ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿನಿಂದ ತಾವು ಭರವಸೆ ಎಂದು ನೀಡಿದ್ದ 4 ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಶಕ್ತಿ ಯೋಜನೆ (Shakti Scheme) ಪೂರ್ತಿಯಾಗಿ ಲಾಂಚ್ ಆಗಿದೆ.
ಈ ಯೋಜನೆಯ ಸೌಲಭ್ಯವನ್ನು ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಪಡೆದು, ಸಂತೋಷ ಪಡುತ್ತಿದ್ದಾರೆ. ಹೆಣ್ಣುಮಕ್ಕಳು ಈಗ ರಾಜ್ಯದ ಎಲ್ಲಾ ಕಡೆ ಉಚಿತವಾಗಿ ಓಡಾಡುತ್ತಿದ್ದಾರೆ.
ಫ್ರೀ ಬಸ್ (Free Bus) ಇಂದ ಹೆಣ್ಣುಮಕ್ಕಳು ರಾಜ್ಯದ ಮೂಲೆ ಮೂಲೆಗೆ ಪ್ರಯಾಣ ಮಾಡುತ್ತಿದ್ದಾರೆ, ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಮುಂಚೆ ಇದ್ದಿದ್ದಕ್ಕಿಂತ ಹೆಚ್ಚು ಮಹಿಳೆಯರು ಬಸ್ ನಲ್ಲಿ ಓಡಾಡುತ್ತಿರುವುದರಿಂದ ಬಸ್ ಗಳಲ್ಲಿ ರಶ್ ತಳ್ಳಾಟ ಎಲ್ಲವೂ ಜಾಸ್ತಿಯೇ ಆಗುತ್ತಿದೆ.
ಬಿಪಿಎಲ್ ಕಾರ್ಡ್ ಇರುವ ಇಂಥಹವರಿಗೆ ಆಗಸ್ಟ್ 1ರಿಂದ ಇಲ್ಲ ರೇಷನ್! ಸರ್ಕಾರದಿಂದ ಮಹತ್ವದ ಆದೇಶ
ಕೆಲವೊಮ್ಮೆ ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವೆ ಜಗಳ ಕೂಡ ಆದ ಸಾಕಷ್ಟು ಘಟನೆಗಳು ನಡೆದಿದೆ. ಪದೇ ಪದೇ ಈ ರೀತಿ ಆಗುತ್ತಿರುವುದರಿಂದ ಸರ್ಕಾರ ಈಗ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಉಚಿತ ಪ್ರಯಾಣ ಮಾಡುವಾಗ, ಮಹಿಳೆಯರು ಬಸ್ ನಲ್ಲಿ ಶಿಸ್ತು ಕಾಪಾಡಬೇಕು ಎಂದು ಈ ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದು ಮಹಿಳೆಯರು ಹೆಚ್ಚಾಗಿ ಸರ್ಕಾರಿ ಬಸ್ ಗಳಲ್ಲಿ ಓಡಾಡುವ ಹಾಗೆ ಆಗಿರುವುದು, ರಾಜ್ಯದಲ್ಲಿ ಈಗ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಹೌದು, ಈಗ ಮಹಿಳೆಯರಿಂದ ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ಸರ್ಕಾರಿ ಬಸ್ ಗಳಿಗೆ ಬೇಡಿಕೆ ಕೂಡ ಜಾಸ್ತಿಯಾಗುದೆ.
ಹಾಗಾಗಿ ಸರ್ಕಾರ ಈಗ ರಾಜ್ಯದಲ್ಲಿ ಸರ್ಕಾರಿ ಬಸ್ ಗಳ ಸಂಖ್ಯೆಯನ್ನು ಜಾಸ್ತಿ ಮಾಡಿದೆ. ಜೊತೆಗೆ KSRTC Bus ಪ್ರಯಾಣದ ಟಿಕೆಟ್ಸ್ ಬೆಲೆಯನ್ನು ಸಹ ಜಾಸ್ತಿ ಮಾಡಿದೆ. ಸರ್ಕಾರ ಈ ನಿರ್ಧಾರ ಮಾಡಿರುವುದು ಒಂದು ಒಪ್ಪಂದದ ಜೊತೆಗೆ.
ಈ ಒಪ್ಪಂದದಲ್ಲಿ KSRTC ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ದರಗಳ ಪರಿಷ್ಕರಣೆ ಆಗಿರುವ ಬಗ್ಗೆ KSRTC ಈಗ ಅಧಿಕೃತವಾಗಿಯೇ ಮಾಹಿತಿ ನೀಡಿದೆ. ಈ ಹೊಸ ಬಸ್ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ಮಾಹಿತಿ ಸಿಕ್ಕಿದೆ..
ಈ ದಿನದಂದು ಮಹಿಳೆಯರ ಖಾತೆಗೆ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹2000 ಹಣ! ಅಕೌಂಟ್ ಚೆಕ್ ಮಾಡಿಕೊಳ್ಳಿ
ಈ ಹೊಸ ಆದೇಶವು ಈಗ ಚರ್ಚೆಗೆ ಒಳಗಾಗಿದೆ. ಹಾಗೆಯೇ ಈ ಆದೇಶದ ಅನುಸಾರ ಮೈಸೂರಿನಿಂದ ಗಂಟೆಗೆ ಒಂದು ವಾಹನ ಬರುತ್ತಿದ್ದ ವ್ಯವಸ್ಥೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ಒಟ್ಟಿನಲ್ಲಿ ಶಕ್ತಿ ಯೋಜನೆಯ ಎಫೆಕ್ಟ್ಸ್ ಜೋರಾಗಿಯೇ ತಟ್ಟುತ್ತಿದೆ. ಹೆಣ್ಣುಮಕ್ಕಳು ಈಗ ಹಣ ನೀಡದೆ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಈ ಬೆಲೆ ಏರಿಕೆ ಬಿಸಿ ತಟ್ಟುವುದು ಗಂಡಸರಿಗೆ.
ಸರ್ಕಾರ ಒಂದು ಕಡೆ ಫ್ರೀ ಯೋಜನೆ ಎಂದು ಕೊಟ್ಟು ಮತ್ತೊಂದು ಕಡೆ ಹೀಗೆ ಬೆಲೆ ಏರಿಕೆ ಮಾಡಿಕೊಂಡು ಹೋಗುತ್ತಿರುವುದು ಜನರ ದಿನನಿತ್ಯ ಜೀವನಕ್ಕೆ ತೊಂದರೆ ಆಗಲಿದೆ. ಶಕ್ತಿ ಯೋಜನೆ ಶುರುವಾದ ಬೆನ್ನಲ್ಲೇ ಗಂಡಸರು ತಮಗೂ ಕೂಡ ಯೋಜನೆಯ ಸೌಲಭ್ಯ ಸಿಗಬೇಕು ಎಂದು ಕೇಳಿಕೊಂಡಿದ್ದರು, ಬೇಡಿಕೆ ಇಟ್ಟಿದ್ದರು. ಆದರೆ ರಾಜ್ಯ ಸರ್ಕಾರ ಗಂಡಸರಿಗೆ ಇಂಥಾದ್ದೊಂದು ಶಾಕ್ ನೀಡಿದೆ. ಮುಂದೆ ಈ ಬೆಲೆ ಏರಿಕೆಯ ಪರಿಣಾಮ ಏನಾಗುತ್ತದೆ ಎಂದು ನೋಡಬೇಕಿದೆ.
KSRTC Bus Ticket Price Hike From 1st August
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.