ಹೊಸ ವಾಹನ ಖರೀದಿ ಮಾಡುವವರಿಗೆ 3 ಲಕ್ಷ ಸಹಾಯಧನ ನೀಡಲು ಮುಂದಾದ ಸರ್ಕಾರ! ಇಂದೇ ಅಪ್ಲೈ ಮಾಡಿ

ಈ ಯೋಜನೆಯ ಅಡಿಯಲ್ಲಿ ಗೂಡ್ಸ್ ವಾಹನ, ಆಟೋ, ಟ್ಯಾಕ್ಸಿ ಖರೀದಿ ಮಾಡುವವರಿಗೆ ವಾಹನದ ಮೊತ್ತ ಎಷ್ಟಿದೆಯೋ ಅದರ ಮೇಲೆ 50% ಸಬ್ಸಿಡಿ ಅಥವಾ ಮ್ಯಾಕ್ಸಿಮಮ್ 3 ಲಕ್ಷ ರೂಪಾಯಿಯವರೆಗು ಸಹಾಯ ಧನ ಸಿಗುತ್ತದೆ.

ಜೀವನ ಸಾಗಿಸಲು ವಾಹನಗಳನ್ನು ಬಳಸುವವರಿಗೆ ಅಂದರೆ ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನಗಳನ್ನು ಖರೀದಿಸಲು ಬಯಸುತ್ತಿರುವವರಿಗೆ ಈಗ ಸರ್ಕಾರದಿಂದಲೇ ಸಬ್ಸಿಡಿ (Vehicle Subsidy) ಸಹಾಯ ಸಿಗಲಿದೆ.

ಈ ಯೋಜನೆಯ ಮೂಲಕ ಇದೇ ವೃತ್ತಿ ಮಾಡುತ್ತಿರುವವರಿಗೆ ಸಹಾಯ ಆಗುತ್ತದೆ. ಹಾಗಿದ್ದರೆ ಈ ಯೋಜನೆಯ ಮೂಲಕ ಸಬ್ಸಿಡಿ ಸೌಲಭ್ಯವನ್ನು ಹೇಗೆ ಪಡೆಯುವುದು ಎಂದು ತಿಳಿಸುತ್ತೇವೆ ನೋಡಿ..

ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಯೋಜನೆಯ ಅಡಿಯಲ್ಲಿ ಗೂಡ್ಸ್ ವಾಹನ (Goods Vehicle), ಆಟೋ (Auto), ಟ್ಯಾಕ್ಸಿ (Taxi) ಖರೀದಿ ಮಾಡುವವರಿಗೆ ವಾಹನದ ಮೊತ್ತ ಎಷ್ಟಿದೆಯೋ ಅದರ ಮೇಲೆ 50% ಸಬ್ಸಿಡಿ ಅಥವಾ ಮ್ಯಾಕ್ಸಿಮಮ್ 3 ಲಕ್ಷ ರೂಪಾಯಿಯವರೆಗು ಸಹಾಯ ಧನ ಸಿಗುತ್ತದೆ.

ಹೊಸ ವಾಹನ ಖರೀದಿ ಮಾಡುವವರಿಗೆ 3 ಲಕ್ಷ ಸಹಾಯಧನ ನೀಡಲು ಮುಂದಾದ ಸರ್ಕಾರ! ಇಂದೇ ಅಪ್ಲೈ ಮಾಡಿ - Kannada News

ಗೃಹಲಕ್ಷ್ಮಿ ಯೋಜನೆ ಚಾಲನೆಗೂ ಮೊದಲೇ ರೇಷನ್ ಕಾರ್ಡ್ ಇಲ್ಲದವರಿಗೆ, ಇನ್ನೂ ಅರ್ಜಿ ಸಲ್ಲಿಸದವರಿಗೆ ಸಿಹಿ ಸುದ್ದಿ

ಇದನ್ನು ಹೊರತುಪಡಿಸಿದ ಹಣವನ್ನು ಬ್ಯಾಂಕ್ ಇಂದ ಸಾಲ (Bank Loan) ಪಡೆಯುವ ಬಗ್ಗೆ ಬ್ಯಾಂಕ್ ಗೆ ನೀವು ಪತ್ರ ಬರೆದು ಕೊಡಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ಈ ಯೋಜನೆಯ ಹೆಸರು ಸ್ವಾವಲಂಬಿ ಸಾರಥಿ ಯೋಜನೆ, ಇಲ್ಲಿ ನಿಮಗೆ ವಾಹನದ ಮೇಲೆ 50% ಹಣ ಅಥವಾ ₹3,00,000 ವರೆಗು ಸಬ್ಸಿಡಿ ಸಿಗುತ್ತದೆ. 18 ರಿಂದ 55 ವರ್ಷಗಳ ಒಳಗಿನವರು ಈ ಯೋಜನೆಗೆ ಅಪ್ಲೈ ಮಾಡಬಹುದು.

ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಈ ಯೋಜನೆ ಸೌಲಭ್ಯ ಸಿಗುತ್ತದೆ. ಈ ವೆಹಿಕಲ್ ಸಬ್ಸಿಡಿ (Vehicle Loan Subsidy) ಪಡೆಯಲು ಬೇಕಾಗುವ ಅರ್ಹತೆಗಳು ಹೀಗಿದೆ..

ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ! ₹2000 ಹಣ ಸಿಗುವುದು ಈ ಮಹಿಳೆಯರಿಗೆ ಮಾತ್ರ, ಡಿಬಿಟಿ ಮೂಲಕ ಹಣ ಜಮೆ

*ಅರ್ಜಿ ಹಾಕುವವರು ಅಲ್ಪ ಸಂಖ್ಯಾತರ ವರ್ಗಕ್ಕೆ ಸೇರಿದವರಾಗಿರಬೇಕು.

*ಅರ್ಜಿದಾರರು ಕರ್ನಾಟಕದಲ್ಲಿ ವಾಸ ಮಾಡುವವರಾಗಿರಬೇಕು.

*18 ರಿಂದ 55 ವರ್ಷಗಳ ಒಳಗೆ ಇರಬೇಕು.

*ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹4,50,00 ರೂಪಾಯಿಗಳ ಒಳಗೆ ಇರಬೇಕು.

*ಅರ್ಜಿ ಹಾಕುವವರ ಹತ್ತಿರ RTO ಇಂದ ಕೊಡುವ ಲೈಸೆನ್ಸ್ ಇರಬೇಕು.

*ಅರ್ಜಿ ಹಾಕುವವರು ಅಥವಾ ಅವರ ಕುಟುಂಬದವರು ಹಿಂದಿನ 5 ವರ್ಷಗಳಲ್ಲಿ ಸರ್ಕಾರದಿಂದ ಬೇರೆ ಯಾವುದೇ ಸಾಲ ಪಡೆದಿರಬಾರದು.

ಅರ್ಜಿ ಹಾಕಲು ಬೇಕಾಗುವ ದಾಖಲೆಗಳು

*ಕ್ಯಾಸ್ಟ್ ಸರ್ಟಿಫಿಕೇಟ್

*ಇನ್ಕಮ್ ಸರ್ಟಿಫಿಕೇಟ್

*ಆಧಾರ್ ಕಾರ್ಡ್ ಕಾಪಿ

*ಡ್ರೈವಿಂಗ್ ಲೈಸೆನ್ಸ್

*ಬ್ಯಾಂಕ್ ಪಾಸ್ ಬುಕ್ ಕಾಪಿ

*ವೆಹಿಕಲ್ ನ ದರ ಎಷ್ಟು ಎನ್ನುವ ಮಾಹಿತಿ

*ಸ್ವಯಂ ಘೋಷಣೆ ಪತ್ರ

*2 ಪಾಸ್ ಪೋರ್ಟ್ ಸೈಜ್ ಫೋಟೋ

*ಅರ್ಜಿ ಹಾಕುವವರು ಮತ್ತು ಅವರ ಮನೆಯವರು ಸರ್ಕಾರದ ಬೇರೆ ಸಾಲ ಸೌಲಭ್ಯ ಪಡೆದಿಲ್ಲ ಎಂದು ದೃಢೀಕರಣ ಆಗಿರುವ ಪತ್ರ ಜಿಲ್ಲಾ ವ್ಯವಸ್ಥಾಪಕರಿಂದ ಸಿಗಬೇಕು.

*ಸಾರಥಿ ಯೋಜನೆಯ ಅಡಿಯಲ್ಲಿ ವಾಹನ ಪಡೆದಿರುವವರು ಯಾರಿಗೂ ಪರಭಾರೆ ಮಾಡಿಲ್ಲ ಎನ್ನುವುದಕ್ಕೆ ಪತ್ರ.

ಗೃಹಲಕ್ಷ್ಮಿ ಹಣ ಬಂದಿರುವ ಸ್ಟೇಟಸ್ ಚೆಕ್ ಮಾಡಿ! ಗೃಹಲಕ್ಷ್ಮಿಯರ ಖಾತೆಗೆ ಇಂದೇ 2 ಸಾವಿರ ರೂಪಾಯಿ ಹಣ ವರ್ಗಾವಣೆ ಪ್ರಕ್ರಿಯೆ ಆರಂಭ

ಈ ಯೋಜನೆಯ ಆಯ್ಕೆ ಸಮಿತಿ ಹೀಗಿದೆ.. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಾಧ್ಯಕ್ಷರರಾಗಿರುತ್ತಾರೆ, ಸಂಬಂಧಪಟ್ಟ ಜಿಲ್ಲೆಯ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು ಸದಸ್ಯರಾಗಿರುತ್ತಾರೆ, ಸಂಬಂಧಪಟ್ಟ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸದಸ್ಯರಾಗಿರುತ್ತಾರೆ, ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. 6.ಸಂಬಂಧಪಟ್ಟ ಜಿಲ್ಲೆಯ ಕ.ಅ.ಅ.ನಿಗಮದ ಜಿಲ್ಲಾ ವ್ಯವಸ್ಥಾಪಕರು ಸದಸ್ಯ ಕಾರ್ಯದರ್ಶಿ ಆಗುತ್ತಾರೆ.

ಈ ಯೋಜನೆಗೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

https://kmdconline.karnataka.gov.in/Portal/login ಇದು ಅರ್ಜಿ ಸಲ್ಲಿಸುವ ಲಿಂಕ್ ಆಗಿದೆ. 2023ರ ಸೆಪ್ಟೆಂಬರ್ 25ರ ಒಳಗೆ ಅರ್ಜಿ ಸಲ್ಲಿಸಬೇಕು.

Govt to give Rs 3 lakh subsidy to new vehicle buyers

Follow us On

FaceBook Google News

Govt to give Rs 3 lakh subsidy to new vehicle buyers