ಬಿಪಿಎಲ್ ಕಾರ್ಡ್ ಇರುವವರಿಗೆ 5 ಲಕ್ಷದ ಜೊತೆಗೆ ಫ್ರೀ ಹೆಲ್ತ್ ಕಾರ್ಡ್ ಸಿಗಲಿದೆ ! ಸರ್ಕಾರದಿಂದ ಗುಡ್ ನ್ಯೂಸ್

ಈಗ ಸಾಕಷ್ಟು ಜನರು ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದು, ತಮಗೆ ಹೊಸ ಕಾರ್ಡ್ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಕೆಲವರು ಬಿಪಿಎಲ್ ಕಾರ್ಡ್ ಮಾಡಿಸುವುದು ಆರೋಗ್ಯ ಸೌಲಭ್ಯಕ್ಕಾಗಿ ಮಾತ್ರ, ಅಂಥವರಿಗೆ ಬಿಪಿಎಲ್ ಕಾರ್ಡ್ (BPL Card) ಯಾವಾಗ ಸಿಗುತ್ತದೆ? ಅದರಿಂದ ಅವರ ಆರೋಗ್ಯಕ್ಕೆ ಏನೆಲ್ಲಾ ಒಳ್ಳೆಯದಾಗಲಿದೆ ಎಂದು ತಿಳಿಸುತ್ತೇವೆ.
ಜೊತೆಗೆ ಬಿಪಿಎಲ್ ಕಾರ್ಡ್ ಹೆಲ್ತ್ ಕಾರ್ಡ್ (Health Card) ಬಗ್ಗೆ ಇಂದು ನಿಮಗೆ ಪೂರ್ತಿ ಮಾಹಿತಿ ನೀಡುತ್ತೇವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದಿದೆ. ಕಾಂಗ್ರೆಸ್ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಈ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ಜನರ ಹತ್ತಿರ ಬಿಪಿಎಲ್ ರೇಶನ್ ಕಾರ್ಡ್ (BPL Ration Card) ಇರಲೇಬೇಕು ಎಂದು ಕಡ್ಡಾಯ ಮಾಡಲಾಗಿದೆ.
ಈ ಜನರಿಗಿಲ್ಲ ಗೃಹಜ್ಯೋತಿ ಭಾಗ್ಯ, ಇವರು ಕರೆಂಟ್ ಬಿಲ್ ಕಟ್ಟಲೇಬೇಕು! ಸರ್ಕಾರದಿಂದ ಹೊಸ ಸೂಚನೆ!
ಹಾಗಾಗಿ ಹೆಚ್ಚು ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ವೇಳೆ ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕುತ್ತಿರುವವರ ಸಂಖ್ಯೆ ಜಾಸ್ತಿ ಆಗಿದೆ, ಆದರೆ ರಾಜ್ಯ ಸರ್ಕಾರವು ಜನರಿಗೆ ಭರವಸೆ ನೀಡಿದೆ. ಕೇಂದ್ರ ಸರ್ಕಾರ ನೀಡಿರುವ ಮಿತಿಗಿಂತ ಹೆಚ್ಜು ರೇಷನ್ ಕಾರ್ಡ್ ವಿತರಿಸುವುದಾಗಿ ಹೇಳಿದೆ.
ಆದರೆ ಬಿಪಿಎಲ್ ಕಾರ್ಡ್ ಅನ್ನು ಕೇವಲ ಹೆಲ್ತ್ ಕಾರ್ಡ್ ಮಾಡಿಸಲು ಬಳಸುವವರಿಗೆ ಆತಂಕ ಆಗಿದ್ದಂತು ನಿಜ, ಆದರೆ ಸರ್ಕಾರ ಈಗ ಹೆಲ್ತ್ ಕಾರ್ಡ್ ಮಾಡಿಸುವವರಿಗೆ ಗುಡ್ ನ್ಯೂಸ್ ನೀಡಿದೆ. ಆಂಧ್ರಪ್ರದೇಶ ರಾಜ್ಯದಲ್ಲಿ ಬೇರೆ ರೀತಿಯಲ್ಲಿ ಜನರಿಗೆ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ, ನಮ್ಮ ರಾಜ್ಯದಲ್ಲಿ ಕೂಡ ಆ ರೀತಿ ಯಾಕೆ ಮಾಡಬಾರದು ಎನ್ನುವ ಪ್ರಶ್ನೆಯೊಂದು ಸದನ ಸಂಸತ್ತಿನಲ್ಲಿ ಮಾಧ್ಯಮದವರಿಂದ ಶುರುವಾದಾಗ, ಕೆ.ಹೆಚ್ ಮುನಿಯಪ್ಪ ಅವರು ಈ ಬಗ್ಗೆ ಮಾತನಾಡಿದ್ದಾರೆ..

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಎಲ್ಲರಿಗೂ ಸಿಗುತ್ತೆ ಫ್ರೀ ಲ್ಯಾಪ್ ಟಾಪ್! ಇಂದೇ ಅರ್ಜಿ ಸಲ್ಲಿಸಿ
ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇರುವವರಿಗೆ ಸೂಚನೆಗಳು, ಮಾನದಂಡಗಳು ಇದೆಲ್ಲವನ್ನು ಪೂರೈಸಲು ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈಗ ನಮ್ಮ ರಾಜ್ಯದಲ್ಲಿ ಏನಾಗಿದೆ ಎಂದರೆ, ನಮ್ಮ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಇರುವ 5ಲಕ್ಷ ಜನರು 3 ತಿಂಗಳಿನಿಂದ ರೇಷನ್ ಪಡೆದಿಲ್ಲ ಎಂದರೆ, ಅವರಿಗೆ ಅರ್ಹತೆ ಇಲ್ಲ ಎಂದು ಅರ್ಥವಲ್ಲ. ಹಲವರು ಆರೋಗ್ಯದ ಕಾರಣಕ್ಕೆ ಮಾತ್ರ ಬಳಸುತ್ತಾರೆ ಎಂದು ನಮಗೆ ಗೊತ್ತಾಗಿದೆ.. ಎಂದು ಹೇಳಿದ್ದಾರೆ.
ಆರೋಗ್ಯ ಕಾರಣಕ್ಕಾಗಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುವವರಿಗೆ ಆಯುಶ್ಮಾನ್ ಭಾರತ್ ಕಾರ್ಡ್ ಸಿಗಲಿದೆ. ಈ ಕಾರ್ಡ್ ನಲ್ಲಿ ಕಷ್ಟದಲ್ಲಿ ಇರುವವರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿಯವರೆಗು ಆರೋಗ್ಯ ವಿಮೆಯ ಸೌಲಭ್ಯ ಸಿಗುತ್ತದೆ.
ಬಿಪಿಎಲ್ ಕಾರ್ಡ್ ಇರುವ ಮಹಿಳೆಯರಿಗೆ ಗೃಹಲಕ್ಷ್ಮಿ ಜೊತೆಗೆ ಮತ್ತೊಂದು ಯೋಜನೆ ಜಾರಿ! ಇಂದೇ ಅರ್ಜಿ ಸಲ್ಲಿಸಿ!
ಈಗ ಮನೆ ಮನೆ ಸಮೀಕ್ಷೆ ಜಾರಿಗೆ ಬರಲಿದ್ದು, ಇದರಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಎರಡು ಕಾರ್ಡ್ ಗಳನ್ನು ಹೊಂದಿರುವ ಕುಟುಂಬಗಳ ಮನೆಗೆ ಭೇಟಿ ನೀಡಿ, ಅವರಿಂದ ಎಲ್ಲಾ ಮಾಹಿತಿ ಸಂಗ್ರಹಿಸುತ್ತಾರೆ. ಬಿಪಿಎಲ್ ಕಾರ್ಡ್ ಇರುವವರು ತಮಗೆ ರೇಷನ್ ಬೇಡ, ಆರೋಗ್ಯದ ಕಾರಣಕ್ಕೆ ಮಾತ್ರ ಬೇಕು ಎಂದು ಹೇಳಿದರೆ ಅಷ್ಟೇ ಸಾಕು ದಾಖಲಿಸಿಕೊಳ್ಳಲಾಗುತ್ತದೆ.. ಎಂದು ಹೇಳಿದ್ದಾರೆ.
5 Lakhs From Health Card Through BPL Ration Card



