ರಾಜ್ಯದ ಮಹಿಳೆಯರು ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಇಂದು ಚಾಲನೆ ಸಿಗುತ್ತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ, ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ (Gruha Lakshmi Yojana Launch) ಸಿಗಲಿದೆ.
ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ಹಾಗೂ ಸುತ್ತಮುತ್ತಲಿನ ರಾಜ್ಯಗಳ ಜನರು ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇಂದೇ ಹಣ ವರ್ಗಾವಣೆ ಆಗುತ್ತದೆ, ಒಂದು ವೇಳೆ ಸರ್ವರ್ ಸಮಸ್ಯೆ ಇದ್ದರೆ ಕೆಲವೇ ದಿನಗಳಲ್ಲಿ ಹಣ ವರ್ಗಾವಣೆ (Money Transfer) ಆಗುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನು ರಾಜ್ಯ ಸರ್ಕಾರ ಈ ಯೋಜನೆಯನ್ನು ತಂದಿದ್ದು, ಮನೆಯನ್ನು ನಡೆಸಿಕೊಂಡು ಹೋಗುವ ಮಹಿಳೆಯರ ಆರ್ಥಿಕ ವೃದ್ಧಿಗಾಗಿ, ಮಹಿಳಾ ಸಬಲೀಕರಣ ಮತ್ತೊಂದು ಕಾರಣ ಆಗಿದೆ. ಈ ಕಾರಣಗಳಿಂದ ರಾಜ್ಯದ ಮನೆ ಮನೆಯ ಗೃಹಲಕ್ಷ್ಮಿಯರಿಗೆ ಈ ಯೋಜನೆಯ ಸೌಲಭ್ಯ ಒದಗಿಸುತ್ತಿದೆ ಸರ್ಕಾರ.
ಈ ಯೋಜನೆಯಲ್ಲಿ ಈಗಾಗಲೇ 86% ಅಷ್ಟು ರಾಜ್ಯದ ಹೆಣ್ಣುಮಕ್ಕಳು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಸುಮಾರು 1.08 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅವರಿಗೆಲ್ಲಾ ಪ್ರತಿ ತಿಂಗಳು ₹2000 ರೂಪಾಯಿಗಳು ಡಿಬಿಟಿ (DBT) ಮೂಲಕ ಜಮೆ ಆಗಲಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಕೊನೆಯ ದಿನಾಂಕ ನಿಗದಿಯಾಗಿಲ್ಲ ಹಾಗಾಗಿ ಒಂದು ವೇಳೆ ಇನ್ನು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸದೆ ಇರುವ ಮಹಿಳೆಯರು ಈ ಕೂಡಲೇ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆಯ (Gruha Lakshmi Yojane) ಮೂಲಕ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡುತ್ತಿರುವ ಸರ್ಕಾರ ಹೆಚ್ಚಿನ ಕಂಡೀಷನ್ ಗಳನ್ನು ಹಾಕಿಲ್ಲ, ಅಥವಾ ಹೆಚ್ಚು ದಾಖಲೆಗಳನ್ನು ಕೂಡ ಕೇಳಿಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಿರುವುದು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್ ಮತ್ತು ರೇಶನ್ ಕಾರ್ಡ್ ಡೀಟೇಲ್ಸ್ ಮಾತ್ರ.
ಜೊತೆಗೆ ಇಕೆವೈಸಿ ಕಡ್ಡಾಯವಾಗಿ ಮಾಡಿಸಿರಬೇಕು. ಇದಿಷ್ಟು ದಾಖಲೆಗಳನ್ನು ಮಾತ್ರ ಕೇಳಲಾಗಿದೆ. ಹಾಗಾಗಿ ಈ ಎಲ್ಲಾ ದಾಖಲೆಗಳು ನಿಮ್ಮ ಹತ್ತಿರ ಸರಿಯಾಗಿದ್ದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು..
ಇದಿಷ್ಟು ಸರಿ ಇದ್ದರೆ, ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಸಿಗುತ್ತದೆ. ಇಂದು ಎಲ್ಲಾ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಲಿದ್ದು, ಸರ್ವರ್ ಸಮಸ್ಯೆ ಇಂದ ಇಂದು ಹಣ ವರ್ಗಾವಣೆ ಆಗದೆ ಹೋದರೆ ಶೀಘ್ರದಲ್ಲೇ ಹಣ ವರ್ಗಾವಣೆ ಆಗಲಿದೆ.
ಇನ್ನು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಾಗೆ ಒಂದು ಗೊಂದಲ ಜನರಲ್ಲಿತ್ತು, ಅದು ವಿಧವೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಯೋಜನೆಯ ಸೌಲಭ್ಯ ಸಿಗುತ್ತಾ ಎನ್ನುವ ಪ್ರಶ್ನೆ ಇತ್ತು..
ಈ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉತ್ತರ ನೀಡಿದ್ದಾರೆ, ಮಾಧ್ಯಮದ ಎದುರು ಸ್ಪಷ್ಟನೆ ಕೊಟ್ಟಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು, “ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೂಡ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಬಹುದು.
ನಮ್ಮ ಸರ್ಕಾರ ಈಗ 100 ದಿನದ ಸಂಭ್ರಮದಲ್ಲಿದೆ, ಈ ವೇಳೆ ಪಂಚ ಯೋಜನೆಗಳು ಜನರನ್ನು ತಲುಪುತ್ತಿದೆ. ಗೃಹಲಕ್ಷ್ಮಿ ಯೋಜನೆಗೆ ಈಗ ಚಾಲನೆ ಸಿಗುತ್ತಿದೆ. ಈ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಈ ಯೋಜನೆಯ ಸೌಲಭ್ಯ ಸಿಗುತ್ತಾ ಎನ್ನುವ ಗೊಂದಲ ಶುರುವಾಗಿತ್ತು..
ಅಪ್ಲೈ ಮಾಡಿದ ಎಲ್ಲರಿಗೂ ಸಿಗುತ್ತಾ ಗೃಹ ಲಕ್ಷ್ಮಿ ಯೋಜನೆ ಹಣ? ಸ್ವತಃ ಸಿದ್ದರಾಮಯ್ಯನವರೇ ಕೊಟ್ರು ಅಪ್ಡೇಟ್
ಇದಕ್ಕೆ ಈಗ ಸ್ಪಷ್ಟನೆ ನೀಡುತ್ತಿದ್ದೇವೆ, ಮನೆಯ ಯಜಮಾನಿ ಎಂದು ಇದ್ದರೆ ಸಾಕು..” ಎಂದು ಹೇಳುವ ಮೂಲಕ ಈ ಯೋಜನೆಯ ಸೌಲಭ್ಯ ಎಲ್ಲರಿಗೂ ಸಿಗುತ್ತದೆ ಎನ್ನುವುದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟ ಪಡಿಸಿದ್ದಾರೆ.
Gruha Lakshmi Yojana will be launched today, money will be deposited through DBT
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.