ರಾಜ್ಯದ ಎಲ್ಲಾ ಬ್ಯಾಂಕ್‌ಗಳಲ್ಲಿ ಇನ್ನು ಕನ್ನಡ ಬಳಕೆ ಕಡ್ಡಾಯ! ಕನ್ನಡ ಗೊತ್ತಿಲ್ಲ ಅನ್ನೊಂಗಿಲ್ಲ

Story Highlights

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳಲ್ಲಿ ಉದ್ಯೋಗಿಗಳು ಗ್ರಾಹಕರ ಬಳಿ ಕನ್ನಡ ಭಾಷೆಯಲ್ಲಿ ವ್ಯವಹರಿಸುವುದು ಕಡ್ಡಾಯ ಎನ್ನುವ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಇದು ಯಾರಿಗೆ ಖುಷಿ ಕೊಡುತ್ತೋ ಇಲ್ವೋ ಗೊತ್ತಿಲ್ಲ, ಆದರೆ ಕನ್ನಡ ಭಾಷೆಯ (Kannada language) ಮೇಲೆ ಅಭಿಮಾನ ಹೊಂದಿರುವವರಿಗೆ ಬಹಳ ಖುಷಿಯ ವಿಚಾರ, ನಾವು ಈಗಾಗಲೇ ನೋಡಿರುವಂತೆ ಕರ್ನಾಟಕದಲ್ಲಿ ಯಾವುದೇ ಅಂಗಡಿಗಳಲ್ಲಿ ಅಥವಾ ಕಂಪನಿಗಳಲ್ಲಿ ಬೋರ್ಡ್ ಹಾಕುವಾಗ ಇಂಗ್ಲಿಷ್ (English) ಅಥವಾ ಹಿಂದಿಯ ಜೊತೆಗೆ ಕನ್ನಡದಲ್ಲಿ ಬೋರ್ಡ್ ಹಾಕುವುದು ಕಡ್ಡಾಯ.

ಅದೇ ರೀತಿ ಬ್ಯಾಂಕ್ (Bank) ಸಿಬ್ಬಂದಿಗಳಿಗೂ ಹೊಸ ರೂಲ್ಸ್ ತರಲಾಗಿದೆ.

ಬಡಜನರಿಗಾಗಿ ಹೊಸ ಭಾಗ್ಯ ಜಾರಿಗೆ ತರಲು ನಿರ್ಧರಿಸಿದ ಸರ್ಕಾರ! ಸಿಎಂ ಸಿದ್ದರಾಮಯ್ಯ ಘೋಷಣೆ

ಬ್ಯಾಂಕ್ ಸಿಬ್ಬಂದಿಗಳಿಗೆ ಕನ್ನಡ ಬರುವುದು ಕಡ್ಡಾಯ!

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳಲ್ಲಿ ಉದ್ಯೋಗಿಗಳು ಗ್ರಾಹಕರ ಬಳಿ ಕನ್ನಡ ಭಾಷೆಯಲ್ಲಿ ವ್ಯವಹರಿಸುವುದು ಕಡ್ಡಾಯ ಎನ್ನುವ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಕೈಗಾರಿಕೆಗಳಲ್ಲಿ ಬ್ಯಾಂಕ್ಗಳಲ್ಲಿ (Bank) ಹಾಗೂ ಶಾಸನಬದ್ಧವಾದ ಹಾಗೂ ಶಾಸನಬದ್ಧವಲ್ಲದ ಕಾರ್ಯ ಸಂಸ್ಥೆಗಳಲ್ಲಿಯೂ ಕೂಡ ಯಾರನ್ನ ಕಾರ್ಯನಿರ್ವಹಿಸುತ್ತಿದ್ದಾರೋ ಆ ಎಲ್ಲಾ ಉದ್ಯೋಗಿಗಳು (Employees) ಕೂಡ ಕನ್ನಡ ಭಾಷಾಜ್ಞಾನವನ್ನು ಹೊಂದಿರಬೇಕು

ಗ್ರಾಹಕರ ಜೊತೆಗೆ ಅಗತ್ಯವಿರುವ ಸಂದರ್ಭದಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡಬೇಕು ಎಂದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ 2022 ಸಲ್ಲಿಸಿದ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿದೆ.

ಫ್ರೀ ಬಸ್! ಶಕ್ತಿ ಯೋಜನೆ ಕುರಿತು ಮಹತ್ವದ ನಿರ್ಧಾರ, ಹಣ ಕಟ್ಟಿ ಪ್ರಯಾಣ ಮಾಡುವಂತೆ ಆದೇಶ

ಕನ್ನಡ ತಿಳಿದಿರುವ ಹಿರಿಯ ಅಧಿಕಾರಿಗಳಿಂದ ತರಬೇತಿ ತೆಗೆದುಕೊಳ್ಳಿ

Kannada Language Mandatory in Banksನೂರಕ್ಕೆ ನೂರರಷ್ಟು ಬ್ಯಾಂಕ್ ಉದ್ಯೋಗಿಗಳು ಯಾರಿಗೆ ಕನ್ನಡ ಬರುತ್ತದೆಯೋ ಅಂತಹ ಹಿರಿಯ ಅಧಿಕಾರಿಗಳಿಂದ ಕನ್ನಡ ಕೋಶವನ್ನೇ ಎರವಲು ಪಡೆದುಕೊಳ್ಳಬಹುದು, ಅಂದರೆ ಅವರಿಂದ ಕನ್ನಡವನ್ನು ಕಲಿತುಕೊಳ್ಳಬಹುದು. ಅಷ್ಟೇ ಅಲ್ಲದೆ ಬ್ಯಾಂಕುಗಳಲ್ಲಿ ಕನ್ನಡ ಕಲಿಕಾ ಘಟಕ ಸ್ಥಾಪಿಸಲು ಅಗತ್ಯವಿದ್ದರೆ ಬೋಧಕ ಸಿಬ್ಬಂದಿ ಹಾಗೂ ಅಧ್ಯಯನ ಸಾಮಗ್ರಿಗಳನ್ನು ಕೂಡ ನೀಡಲಿದೆ, ಇದಕ್ಕೆ ತಗಲುವ ವೆಚ್ಚವನ್ನು ಮಾತ್ರ ಬ್ಯಾಂಕ್ ನವರು ಭರಿಸಬೇಕು.

ಇತ್ತೀಚಿಗೆ ಬ್ಯಾಂಕ್ ಗಳಲ್ಲಿ ಇರುವ ಸಿಬ್ಬಂದಿಗಳಿಗೆ ಕನ್ನಡ ಬಾರದೆ ಇರುವುದರಿಂದ ಗ್ರಾಮೀಣ ಭಾಗದ ಜನರಿಗೆ ಬಹಳ ತೊಂದರೆ ಆಗುತ್ತಿದೆ, ಇದನ್ನು ಗಮನಿಸಿ ಬ್ಯಾಂಕ್ ಉದ್ಯೋಗಿಗಳು ಕನ್ನಡದಲ್ಲಿ ವ್ಯವಹರಿಸಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

ಬ್ಯಾಂಕ್ ಖಾತೆ ಇಲ್ಲದೆ ಇದ್ರೂ ಗೃಹಲಕ್ಷ್ಮಿ ಯೋಜನೆ ಹಣ ಸಿಗುತ್ತಾ? ಗುಡ್ ನ್ಯೂಸ್ ನೀಡಿದ ಸರ್ಕಾರ

ಕನ್ನಡ ಪರ ಸಂಘಟನೆಗಳು ಕೂಡ ಕನ್ನಡಿಗರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಪಡಿಸಿದ್ದವು. ಮಾರ್ಚ್ನಲ್ಲಿ ನಡೆದ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿದಾಯಕ 2022 ನೋ ರೂಪಿಸಿ ಅಂಗೀಕರಿಸಲಾಗಿತ್ತು.

ಹಾಗಾಗಿ ಮಸೂದೆ ಈಗಾಗಲೇ ರಾಜ್ಯ ಸರ್ಕಾರದ ಸ್ಥಳೀಯ ಅಧಿಕಾರಿಗಳು ನಿಗಮಗಳು ಶಾಸನಬದ್ಧ ಹಾಗೂ ಶಾಸನಬದ್ಧವಲ್ಲದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕನ್ನಡ ಭಾಷೆ ಜ್ಞಾನವನ್ನು ಹೊಂದಿರುವುದು ಅತ್ಯಗತ್ಯ ಎಂದು ತಿಳಿಸಿದೆ.

ಆದ್ದರಿಂದ ಈ ವಿಧೇಯಕದ ಅನುಷ್ಠಾನಕ್ಕೆ ತಂದ ರಾಜ್ಯ ಸರ್ಕಾರ ಬ್ಯಾಂಕ್ ಉದ್ಯೋಗಿಗಳು ಕನ್ನಡ ದಲ್ಲಿಯೇ ಕನ್ನಡಿಗರೊಂದಿಗೆ ವ್ಯವಹರಿಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಿದೆ.

ರಾಜ್ಯ ಸರ್ಕಾರ ಕೈಗೊಂಡಿದಿರುವ ಈ ತೀರ್ಮಾನದಿಂದ ಕೇವಲ ಕನ್ನಡ ಮಾತ್ರ ಮಾತನಾಡಲು ಬರುವ ಜನರಿಗೆ ಸಹಾಯಕವಾಗಲಿದೆ. ಇಷ್ಟೂ ವರ್ಷದ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೂ ಫಲ ಸಿಕ್ಕಂತಾಗಿದೆ.

Kannada Language is now mandatory in all banks of the Karnataka state