ಈ ರೀತಿ ಚೆಕ್ ಮಾಡಿಕೊಳ್ಳಿ, ನಾಳೆಯೇ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಎಲ್ಲಾ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

ನಾಳೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗುತ್ತದೆ. ನಾಳೆ ಎಲ್ಲಾ ಮನೆಯ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಈ ಯೋಜನೆಯ ಹಣ ವರ್ಗಾವಣೆ ಆಗಲಿದೆ. ಬುಧವಾರದಂದು ಈ ಯೋಜನೆಗೆ ಇಬ್ಬರು ರಾಷ್ಟ್ರನಾಯಕರ ಸಮ್ಮುಖದಲ್ಲಿ ಚಾಲನೆ ಸಿಗುತ್ತದೆ

ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ಜಾರಿಗೆ ತರುತ್ತಿರುವ 5 ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಕೂಡ ಒಂದು ಯೋಜನೆ ಆಗಿದೆ. ಇದು ಮುಖ್ಯವಾದ ಯೋಜನೆ ಆಗಿದ್ದು, ಮನೆಯನ್ನು ನಡೆಸುವ ಎಲ್ಲಾ ಗೃಹಲಕ್ಷ್ಮಿಯರಿಗೆ ಪ್ರತಿ ತಿಂಗಳು ₹2000 ರೂಪಾಯಿ ಹಣ (Gruha Lakshmi Money) ಈ ಯೋಜನೆಯ ಮೂಲಕ ಸಿಗಲಿದೆ.

1 ಕೋಟಿಗಿಂತ ಹೆಚ್ಚು ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಗೆ ನಾಳೆ ಚಾಲನೆ (Gruha Lakshmi Scheme Inauguration)  ಸಿಗಲಿದೆ. ಮೈಸೂರಿನಲ್ಲಿ (Mysore) ಗೃಹಲಕ್ಷ್ಮಿ ಯೋಜನೆ ಚಾಲನೆಗಾಗಿ ಬೃಹತ್ ಕಾರ್ಯಕ್ರಮವನ್ನು ಏರ್ಪಾಡು ಮಾಡಲಾಗಿದೆ.

ಈ ಕಾರ್ಯಕ್ರಮಕ್ಕೆ ರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅತಿಥಿಗಳಾಗಿ ಬರುತ್ತಾರೆ ಎಂದು ಹೇಳಲಾಗುತ್ತಿದೆ.

Gruha Lakshmi balance Money deposit, money transferred only for such People

ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಾರದು ಅಂದ್ರೆ ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ! ದಿನಕ್ಕೊಂದು ಹೊಸ ರೂಲ್ಸ್

ಆಗಸ್ಟ್ 30ರಂದು ಅಂದರೆ ನಾಳೆ ಈ ಯೋಜನೆಗೆ ಚಾಲನೆ ಸಿಗುತ್ತದೆ. ನಾಳೆ ಎಲ್ಲಾ ಮನೆಯ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ (Bank Account) ಈ ಯೋಜನೆಯ ಹಣ ವರ್ಗಾವಣೆ ಆಗಲಿದೆ. ಬುಧವಾರದಂದು ಈ ಯೋಜನೆಗೆ ಇಬ್ಬರು ರಾಷ್ಟ್ರನಾಯಕರ ಸಮ್ಮುಖದಲ್ಲಿ ಚಾಲನೆ ಸಿಗುತ್ತದೆ, ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ₹2000 ರೂಪಾಯಿ ಡೆಪಾಸಿಟ್ ಆಗುತ್ತದೆ ಎಂದು ಮೈಸೂರಿನ (Mysore) ಕಾಂಗ್ರೆಸ್ ಕಚೇರಿಯಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್ ಪಕ್ಷ ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ ಸುಮಾರು 1.08 ಕೋಟಿ ಮನೆಯ ಹೆಣ್ಣುಮಕ್ಕಳು ಈ ಯೋಜನೆಗೆ ಅಪ್ಲೈ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲೆಕ್ಷನ್ ಗಿಂತ ಮೊದಲು ನೀಡಿದ ಗ್ಯಾರೆಂಟಿ ಯೋಜನೆಯಲ್ಲಿ ಈ ಯೋಜನೆ ಕೂಡ ಒಂದು ಯೋಜನೆ ಆಗಿದೆ. ಈ ಎಲ್ಲಾ ಯೋಜನೆಗಳ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ನೀಡಿದ ಕಾರಣಕ್ಕೆ ಬಿಜೆಪಿ ಪಕ್ಷವನ್ನು ಸೋಲಿಸಲು ಸಾಧ್ಯವಾಯಿತು.

ಅಪ್ಲೈ ಮಾಡಿದ ಎಲ್ಲರಿಗೂ ಸಿಗುತ್ತಾ ಗೃಹ ಲಕ್ಷ್ಮಿ ಯೋಜನೆ ಹಣ? ಸ್ವತಃ ಸಿದ್ದರಾಮಯ್ಯನವರೇ ಕೊಟ್ರು ಅಪ್ಡೇಟ್

Gruha Lakshmi Yojaneಈ ಯೋಜನೆ ಚಾಲನೆಯ ಕಾರ್ಯಕ್ರಮದ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಾಹಿತಿ ನೀಡಿದ್ದು, ಮೈಸೂರಿನಲ್ಲಿ ಮಾಧ್ಯಮದ ಎದುರು ಮಾತನಾಡಿದ್ದಾರೆ. ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಸುಮಾರು 1 ಲಕ್ಷ ಜನರು ಬರುವ ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ, ಅವರು ಯೋಜನೆಗೆ ಚಾಲನೆ ನೀಡುತ್ತಾರೆ. ರಾಹುಲ್ ಗಾಂಧಿ ಅವರು ಇರಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೊಂದು ಸರ್ಕಾರದ ಕಾರ್ಯಕ್ರಮ. ಇದು ಪಕ್ಷದ ಕಾರ್ಯಕ್ರಮ ಅಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ರಾಹುಲ್ ಗಾಂಧಿ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಹಾಗು ಸಂಸತ್ತಿನ ಸದಸ್ಯರಾಗಿ ಪಾಲ್ಗೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಈ ತಿಂಗಳ 30ಕ್ಕೆ ಇಂತಹ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 2,000 ಜಮೆ, ಪ್ರಮುಖ ಮಾಹಿತಿ ಹಂಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಶಕ್ತಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರುತ್ತಿರುವ ನಾಲ್ಕನೇ ಯೋಜನೆ ಆಗಿದೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿರುವ ಎಲ್ಲಾ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ (Bank Account) ತಿಂಗಳಿಗೆ ₹2000 ಜಮೆ ಆಗುತ್ತದೆ. ಈ ಹಣಕಾಸು ವರ್ಷದಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ₹17,500 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಡಲಾಗಿದೆ ಎಂದು ತಿಳಿಸಿದ್ದಾರೆ.. ಈ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

Gruha Lakshmi Scheme Money will be Transfer to Bank Account Tomorrow

Related Stories