ಗೃಹಜ್ಯೋತಿ ಯೋಜನೆ; ಆಗಸ್ಟ್ ತಿಂಗಳ ಕರೆಂಟ್ ಬಿಲ್ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ
ಗೃಹಜೋತಿ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ಸುಮಾರು 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡುವಂತೆ ಕಾಂಗ್ರೆಸ್ ಸರ್ಕಾರ ಈ ಹಿಂದೆ ಹೇಳಿಕೆ ನೀಡಿತ್ತು. ಈವರೆಗೂ ಸುಮಾರು 45 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್ ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಜನರ ಆರ್ಥಿಕ ಪರಿಸ್ಥಿತಿ ಸ್ಥಿರಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತ್ತು. ಇನ್ನು ಅದೇ ರೀತಿ ಇದೀಗ ಒಂದಾದ ಮೇಲೆ ಮತ್ತೊಂದು ಯೋಜನೆಯನ್ನು (Schemes) ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ.
ಇನ್ನು ಇತ್ತೀಚಿಗೆ ಮಹಿಳೆಯರಿಗಾಗಿ ಉಚಿತ ಬಸ್ (Free Bus) ಪ್ರಯಾಣವನ್ನು ಚಾಲ್ತಿ ಮಾಡಲಾಗಿದ್ದು, ಯೋಜನೆಯ ಲಾಭವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳುತ್ತಿದ್ದು ಈ ಬಗ್ಗೆ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಎಲ್ಲರೂ ಗೃಹಜ್ಯೋತಿ ಯೋಜನೆಗಾಗಿ (Gruha Jyothi Scheme) ಬಹಳ ಕಾತುರದಿಂದ ಕಾದು ಕುಳಿತಿದ್ದಾರೆ.
ಗೃಹಜೋತಿ ಯೋಜನೆ (Gruha Jyothi Yojane) ಅಡಿಯಲ್ಲಿ ಪ್ರತಿ ಮನೆಗೂ ಸುಮಾರು 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡುವಂತೆ ಕಾಂಗ್ರೆಸ್ ಸರ್ಕಾರ ಈ ಹಿಂದೆ ಹೇಳಿಕೆ ನೀಡಿತ್ತು. ಇನ್ನು ಯೋಚನೆಗಾಗಿ ಅರ್ಜಿಯನ್ನು ಸಹ ಈಗಾಗಲೇ ಅನೇಕರು ಸಲ್ಲಿಸಿದ್ದು, ಈವರೆಗೂ ಸುಮಾರು 45 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಇನ್ನು ಇತ್ತೀಚಿಗೆ ಇಂಧನ ಸಚಿವರಾದ ಕೆಜೆ ಜಾರ್ಜ್ ಅವರು ಈ ಬಗ್ಗೆ ಮಾಹಿತಿಯನ್ನು ಸಹ ನೀಡಿದ್ದರು.
ಈಗಾಗಲೇ 45 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಜುಲೈ 27ರ ಒಳಗೆ ಅರ್ಜಿಗಳನ್ನು ಸಲ್ಲಿಸಿದವರಿಗೆ ಜುಲೈ ತಿಂಗಳಿನಿಂದಲೇ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಅಂದರೆ 200 ಯೂನಿಟ್ ಗಳವರೆಗೂ ಉಚಿತವಾಗಿ ವಿದ್ಯುತ್ ಅನ್ನು ಬಳಸಬಹುದಾಗಿದೆ.
ಇನ್ನು ಜುಲೈ 27ರ ನಂತರ ಅರ್ಜಿಗಳನ್ನು ಸಲ್ಲಿಸಿದರು ಆಗಸ್ಟ್ ತಿಂಗಳಿನಲ್ಲಿ (August Month Electricity Bill) ಇದರ ಲಾಭವನ್ನು ಪಡೆಯಲಿದ್ದಾರೆ. ಇನ್ನು ಕೆಲವು ಕಾರಣಾಂತರಗಳಿಂದ ಅರ್ಜಿಗಳನ್ನು ಸಲ್ಲಿಸಲಾಗದೆ ಇರುವವರಿಗೆ ಅರ್ಜಿಯನ್ನು ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ.
ಗೃಹಜ್ಯೋತಿ ಯೋಜನೆಯ ನಿಯಮಗಳು ಈ ಕೆಳಗಿನಂತಿವೆ:
ವಾಣಿಜ್ಯ ಗ್ರಾಹಕರು ಯೋಜನೆಯ ಸೇವೆಯನ್ನು ಪಡೆದುಕೊಳ್ಳಲಾಗುವುದಿಲ್ಲ.
200 ಯೂನಿಟ್ ಗಳಿಗೆ ಮೀರಿ ವಿದ್ಯುತ್ ಬಳಸಿದರೆ ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಿದವರು ಮಾತ್ರ ಯೋಜನೆಯ ಫಲ ಪಡೆಯುತ್ತಾರೆ.
ಕೇವಲ ಸ್ವಂತ ಮನೆ ಅಲ್ಲದೇ ಬಾಡಿಗೆದಾರರು ಸಹ ಈ ಯೋಜನೆಯ ಲಾಭ ಪಡೆಯಬಹುದು.
ಜುಲೈ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್ ತಿಂಗಳಿನಿಂದ ಯೋಜನೆಯ ಫಲ ಸಿಗಲಿದೆ.
ಇನ್ನು ಗೃಹಜ್ಯೋತಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯ ಸ್ಟೇಟಸ್ ಕೂಡ ಚೆಕ್ ಮಾಡಿಕೊಳ್ಳಬಹುದಾಗಿದೆ. ನೀವಿನ್ನು ಅರ್ಜಿ ಸಲ್ಲಿಸಲಿಲ್ಲವಾದರೆ ಸರ್ಕಾರದ ಅಧಿಕೃತ ವೆಬ್ ಸೈಟ್ https://sevasindhugs.karnataka.gov.in/ ಗೆ ಭೇಟಿ ನೀಡಿ ಸಲ್ಲಿಸಬಹುದು.
Karnataka Gruha Jyothi Scheme, Govt issues new guidelines on August current bill
Follow us On
Google News |