Karnataka News

ಕಾವೇರಿ ನದಿಯಲ್ಲಿ ಮುಳುಗಿ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಸಾವು

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಕಾವೇರಿ ನದಿಯಲ್ಲಿ ತಾತ ಮತ್ತು ಇಬ್ಬರು ಮೊಮ್ಮಕ್ಕಳು ನೀರುಪಾಲಾದ ದಾರುಣ ಘಟನೆ. ಮೂವರ ಮೃತದೇಹಗಳನ್ನು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

  • ಕಾವೇರಿ ನದಿಯಲ್ಲಿ ಮುಳುಗಿ ತಾತ ಹಾಗೂ ಮೊಮ್ಮಕ್ಕಳು ದುರ್ಮರಣ
  • ಮೂರು ಮೃತದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ ಪೊಲೀಸರು
  • ಟಿ. ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ

Mysuru: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಕಾವೇರಿ ನದಿಯಲ್ಲಿ ದಾರುಣ ಘಟನೆ ಸಂಭವಿಸಿದೆ. 70 ವರ್ಷದ ಚೌಡಯ್ಯ, 13 ವರ್ಷದ ಭರತ್ ಹಾಗೂ 10 ವರ್ಷದ ಧನುಷ್ ನೀರುಪಾಲಾಗಿ ಮೃತರಾಗಿದ್ದಾರೆ.

ಮೊಮ್ಮಕ್ಕಳು ನೀರಿನಲ್ಲಿ ಮುಳುಗುತ್ತಿದ್ದನ್ನು ನೋಡಿದ ತಾತ, ಅವರನ್ನು ಕಾಪಾಡಲು (Rescue) ನದಿಗೆ ಇಳಿದರು. ಆದರೆ, ನೀರಿನ ರಭಸಕ್ಕೆ ಅವರು ಕೂಡ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಗಮನಿಸಿದ ಸ್ಥಳೀಯರು ಕೂಡಲೇ ಮಾಹಿತಿ ನೀಡಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಕಾವೇರಿ ನದಿಯಲ್ಲಿ ಮುಳುಗಿ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಸಾವು

ಮೃತರೆಲ್ಲರೂ ಟಿ.ನರಸೀಪುರ ತಾಲೂಕಿನ ತಿರುಮಕೂಡಲು ನಿವಾಸಿಗಳು ಎಂದು ಗುರುತಿಸಲಾಗಿದೆ. ಮೂವರ ಮೃತದೇಹಗಳನ್ನು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಗೆ (Hospital) ರವಾನೆ ಮಾಡಲಾಗಿದೆ. ಈ ಹೃದಯವಿದ್ರಾವಕ ಘಟನೆಯ ಬಗ್ಗೆ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Grandfather and Two Grandsons Drown in Kaveri River

English Summary

Our Whatsapp Channel is Live Now 👇

Whatsapp Channel

Related Stories