ಕರ್ನಾಟಕ ಕುರ್ಚಿ ಕಾದಾಟಕ್ಕೆ ಹೊಸ ತಿರುವು: ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ

ಕರ್ನಾಟಕ ಸಿಎಂ ಬದಲಾವಣೆ ಚರ್ಚೆ ತೀವ್ರಗೊಂಡಿದ್ದು, ಅಹಿಂದ ರಾಜಕೀಯ, ಹೈಕಮಾಂಡ್ ಒತ್ತಡ ಮತ್ತು ನಾಯಕತ್ವ ಕಾದಾಟದ ನಡುವೆ ಕೋಡಿಮಠ ಸ್ವಾಮೀಜಿ ಭವಿಷ್ಯ ರಾಜ್ಯ ರಾಜಕಾರಣಕ್ಕೆ ಹೊಸ ತಿರುವು ನೀಡಿದೆ

  • ಸಿಎಂ ಬದಲಾವಣೆ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ
  • ಸಿದ್ದರಾಮಯ್ಯ–ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ
  • ಕೋಡಿಮಠ ಭವಿಷ್ಯ ನಾಯಕತ್ವ ಕಾದಾಟಕ್ಕೆ ಹೊಸ ತಿರುವು

ಕರ್ನಾಟಕ ರಾಜಕಾರಣದಲ್ಲಿ (Karnataka Politics) ಮತ್ತೆ ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಧಿಕಾರದಿಂದ ಕೆಳಗೆ ಇಳಿಯುತ್ತಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಅಹಿಂದ ಸಮುದಾಯದ ಧ್ವನಿಯೂ ಗಟ್ಟಿಯಾಗಿದ್ದು, ಒಳಪಕ್ಷೀಯ ಚರ್ಚೆಗಳು ತೀವ್ರಗೊಂಡಿವೆ.

ಇತ್ತ, ಹೈಕಮಾಂಡ್ ಮನವೊಲಿಸಲು ಡಿಕೆ ಶಿವಕುಮಾರ್ (DK Shivakumar) ನಡೆಸುತ್ತಿರುವ ಪ್ರಯತ್ನಗಳು ರಾಜಕೀಯವಾಗಿ ಗಮನ ಸೆಳೆದಿವೆ. ನಾಯಕತ್ವ ಬದಲಾವಣೆ ವಿಚಾರದಲ್ಲಿ ಇಬ್ಬರ ಮಧ್ಯೆ ನೇರ ಹೇಳಿಕೆಗಳಿಲ್ಲದಿದ್ದರೂ, ಮುಸುಕಿನ ಗುದ್ದಾಟ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿವೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ ರಾಜ್ಯದ 4 ನಗರಗಳಲ್ಲಿ ಕಳಪೆ ವಾಯು ಗುಣಮಟ್ಟ! ಯಾವ ನಗರಗಳು?

ಈ ರಾಜಕೀಯ ಗೊಂದಲದ ನಡುವೆ, ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ನೀಡಿದ ಭವಿಷ್ಯ ರಾಜ್ಯ ರಾಜಕಾರಣಕ್ಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, “ಹಾಲುಮತ ಸಮುದಾಯದವರಿಂದ ಅಧಿಕಾರ ಕಿತ್ತುಕೊಳ್ಳುವುದು ಸುಲಭವಲ್ಲ. ಸ್ವತಃ ಸಿದ್ದರಾಮಯ್ಯ ಅವರು ಅಧಿಕಾರ ಬಿಡುವ ನಿರ್ಧಾರ ತೆಗೆದುಕೊಂಡರೆ ಮಾತ್ರ ಬೇರೆವರಿಗೆ ಅವಕಾಶ ಸಿಗಬಹುದು” ಎಂದು ಹೇಳಿದ್ದಾರೆ.

ಪರೋಕ್ಷ ಸಂದೇಶವೇ?

ಕೋಡಿಮಠ ಸ್ವಾಮೀಜಿಗಳ ಈ ಹೇಳಿಕೆಯನ್ನು, ಸಿದ್ದರಾಮಯ್ಯ ಅಧಿಕಾರದಲ್ಲಿರುವವರೆಗೂ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಸಿಗುವುದು ಕಷ್ಟ ಎಂಬ ಪರೋಕ್ಷ ಸಂದೇಶವೆಂದು ವಿಶ್ಲೇಷಿಸಲಾಗುತ್ತಿದೆ.

ಈ ಭವಿಷ್ಯ ರಾಜಕೀಯ ವಲಯದಲ್ಲಿ ಬೇರೆ ಬೇರೆ ಅರ್ಥಗಳಲ್ಲಿ ಚರ್ಚೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಳರಾಜಕಾರಣ ಯಾವ ದಿಕ್ಕು ತಾಳುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

TRENDING ARTICLES1 / 3
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories