ಚಿಂತಾಮಣಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ! ರಸ್ತೆ ಮದ್ಯೆ ಮಚ್ಚಿನಿಂದ ದಾಳಿ
ಚಿಂತಾಮಣಿ ನಗರದ ರಾಮಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಆತನ ಮೇಲೆ ಮಚ್ಚಿನ ದಾಳಿ ನಡೆದಿದೆ. ಕೊಲೆಗೆ ಮೂಲ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- ಚಿಂತಾಮಣಿಯಲ್ಲಿ ಬರ್ಬರ ಹತ್ಯೆ!
- ಕೊಲೆಯ ಶಂಕಿತನಿಗಾಗಿ ಪೊಲೀಸ್ ಬಲೆ
- ಹತ್ಯೆಯ ಹಿಂದೆ ವ್ಯಕ್ತಿಗತ ವೈಷಮ್ಯ ಶಂಕೆ
ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapur district) ಚಿಂತಾಮಣಿ ನಗರದಲ್ಲಿ (Chintamani) ಭೀಕರ ಕೊಲೆ ನಡೆದಿದ್ದು, ನಾಗದೇನಹಳ್ಳಿ ಮೂಲದ ರಾಮಸ್ವಾಮಿ (45) ಹತ್ಯೆಯಾದ ವ್ಯಕ್ತಿ. ತಡರಾತ್ರಿ ದೇವಾಲಯದಿಂದ ಮನೆಯತ್ತ ತೆರಳುತ್ತಿದ್ದಾಗ ಅಪರಿಚಿತನೊಬ್ಬ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ರಾಮಸ್ವಾಮಿ ತಮ್ಮ ವ್ಯವಹಾರದಲ್ಲಿಯೇ ನಿರತವಾಗಿದ್ದರು. ಟ್ರ್ಯಾಕ್ಟರ್, ಜೆಸಿಬಿ, ಟಿಪ್ಪರ್ ಇಟ್ಟುಕೊಂಡಿದ್ದ ಅವರು, ಸ್ಥಳೀಯವಾಗಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಹತ್ಯೆಗೆ ಪಿತೂರಿ ಏನೆಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ರೈಲ್ವೆ ನಿಲ್ದಾಣದ ಬಳಿ ಮಹಿಳೆ ಮುಖದ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ
ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಕೊಲೆ ನಡೆದ ಸ್ಥಳದಲ್ಲಿ ಶಂಕಿತನ ಸಿಸಿಟಿವಿ ದೃಶ್ಯಾವಳಿ ಸಿಕ್ಕಿದ್ದು, ಪೊಲೀಸರು ತನಿಖೆಯನ್ನು ವೇಗಗೊಳಿಸಿದ್ದಾರೆ. ಹತ್ಯೆಯ ಹಿಂದೆ ವೈಯಕ್ತಿಕ ವೈಷಮ್ಯ ಇರಬಹುದೆಂದು ಶಂಕಿಸಲಾಗಿದೆ.
ಇತರ ಅನುಮಾನಗಳು:
ರಾಮಸ್ವಾಮಿ ಅವರ ಜೆಸಿಬಿ ಚಾಲಕ ನಾಗೇಶ ಎಂಬುವ ವ್ಯಕ್ತಿಯನ್ನು ಕೆಲ ದಿನಗಳ ಹಿಂದೆ ಕೆಲಸದಿಂದ ತೆಗೆದುಹಾಕಿದ ಕುರಿತು ಮಾಹಿತಿ ಲಭ್ಯವಾಗಿದೆ. ಇದೇ ಕಾರಣಕ್ಕೆ ನಾಗೇಶ್ ಕೊಲೆಗೆ ಮುಂದಾದನೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿ, ಜಾನುವಾರು ಹುಡುಕಲು ಹೋಗಿದ್ದ ಮಹಿಳೆ ಸಾವು
ತನಿಖಾ ಪ್ರಗತಿ:
ಕೊಲೆಯ ನಂತರ ಶಂಕಿತನು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಸಿಸಿಟಿವಿ ಫುಟೇಜ್ ಆಧಾರದ ಮೇಲೆ ಆತನ ಪತ್ತೆಗೆ ಶ್ರಮಿಸುತ್ತಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲಿಯೇ ಹೆಚ್ಚಿನ ಮಾಹಿತಿಯ ನಿರೀಕ್ಷೆಯಿದೆ.
Man Brutally Murdered in Chintamani
Our Whatsapp Channel is Live Now 👇