ಫ್ರೀ ಕರೆಂಟ್! ಬಾಡಿಗೆ ಮನೆಯವರು ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಇನ್ಮುಂದೆ ಈ ದಾಖಲೆ ಕಡ್ಡಾಯ

ಗೃಹ ಜ್ಯೋತಿ ಯೋಜನೆ ಆರಂಭವಾದಾಗ ಜೀರೋ ವಿದ್ಯುತ್ (Zero current bill) ಪಡೆದುಕೊಳ್ಳಲು ಅರ್ಜಿ ಸಲ್ಲಿಸುವವರು ಹೆಚ್ಚಿನ ದಾಖಲೆಗಳನ್ನು ಕೊಡಬೇಕಾಗಿರಲಿಲ್ಲ.

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ (Karnataka Government Schemes) ತಂದಿರುವ ಪ್ರತಿಯೊಂದೂ ಯೋಜನೆಗಳು ಯಶಸ್ವಿ ಆದರೂ ಕೂಡ ಎಲ್ಲ ಯೋಜನೆಗಳಲ್ಲೂ ಸಾಕಷ್ಟು ಗೊಂದಲಗಳು ಕೂಡ ಹುಟ್ಟಿಕೊಂಡಿದೆ.

ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು, ಯಾವ ರೀತಿಯ ದಾಖಲೆ ಕೊಡಬೇಕು ಎಲ್ಲವೂ ಸರಿಯಾಗಿದ್ದರೂ ಹಣ ಖಾತೆಗೆ ಬರುತ್ತಿಲ್ಲ, ಹೀಗೆ ಹಲವು ಪ್ರಶ್ನೆಗಳು ಜನರನ್ನು ಕಾಡುತ್ತಿವೆ.

ಕಳೆದ ಮೂರು ನಾಲ್ಕು ವಾರಗಳಿಂದ ಗೃಹಲಕ್ಷ್ಮಿ ಯೋಜನೆಯ (Gruha lakshmi Scheme) ಹಣ ಖಾತೆಗೆ ಬರುವುದರ ಬಗ್ಗೆ ಮಹಿಳೆಯರು ಸಾಕಷ್ಟು ಉತ್ಸುಕರಾಗಿದ್ದಾರೆ, ಆದರೆ ಇದರ ಜೊತೆಗೆ ಗೃಹ ಜ್ಯೋತಿ (Gruha jyothi Scheme) ಯೋಜನೆಯ ಹೊಸ ಅಪ್ಡೇಟ್ ಬಗ್ಗೆಯೂ ಕೂಡ ನೀವು ತಿಳಿದುಕೊಳ್ಳಬೇಕು, ಇಲ್ಲವಾದರೆ ಮುಂದಿನ ಬಾರಿ ಅರ್ಜಿ ಹಾಕಲು ಪರದಾಡಬೇಕಾಗುತ್ತದೆ.

ಫ್ರೀ ಕರೆಂಟ್! ಬಾಡಿಗೆ ಮನೆಯವರು ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಇನ್ಮುಂದೆ ಈ ದಾಖಲೆ ಕಡ್ಡಾಯ - Kannada News

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬಂದಿಲ್ಲ ಅಂದ್ರೆ ತಪ್ಪದೇ ಈ 3 ಕೆಲಸ ಮಾಡಿ

ಬಾಡಿಗೆದಾರರಿಗೆ ಈ ದಾಖಲೆ ಕಡ್ಡಾಯ: (This document is mandatory for tenants)

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಜ್ಯೋತಿ ಯೋಜನೆ ಲಕ್ಷಾಂತರ ಕನ್ನಡಿಗರಿಗೆ ಸಹಾಯ ಮಾಡಿದೆ, ಅದರಲ್ಲೂ ಮುಖ್ಯವಾಗಿ ಮನೆಯ ಓನರ್ ಗಳಿಗೆ ಮಾತ್ರವಲ್ಲದೆ ಯಾವುದೇ ಮನೆಯಲ್ಲಿ ಬಾಡಿಗೆ ಇರುವವರು ಕೂಡ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ (Free Electricity) ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಅದರಲ್ಲೂ ಗೃಹ ಜ್ಯೋತಿ ಯೋಜನೆ ಆರಂಭವಾದಾಗ ಜೀರೋ ವಿದ್ಯುತ್ (Zero current bill) ಪಡೆದುಕೊಳ್ಳಲು ಅರ್ಜಿ ಸಲ್ಲಿಸುವವರು ಹೆಚ್ಚಿನ ದಾಖಲೆಗಳನ್ನು ಕೊಡಬೇಕಾಗಿರಲಿಲ್ಲ.

ಕೇವಲ ಆರ್ ಆರ್ ನಂಬರ್ ಪ್ರತಿ ಹಾಗೂ ಆಧಾರ್ ಕಾರ್ಡ್ (Aadhaar Card) ದಾಖಲೆ ನೀಡಿದರೆ ಸಾಕಿತ್ತು, ಅದರಲ್ಲೂ ಆನ್ಲೈನ (Online) ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಸುಲಭ ವಾಗಿ ಎಲ್ಲರೂ ಅರ್ಜಿ ಸಲ್ಲಿಸಿದ್ದಾರೆ, ಹಾಗೆಯೇ ಹಲವರಿಗೆ ಜೀರೋ ವಿದ್ಯುತ್ ಬಿಲ್ ಬರುವಂತೆ ಆಗಿದೆ.

ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಒಟ್ಟಿಗೆ ಬರಲಿದೆ ₹4,000 ರೂಪಾಯಿ; ದಿನಾಂಕ ಫಿಕ್ಸ್!

Gruha Jyothi free electricity Schemeಆದರೆ ಇನ್ನು ಮುಂದಿನ ದಿನಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅಪ್ಲೈ ಮಾಡುವ ಪ್ರಕ್ರಿಯೆ ಮತ್ತೆ ಆರಂಭವಾಗಬಹುದು. ಈ ಬಗ್ಗೆ ಸದ್ಯದಲ್ಲಿಯೇ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ, ಆದರೆ ಸ್ಥಗಿತಗೊಂಡಿರುವ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತೆ ಆರಂಭವಾದರೆ ಅದರಲ್ಲಿ ಸಾಕಷ್ಟು ಹೆಚ್ಚಿನ ಹಾಗೂ ಕಟ್ಟು ನೆಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಉದಾಹರಣೆಗೆ ಬಾಡಿಗೆದಾರರು ಕೇವಲ ಆಧಾರ್ ಕಾರ್ಡ್ ಹಾಗೂ ತಾವು ವಾಸಿಸುವ ಮನೆಯ ಆರ್ ಆರ್ ನಂಬರ್ (RR Number) ದಾಖಲೆಯನ್ನು ಮಾತ್ರ ಕೊಟ್ಟು ಉಚಿತ ವಿದ್ಯುತ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದರು.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿದ್ರೆ ಅದು ಸಕ್ಸಸ್ ಆಗಿದ್ಯೋ ಇಲ್ವೋ ತಿಳಿದುಕೊಳ್ಳಲು ಹೀಗೆ ಮಾಡಿ!

ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸುವವರು ಈ ದಾಖಲೆಗಳ ಜೊತೆಗೆ ಮನೆ ಬಾಡಿಗೆಗೆ ಇರುವುದಕ್ಕೆ ಅಗ್ರಿಮೆಂಟ್ (Rent Agreement), ಬಾಡಿಗೆ ಪಾವತಿ ಮಾಡಿರುವುದಕ್ಕೆ ರಶೀದಿ ಮೊದಲಾದವುಗಳನ್ನು ಕೇಳಬಹುದಾದ ಕ್ರಮಗಳನ್ನು ಕೂಡ ಕೈಗೊಳ್ಳುವ ಸಾಧ್ಯತೆ ಇದೆ.

ಹಾಗಾಗಿ ಗೃಹಜೋತಿ ಯೋಜನೆ ಅಪ್ಲಿಕೇಶನ್ ಹಾಕುವ ಪ್ರಕ್ರಿಯೆ ಮತ್ತೆ ತೆರೆದುಕೊಂಡರೆ ಯಾರು ಅಪ್ಲೈ ಮಾಡಲು ಇಚ್ಛೆ ಪಡುತ್ತಿರೋ ಅಂಥವರು ಈ ಮೇಲೆ ಹೇಳಿರುವ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ರಶೀದಿ ಅಗ್ರಿಮೆಂಟ್ ಪ್ರತಿ ಎಲ್ಲವೂ ನಿಮ್ಮ ಬಳಿ ಇದ್ದರೆ ಸರ್ಕಾರ ಕೇಳಿರುವ ದಾಖಲೆಗಳನ್ನು ತಕ್ಷಣವೇ ಸಲ್ಲಿಸಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬಹುದು.

Henceforth this document is mandatory to get the benefit of Gruha Jyothi Yojana

Follow us On

FaceBook Google News

Henceforth this document is mandatory to get the benefit of Gruha Jyothi Yojana