ಈ ಜನರಿಗಿಲ್ಲ ಗೃಹಜ್ಯೋತಿ ಭಾಗ್ಯ, ಇವರು ಕರೆಂಟ್ ಬಿಲ್ ಕಟ್ಟಲೇಬೇಕು! ಸರ್ಕಾರದಿಂದ ಹೊಸ ಸೂಚನೆ!

Gruha Jyothi Scheme : ಈಗಾಗಲೇ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿ ಶುರುವಾಗಿದೆ. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ಅನುಕೂಲ ಅಗುವಂಥ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ರಾಜ್ಯದ ಜನರು ಹಣಕಾಸಿನ ವಿಷಯದಲ್ಲಿ ತೊಂದರೆ ಅನುಭವಿಸಬಾರದು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಆಗಿರಬೇಕು, ರೈತರಿಗೆ ಸಹಾಯ ಆಗಬೇಕು ಎಂದು ಸಾಕಷ್ಟು ಸ್ಕೀಮ್ ಗಳು ಜಾರಿಗೆ ಬಂದಿದೆ. ಜೊತೆಗೆ ಸರ್ಕಾರದ ಹೊಸ 5 ಯೋಜನೆಗಳು ಕೂಡ ಇದೆ.

ಸರ್ಕಾರದ ಯೋಜನೆಗಳಿಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಶಕ್ತಿ ಯೋಜನೆ ಎಲ್ಲಾ ಮಹಿಳೆಯರಿಗೆ ಸರ್ಕಾರದ ಬಸ್ ಗಳಲ್ಲಿ ಉಚಿತ ಪ್ರಯಾಣ ನೀಡುವ ಯೋಜನೆ ಆಗಿದ್ದು, ಈ ಯೋಜನೆಯ ಮೂಲಕ ರಾಜ್ಯಾದ್ಯಂತ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಎಲ್ಲರಿಗೂ ಸಿಗುತ್ತೆ ಫ್ರೀ ಲ್ಯಾಪ್ ಟಾಪ್! ಇಂದೇ ಅರ್ಜಿ ಸಲ್ಲಿಸಿ

ಇನ್ನು ಮಹಿಳೆಯರಿಗಾಗಿ ಇರುವ ಮತ್ತೊಂದು ಯೋಜನೆ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಅರ್ಜಿ ಸಲ್ಲಿಕೆ ಶುರುವಾಗಿದೆ. ಯುವಪೀಳಿಗೆಗೆ ಸಹಾಯ ಮಾಡುವ ಯುವನಿಧಿ ಯೋಜನೆ ಈ ವರ್ಷಾಂತ್ಯದಲ್ಲಿ ಶುರುವಾಗಬಹುದು ಎನ್ನಲಾಗುತ್ತಿದ್ದು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಮುಂದಿನ ತಿಂಗಳಿನಿಂದಲೇ 5ಕೆಜಿ ಅಕ್ಕಿ ಮತ್ತು ಇನ್ನು 5 ಕೆಜಿಯ ಹಣ ಜನರಿಗೆ ತಲುಪಲಿದೆ..

ಇನ್ನು ಗೃಹಜ್ಯೋತಿ ಯೋಜನೆಯ (Gruha Jyothi Scheme) ಬಗ್ಗೆ ಈಗ ಹೊಸ ಅಪ್ಡೇಟ್ ಸಿಕ್ಕಿದೆ. ಆಗಸ್ಟ್ ಇಂದಲೇ ಉಚಿತ ವಿದ್ಯುತ್ ಪಡೆಯಲು, ಜುಲೈ 27ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು. ಈಗ ಕೊನೆಯ ದಿನಾಂಕದ ಗಡುವು ಮುಗಿದು ಹೋಗಿದೆ.

Gruha Jyothi Schemಗೃಹಜ್ಯೋತಿ ಯೋಜನೆಗೆ ಇನ್ನು ಅರ್ಜಿ ಸಲ್ಲಿಸದೆ ಇರುವವರು ಆಗಸ್ಟ್ ತಿಂಗಳ ಕರೆಂಟ್ ಬಿಲ್ (Electricity Bill) ಕಟ್ಟಬೇಕಾಗುತ್ತದೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿರುವವರ ಅರ್ಜಿ ಪರಿಷ್ಕರಣೆ ಆಗಬೇಕು ಅದಾದ ಬಳಿಕ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ (Free Electricity) ಸಿಗುತ್ತದೆ.

ಬಿಪಿಎಲ್ ಕಾರ್ಡ್ ಇರುವ ಮಹಿಳೆಯರಿಗೆ ಗೃಹಲಕ್ಷ್ಮಿ ಜೊತೆಗೆ ಮತ್ತೊಂದು ಯೋಜನೆ ಜಾರಿ! ಇಂದೇ ಅರ್ಜಿ ಸಲ್ಲಿಸಿ!

ಜನರ ನಿರೀಕ್ಷೆ ಏನಿತ್ತು ಎಂದರೆ, ಜುಲೈ ಇಂದಲೇ ಎಲೆಕ್ಟ್ರಿಸಿಟಿ ಬಿಲ್ ಕಡಿಮೆ ಬರಬಹುದು ಎಂದುಕೊಂಡಿದ್ದರು. ಆದರೆ ಆ ರೀತಿ ಆಗದೆ, ಬಿಲ್ ಜಾಸ್ತಿಯೇ ಬಂದಿದೆ. ಇದರಿಂದ ಜನರಲ್ಲಿ ಅಪ್ಲಿಕೇಶನ್ ನಲ್ಲಿ ಏನಾದರೂ ಸಮಸ್ಯೆ ಆಗಿದ್ಯಾ ಎಂದು ಆತಂಕ ಶುರುವಾಗಿದೆ.

ಆದರೆ ಈ ರೀತಿ ಆಗುವುದಕ್ಕೆ ಕಾರಣ ಏನು ಎಂದರೆ, ಗೃಹಜ್ಯೋತಿ ಯೋಜನೆ ಇನ್ನು ಜಾರಿಯಾಗಿಲ್ಲ, ಅರ್ಜಿ ಪರಿಶೀಲನೆ ಮಾಡುವ ಹಂತದಲ್ಲಿದೆ. ಹಾಗಾಗಿ ಆಗಸ್ಟ್ ತಿಂಗಳ ಬಿಲ್ ಇಂದ ಗೃಹಜ್ಯೋತಿಯ ಸೌಲಭ್ಯ ಸಿಗಬಹುದು ಎನ್ನಲಾಗಿದೆ.. ಈ ಕಾರಣಕ್ಕೆ ನೀವು ಜೂನಲ್ಲಿ ಕರೆಂಟ್ ಬಿಲ್ ಕಟ್ಟಿದ ಹಾಗೆ ಜುಲೈ ತಿಂಗಳ ಬಿಲ್ ಕೂಡ ಕಟ್ಟಬೇಕು.

ಈಗ ಅರ್ಜಿ ಸಲ್ಲಿಕೆ ನಡೆಯುತ್ತಿದೆ, ಇದಕ್ಕಾಗಿ ಯಾವುದೇ ಲಾಸ್ಟ್ ಡೇಟ್ ಎಂದು ನಿಗದಿ ಮಾಡಿಲ್ಲ. ಹಾಗಾಗಿ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು. ಇದರಲ್ಲಿ 200 ಯೂನಿಟ್ ವರೆಗು ಉಚಿತ ವಿದ್ಯುತ್ ಸಿಗಲಿದ್ದು, ಜೊತೆಗೆ 10% ಹೆಚ್ಚು ವಿದ್ಯುತ್ ಬಳಸುವ ಅವಕಾಶ ಇದೆ.

ತೆರಿಗೆ ಕಟ್ಟೋ ಮಗ ಅಥವಾ ಮಗಳಿದ್ರೆ ತಾಯಿಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಾ? ಕೊನೆ ಗಳಿಗೆಯಲ್ಲಿ ಹೊಸ ರೂಲ್ಸ್

ಇದನ್ನು ಸರ್ಕಾರವು ನಿರ್ಧರಿಸುವುದು, ನಿಮ್ಮ ಮನೆಯಲ್ಲಿ ಕಳೆದ 1 ವರ್ಷಗಳಲ್ಲಿ ಎಷ್ಟು ಯೂನಿಟ್ ವಿದ್ಯುತ್ ಬಳಕೆ ಆಗಿದೆ ಎನ್ನುವುದರ ಆವರೇಜ್ ಪಡೆದು, ಅಷ್ಟು ವಿದ್ಯುತ್ ಜೊತೆಗೆ 10% ಹೆಚ್ಚುವರಿ ವಿದ್ಯುತ್ ಫ್ರೀಯಾಗಿ ಸಿಗುತ್ತದೆ..ಜುಲೈ ನಲ್ಲಿ ನೀವು ಬಿಲ್ ಕಟ್ಟಬೇಕು, ಆಗಸ್ಟ್ ಸೆಪ್ಟೆಂಬರ್ ಇಂದ ನೀವು ಗೃಹಜ್ಯೋತಿಯ ಉಚಿತ ವಿದ್ಯುತ್ ಸೌಲಭ್ಯ ಪಡೆಯಬಹುದು.

Karnataka Government New Rules on Free Electricity Scheme Gruha Jyothi

Related Stories