ಸಿಹಿ ಸುದ್ದಿ! ಹೊಸದಾಗಿ ಬಿಪಿಎಲ್ ಕಾರ್ಡ್ ಅಪ್ಲೈ ಮಾಡಿರುವವರಿಗೆ ಆಗಸ್ಟ್ ತಿಂಗಳಲ್ಲೇ ಕಾರ್ಡ್ ಸಿಗುವುದು ಗ್ಯಾರಂಟಿ

Story Highlights

ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಮುಖ್ಯವಾಗಿ ರೇಷನ್ ಕಾರ್ಡ್ ಬೇಕೇ ಬೇಕು. ಹಾಗಾಗಿ ಬಿಪಿಎಲ್ ಕಾರ್ಡ್ ಇರದ ಹೆಚ್ಚಿನ ಜನರು ಈಗ ಹೊಸದಾಗಿ ಕಾರ್ಡ್ ಮಾಡಿಸಲು ಅರ್ಜಿ ಹಾಕಿದ್ದಾರೆ.

ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಕೊಟ್ಟಿದ್ದ ಭರವಸೆಗಳ 5 ಯೋಜನೆಯನ್ನ ಜಾರಿಗೆ ತರುವ ಕೆಲಸದಲ್ಲಿದೆ. ಈಗಾಗಲೇ ಶಕ್ತಿ ಯೋಜನೆಯ ಫಲವನ್ನು ಎಲ್ಲಾ ಹೆಣ್ಣುಮಕ್ಕಳು ಉಚಿತವಾಗಿ ಬಸ್ ಪ್ರಯಾಣ ಮಾಡುವ ಮೂಲಕ ಈ ಸೌಲಭ್ಯ ಪಡೆಯುತ್ತಿದ್ದಾರೆ.

ಮತ್ತೊಂದು ಸೌಲಭ್ಯ ಗೃಹಲಕ್ಷ್ಮೀ ಯೋಜನೆ (Gruha Lakshmi Yojane). ಈ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ ಗೆ ತಿಂಗಳಿಗೆ ₹2000 ರೂಪಾಯಿ ಹಾಕಾಲಾಗುತ್ತದೆ. ಈ ಯೋಜನೆಗೆ ಅರ್ಜಿ ಪ್ರಕ್ರಿಯೆ ಶುರುವಾಗಿದೆ..

ಇನ್ನು ಗೃಹಜ್ಯೋತಿ ಯೋಜನೆಯ (Gruha Jyothi Yojane)ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ಎಲೆಕ್ಟ್ರಿಸಿಟಿ ನೀಡಲಿದ್ದು, ಈ ಯೋಜನೆಗು ಸಹ ಅರ್ಜಿ ಪ್ರಕ್ರಿಯೆ ಶುರುವಾಗಿದೆ. ಜನರು ಇವುಗಳಿಗೆ ಅರ್ಜಿ ಸಲ್ಲಿಸಲು ಕ್ಯೂ ನಿಂತಿದ್ದು, ಆಗಸ್ಟ್ ನಲ್ಲಿ ಈ ಯೋಜನೆಗಳು ಜಾರಿಗೆ ಬರುವ ಸಾಧ್ಯತೆ ಇದೆ.

ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರಿಗೆ ಗುಡ್ ನ್ಯೂಸ್! ಹೊಸ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ, ಖುಷಿಯಲ್ಲಿ ಜನತೆ

ಇನ್ನು ನಾಲ್ಕನೆಯ ಮತ್ತು ಪ್ರಮುಖವಾದ ಯೋಜನೆ ಅನ್ನಭಾಗ್ಯ ಯೋಜನೆ (Annabhagya Yojana) ಆಗಿದೆ. ಈ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ಉಚಿತ ಅಕ್ಕಿ ನೀಡುವ ಯೋಜನೆ ಇದು. ಇದು ಸಹ ಈ ತಿಂಗಳು ಶುರುವಾಗಿದೆ.

ಅನ್ನಭಾಗ್ಯ ಯೋಜನೆಯ ಕೆಲವು ತೊಂದರೆಗಳು ಇದ್ದವು, ಮೊದಲಿಗೆ ಸರ್ಕಾರವು ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿ ಕೊಡುವುದಾಗಿ ಹೇಳಿತು, ಆದರೆ ಅಷ್ಟು ಅಕ್ಕಿ ಪ್ರತಿ ತಿಂಗಳು ಹೊಂದಿಸಲು ಸಾಧ್ಯವಿಲ್ಲ ಎಂದು ತಿಂಗಳಿಗೆ 5 ಕೆಜಿ ಕೊಟ್ಟು, ಇನ್ನು 5 ಕೆಜಿ ಅಕ್ಕಿಯ ಹಣವನ್ನು ರೇಷನ್ ಕಾರ್ಡ್ ನಲ್ಲಿರುವ ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ ಗೆ ಹಾಕುವುದಾಗಿ ತಿಳಿಸಿತು.

BPL Ration Cardಈ ಸೌಲಭ್ಯದ ಹಣ ಪಡೆಯಲು, ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ (Bank Account) ಆಧಾರ್ ಕಾರ್ಡ್ ಗೆ ಮತ್ತು ರೇಷನ್ ಕಾರ್ಡ್ ಗೆ ಲಿಂಕ್ ಆಗಿದ್ದರೆ ಸಾಕು ಎಂದು ಆಹಾರ ಇಲಾಖೆ ಅಧಿಕೃತವಾದ ಸೂಚನೆ ನೀಡಿದೆ.

ಬಿಪಿಎಲ್ ಕಾರ್ಡ್ ಇರುವವರಿಗೆ 5 ಲಕ್ಷದ ಜೊತೆಗೆ ಫ್ರೀ ಹೆಲ್ತ್ ಕಾರ್ಡ್ ಸಿಗಲಿದೆ ! ಸರ್ಕಾರದಿಂದ ಗುಡ್ ನ್ಯೂಸ್

ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಮುಖ್ಯವಾಗಿ ರೇಷನ್ ಕಾರ್ಡ್ ಬೇಕೇ ಬೇಕು. ಹಾಗಾಗಿ ಬಿಪಿಎಲ್ ಕಾರ್ಡ್ (BPL Card) ಇರದ ಹೆಚ್ಚಿನ ಜನರು ಈಗ ಹೊಸದಾಗಿ ಕಾರ್ಡ್ ಮಾಡಿಸಲು ಅರ್ಜಿ ಹಾಕಿದ್ದಾರೆ.

ಇನ್ನು ಸಾಕಷ್ಟು ಜನರು ಹೊಸ ರೇಶನ್ ಕಾರ್ಡ್ (Ration Card) ಮಾಡಿಸಲು ಈಗಲೂ ಅರ್ಜಿ ಹಾಕುತ್ತಿದ್ದು, ಅವರಿಗೆಲ್ಲಾ ಆಗಸ್ಟ್ ಇಂದಲೇ ಅನ್ನಭಾಗ್ಯ ಯೋಜನೆಯ ಫಲ ಸಿಗಬಹುದು ಎಂದು ಹೇಳಲಾಗುತ್ತಿದೆ.

ಈಗ ಆಹಾರ ಇಲಾಖೆ ಮತ್ತು ಸರ್ಕಾರದ ಕಡೆಯಿಂದ ಸಿಕ್ಕಿರುವ ಮಾಹಿತಿ ಏನು ಎಂದರೆ, ಈಗ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕುತ್ತಿರುವವರಿಗೆ ಅಥವಾ ಇತ್ತೀಚೆಗೆ ಸರ್ಕಾರದ ಯೋಜನೆಗಾಗಿ ಅರ್ಜಿ ಹಾಕಬೇಕು ಎಂದುಕೊಂಡಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ.

ಈ ಜನರಿಗಿಲ್ಲ ಗೃಹಜ್ಯೋತಿ ಭಾಗ್ಯ, ಇವರು ಕರೆಂಟ್ ಬಿಲ್ ಕಟ್ಟಲೇಬೇಕು! ಸರ್ಕಾರದಿಂದ ಹೊಸ ಸೂಚನೆ!

ಈಗ ಹೊಸದಾಗಿ ಅರ್ಜಿ ಸಲ್ಲಿಸುತ್ತಿರುವವರು ಸರ್ಕಾರಕ್ಕೆ ಟ್ಯಾಕ್ಸ್ ಪಾವತಿ ಮಾಡದೆ ಇರುವವರಾದರೆ ಆಗಸ್ಟ್ ನಲ್ಲೇ ಹೊಸ ರೇಷನ್ ಕಾರ್ಡ್ ಸಿಗಲಿದ್ದು, ಆಗಸ್ಟ್ ಇಂದಲೇ ಅನ್ನಭಾಗ್ಯ ಯೋಜನೆಯ ಫಲ ಪಡೆಯಬಹುದು. ಇದು ನಿಜವೇ ಎಂದು ತಿಳಿಯಲು ಆಗಸ್ಟ್ ವರೆಗು ಕಾಯಬೇಕಿದೆ. ಇನ್ನು ರೇಷನ್ ಕಾರ್ಡ್ ಇಲ್ಲದೆ, ಅನ್ನಭಾಗ್ಯ ಯೋಜನೆಯ ಸೌಲಭ್ಯವಂತು ಸಿಗುವುದಿಲ್ಲ.

New BPL card applicants are guaranteed to get the card in the month of August

Related Stories