ಬಿಪಿಎಲ್ ಕಾರ್ಡ್ ಇರುವ ಇಂಥಹವರಿಗೆ ಆಗಸ್ಟ್ 1ರಿಂದ ಇಲ್ಲ ರೇಷನ್! ಸರ್ಕಾರದಿಂದ ಮಹತ್ವದ ಆದೇಶ
ಅನ್ನಭಾಗ್ಯ ಯೋಜನೆಯ ಫಲ ನಿಮಗೆ ಸಿಗಬೇಕು ಎಂದರೆ ನಿಮ್ಮ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಸರ್ಕಾರದ ಎಲ್ಲಾ ನಿಯಮವನ್ನು ಪೂರೈಸಿರಬೇಕು.
ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ ಭರವಸೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು. ಬಿಪಿಎಲ್ ರೇಷನ್ ಕಾರ್ಡ್ (Ration Card) ಮಾತೃ ಅಂತ್ಯೋದಾಯ ಕಾರ್ಡ್ ಹೊಂದಿರುವ ಎಲ್ಲಾ ಸದಸ್ಯರಿಗೂ ತಿಂಗಳಿಗೆ 10ಕೆಜಿ ಕೊಡುವ ಭರವಸೆ ನೀಡಲಾಗಿತ್ತು.
ಆದರೆ ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ, 5ಕೆಜಿ ಅಕ್ಕಿ ಕೊಟ್ಟು ಇನ್ನು 5ಕೆಜಿಯ ಹಣವನ್ನು ರೇಷನ್ ಕಾರ್ಡ್ ಯಜಮಾನಿಯ ಬ್ಯಾಂಕ್ ಖಾತೆಗೆ ಹಾಕುವುದಾಗಿ ಸರ್ಕಾರ ತಿಳಿಸಿತ್ತು.
ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ 5ಕೆಜಿ ಅಕ್ಕಿಗೆ 170 ರೂಪಾಯಿಗಳನ್ನು ಪ್ರತಿ ವ್ಯಕ್ತಿಗೆ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ ಈ ಹಣ ಎಲ್ಲರಿಗೂ ಸಿಗುವುದಿಲ್ಲ. ಎಲ್ಲರೂ ಇದಕ್ಕೆ ಅರ್ಹರಾಗುವುದಿಲ್ಲ. ಯೋಜನೆಗೆ ಸಂಬಂಧಿಸಿದ ಹಾಗೆ ಎಲ್ಲಾ ನಿಯಮಗಳನ್ನು ಪಾಲಿಸದೆ ಹೋದರೆ, ಅಂಥವರಿಗೆ ಹೆಚ್ಚುವರಿ ಹಣ ಸಿಗುವುದಿಲ್ಲ ಎಂದು ಸರ್ಕಾರ ಆದೇಶ ನೀಡಿದೆ.
ಈ ದಿನದಂದು ಮಹಿಳೆಯರ ಖಾತೆಗೆ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹2000 ಹಣ! ಅಕೌಂಟ್ ಚೆಕ್ ಮಾಡಿಕೊಳ್ಳಿ
ಅನ್ನಭಾಗ್ಯ ಯೋಜನೆಯ ಫಲ ನಿಮಗೆ ಸಿಗಬೇಕು ಎಂದರೆ ನಿಮ್ಮ ಬಿಪಿಎಲ್ ಕಾರ್ಡ್ (BPL Card) ಅಥವಾ ಅಂತ್ಯೋದಯ ಕಾರ್ಡ್ ಸರ್ಕಾರದ ಎಲ್ಲಾ ನಿಯಮವನ್ನು ಪೂರೈಸಿರಬೇಕು.
ಈ ನಿಯಮಗಳು ಏನೇನು ಎಂದರೆ, ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ನಲ್ಲಿ ಒಂದೇ ಒಂದು ತಪ್ಪು ಮಾಹಿತಿ ಕೂಡ ಇರಬಾರದು. ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿರುವ ಬ್ಯಾಂಕ್ ಖಾತೆಗೆ ಲಿಂಕ್ (Bank Account Link) ಆಗಿರಬೇಕು.
ನಿಮ್ಮ ಬ್ಯಾಂಕ್ ಅಕೌಂಟ್ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಅನ್ನೇ ರೇಷನ್ ಕಾರ್ಡ್ ಗು ಲಿಂಕ್ ಮಾಡಿರಬೇಕು. ಇಷ್ಟೆಲ್ಲಾ ನಿಯಮಗಳನ್ನು ಪಾಲಿಸಿದ್ದರೆ ಮಾತ್ರ ನಿಮಗೆ ಹೆಚ್ಚುವರಿ ಹಣ ಸಿಗುತ್ತದೆ.
ಸಿಹಿ ಸುದ್ದಿ! ಹೊಸದಾಗಿ ಬಿಪಿಎಲ್ ಕಾರ್ಡ್ ಅಪ್ಲೈ ಮಾಡಿರುವವರಿಗೆ ಆಗಸ್ಟ್ ತಿಂಗಳಲ್ಲೇ ಕಾರ್ಡ್ ಸಿಗುವುದು ಗ್ಯಾರಂಟಿ
ಹಾಗೆಯೇ ಇಕೆವೈಸಿ ಆಗಿರುವುದು ಇಲ್ಲಿ ಮತ್ತೊಂದು ಪ್ರಮುಖವಾದ ಅಂಶ. ಬ್ಯಾಂಕ್ ಅಕೌಂಟ್ (Bank Account) ನಿಷ್ಕ್ರಿಯವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು, ಆಧಾರ್ ಕಾರ್ಡ್ ಲಿಂಕ್ (Aadhaar Card Link) ಆಗಿಲ್ಲದೆ ಇದ್ದರೆ ಲಿಂಕ್ ಮಾಡಿಸಬೇಕು, ಆಕ್ಟಿವ್ ಆಗಿರುವ ಬ್ಯಾಂಕ್ ಅಕೌಂಟ್ ಮಾತ್ರ ಆಧಾರ್ ಕಾರ್ಡ್ ಗೆ ಮತ್ತು ರೇಶನ್ ಕಾರ್ಡ್ ಗೆ ಲಿಂಕ್ ಆಗಿರಬೇಕು.
ಅಂತ್ಯೋದಯ ಅನ್ನಭಾಗ್ಯ ಕಾರ್ಡ್ ಇರುವವರು ಇನ್ನು ಕೆವೈಸಿ ಮಾಡಿಸದೆ ಇದ್ದರೆ, ಅದನ್ನು ಜುಲೈ 20ರ ಒಳಗೆ ಮಾಡಿಸಬೇಕು ಎಂದು ಆಹಾರ ಸಚಿವಾಲಯ ಮಾಹಿತಿ ನೀಡಿತ್ತು.
ಅಂತ್ಯೋದಯ ಕಾರ್ಡ್ ಇರುವವರಿಗೆ ಈಗಾಗಲೇ ಅನ್ನಭಾಗ್ಯ ಯೋಜನೆಯಲ್ಲಿ 21ಕೆಜಿ ಅಕ್ಕಿ ಹಾಗೂ 14ಕೆಜಿ ಜೋಳ ಫ್ರೀಯಾಗಿ ಕೊಡಲಾಗುತ್ತಿದೆ. ಹಾಗಾಗಿ ಈ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ನಲ್ಲಿ 3ಕ್ಕಿಂತ ಹೆಚ್ಚು ಸದಸ್ಯರಿದ್ದರೆ, ಅವರಿಗೆ ಮಾತ್ರ ಒಬ್ಬ ವ್ಯಕ್ತಿಗೆ 170 ರೂಪಾಯಿ ಹಣ ಸಿಗುತ್ತದೆ.
3 ಅಥವಾ ಮೂರಕ್ಕಿಂತ ಕಡಿಮೆ ಜನರಿದ್ದರೆ ಈ ಸೌಲಭ್ಯ ಸಿಗುವುದಿಲ್ಲ. ಹಾಗೆಯೇ ಮತ್ತೊಂದು ಮುಖ್ಯವಾದ ಆದೇಶ ಏನು ಎಂದರೆ, ಯಾವ ರೇಷನ್ ಕಾರ್ಡ್ ದಾರರು ಇಕೆವೈಸಿ ಮಾಡಿಸಿಲ್ಲವೋ, ಅವರ ರೇಷನ್ ಕಾರ್ಡ್ ಗಳಿಗೆ ಅಕ್ಕಿ ರೇಷನ್ ಪೂರೈಕೆ ಮತ್ತು ಹಣ ವರ್ಗಾವಣೆ ಎರಡನ್ನು ಕೂಡ ಸಧ್ಯದ ಮಟ್ಟಕ್ಕೆ ನಿಲ್ಲಿಸಲಾಗುತ್ತದೆ ಎಂದು ಸರ್ಕಾರ ಸೂಚನೆ ನೀಡಿದೆ.
ಈ ಜನರಿಗಿಲ್ಲ ಗೃಹಜ್ಯೋತಿ ಭಾಗ್ಯ, ಇವರು ಕರೆಂಟ್ ಬಿಲ್ ಕಟ್ಟಲೇಬೇಕು! ಸರ್ಕಾರದಿಂದ ಹೊಸ ಸೂಚನೆ!
No ration for such BPL card holders from August 1