..
After Gruha Jyothi, Gruha Lakshmi, the government has come up with another scheme