Indira Kit: ಎರಡು ತಿಂಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಇಂದಿರಾ ಕಿಟ್ ವಿತರಣೆ; ಕೆ.ಎಚ್. ಮುನಿಯಪ್ಪ

ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಇಂದಿರಾ ಕಿಟ್ ವಿತರಣೆ ಆರಂಭವಾಗಲಿದ್ದು, ಅಕ್ಕಿಯ ಜೊತೆಗೆ ತೊಗರಿ ಬೇಳೆ, ಸಕ್ಕರೆ ಹಾಗೂ ಉಪ್ಪು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

  • ಜನವರಿ–ಫೆಬ್ರವರಿಯಲ್ಲಿ ಇಂದಿರಾ ಕಿಟ್ ವಿತರಣೆ
  • ಬಿಪಿಎಲ್ ಕಾರ್ಡ್‌ ಗೆ, ಅಕ್ಕಿ ಜೊತೆಗೆ ಅಗತ್ಯ ವಸ್ತು
  • ಅಕ್ರಮ ಪಡಿತರ ಸಾಗಾಟ ತಡೆಯಲು ಕಠಿಣ ಕ್ರಮ

ಬೆಂಗಳೂರು (Bengaluru): ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಬಹು ನಿರೀಕ್ಷಿತ ಇಂದಿರಾ ಕಿಟ್ ವಿತರಣೆಯನ್ನು (Indira Kit Distribution) ಮುಂದಿನ ಎರಡು ತಿಂಗಳೊಳಗೆ ಆರಂಭಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ (Food Minister K.H. Muniyappa) ಅವರು ತಿಳಿಸಿದ್ದಾರೆ.

ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ ಅಥವಾ ಫೆಬ್ರವರಿಯಿಂದಲೇ ಕರ್ನಾಟಕ ರಾಜ್ಯಾದ್ಯಂತ (Karnataka State) ಕಿಟ್ ವಿತರಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಇಂದಿರಾ ಕಿಟ್‌ನಲ್ಲಿ ಐದು ಕೆ.ಜಿ ಅಕ್ಕಿಯ ಜೊತೆಗೆ ತೊಗರಿ ಬೇಳೆ, ಸಕ್ಕರೆ ಮತ್ತು ಉಪ್ಪು ಸೇರಿಸಲಾಗುತ್ತದೆ. ಅಕ್ಕಿ ವಿತರಣೆ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಎಲ್ಲಾ ಕುಟುಂಬಗಳು ಅಷ್ಟು ಅಕ್ಕಿಯನ್ನು ಬಳಸುವುದಿಲ್ಲ ಎಂಬ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು, ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಬೆಂಗಳೂರು ಬಾರ್–ಪಬ್‌ಗಳಿಗೆ ರಾತ್ರಿ 1ರವರೆಗೆ ಅವಕಾಶ, ಹೊಸ ವರ್ಷಾಚರಣೆ ಕಟ್ಟುನಿಟ್ಟಿನ ಸೂಚನೆ

ಅನರ್ಹರೆಂದು ಬಿಪಿಎಲ್ ಕಾರ್ಡ್ (BPL Ration Card) ರದ್ದಾಗಿರುವವರು ಆತಂಕಪಡಬೇಕಿಲ್ಲ. ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದಲ್ಲಿ, ಪರಿಶೀಲನೆಯ ಬಳಿಕ 15 ದಿನಗಳೊಳಗೆ ಪಡಿತರ ಕಾರ್ಡ್ ಮರು ವಿತರಣೆ ಮಾಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಆಸ್ತಿ ಹೊಂದಿರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವ ಆರೋಪಗಳ ಹಿನ್ನೆಲೆಯಲ್ಲಿ, ಅಂತಹ ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.

ಇದಕ್ಕುಮುಂದೆ, ಪಡಿತರ ವಸ್ತುಗಳನ್ನು ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. ಈಗಾಗಲೇ 574 ಮಂದಿಯನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ ಎಂದು ಮುನಿಯಪ್ಪ ಹೇಳಿದರು.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories