ಪ್ರಿಯಾಂಕಾ ಮಿಸ್ಸಿಂಗ್ ಕೇಸ್‌: ಹೈಡ್ರಾಮಾ ಬಯಲು, ಪರಪುರುಷನ ಜೊತೆ ಆಂಟಿ ಖತರ್ನಾಕ್ ಪ್ಲ್ಯಾನ್

ಹಾಸನದಲ್ಲಿ ನಾಪತ್ತೆಯಾದ ಪ್ರಿಯಾಂಕಾ ಪ್ರಕರಣಕ್ಕೆ ರೋಚಕ ತಿರುವು; ಆತ್ಮಹತ್ಯೆ, ಕೊಲೆ ಶಂಕೆ ನಡುವೆಯೇ ಪ್ರಿಯಕರನ ಜೊತೆ ಎಸ್ಕೇಪ್ ಪ್ಲ್ಯಾನ್ ಬಯಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

  • ಪ್ರಿಯಾಂಕಾ ಮಿಸ್ಸಿಂಗ್ ಕೇಸ್ಗೆ ಸಿನಿಮಾ ಟ್ವಿಸ್ಟ್
  • ಕೆರೆ ಬಳಿ ಸೀನ್ ಸೃಷ್ಟಿಸಿ ಹೈಡ್ರಾಮಾ ಬಯಲು
  • ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಪ್ಲ್ಯಾನ್

ಹಾಸನ (Hassan): ಮದುವೆಗೆಂದು ಬಂದಿದ್ದ ಮಹಿಳೆ ಏಕಾಏಕಿ ನಾಪತ್ತೆಯಾಗಿದ್ದ (Priyanka Missing Case) ಪ್ರಕರಣ ಕೊನೆಗೆ ಸಿನಿಮಾವನ್ನೇ ಮೀರಿಸುವ ಟ್ವಿಸ್ಟ್ ಪಡೆದುಕೊಂಡಿದೆ. ಆತ್ಮಹತ್ಯೆ, ಕೊಲೆ, ಅತ್ಯಾಚಾರ ಶಂಕೆಗಳಿಂದ ಕಂಗಾಲಾಗಿದ್ದ ಪೊಲೀಸರಿಗೆ ಕೊನೆಗೆ ಸತ್ಯ ಬಯಲಾಗಿದೆ.

ಕುಣಿಗಲ್ ಮೂಲದ ಪ್ರಿಯಾಂಕಾ, ಮದುವೆ ಮುಗಿಸಿಕೊಂಡು ತವರು ಮನೆಗೆ ಬಂದು ಅಲ್ಲಿಂದ ಊರಿಗೆ ಹೊರಟಿದ್ದಳು. ಆದರೆ ಬಸ್ ಹತ್ತಿದ ಕೆಲವೇ ಹೊತ್ತಿನಲ್ಲಿ ಆಕೆ ಕಾಣೆಯಾಗಿದ್ದಳು.

ನಂತರ ಹೆದ್ದಾರಿ ಬದಿಯ ಕೆರೆ ಬಳಿ ಆಧಾರ್ ಕಾರ್ಡ್, ಚಪ್ಪಲಿ, ವ್ಯಾನಿಟಿ ಬ್ಯಾಗ್ ಹಾಗೂ ಒಳಉಡುಪು ಸಿಕ್ಕಿದ್ದು ಪ್ರಕರಣ ಗಂಭೀರ ತಿರುವು ಪಡೆದಿತ್ತು. 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದ ಹಿನ್ನೆಲೆ ದರೋಡೆ, ಕೊಲೆ ಶಂಕೆಗಳು ಹುಟ್ಟಿಕೊಂಡಿದ್ದವು.

ಪೊಲೀಸರ ಶೋಧ, ನಾಟಕದ ಹಾದಿ

ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರ ತಂಡ ರಾತ್ರಿವರೆಗೂ ಕೆರೆಯಲ್ಲಿ ಶೋಧ ನಡೆಸಿತ್ತು. ಕುಟುಂಬದವರು ಆತಂಕದಲ್ಲಿದ್ದರು. ಆದರೆ ತನಿಖೆ ಮುಂದುವರಿದಂತೆ ಬೇರೆ ಚಿತ್ರಣ ಹೊರಬಿದ್ದಿದೆ. ಪ್ರಿಯಾಂಕಾ ಬಸ್‌ನಿಂದ ಮಧ್ಯದಲ್ಲಿ ಇಳಿದು, ಸ್ನೇಹಿತ ಡೇವಿಡ್ ಬೈಕ್‌ನಲ್ಲಿ ತೆರಳಿದ್ದಾಳೆ ಎಂಬುದು ಬಹಿರಂಗವಾಯಿತು.

ತನ್ನ ನಾಪತ್ತೆ ಸೀನ್ ನೈಜವಾಗಿ ಕಾಣುವಂತೆ ಮಾಡಲು ವಿವಿಧ ಸ್ಥಳಗಳಲ್ಲಿ ವಸ್ತುಗಳನ್ನು ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್‌ನಲ್ಲಿ ಬೇರೆ ಸಿಮ್ ಬಳಸಿ ಸಂಪರ್ಕದಲ್ಲಿದ್ದ ಮಾಹಿತಿ ಸಿಕ್ಕ ಬಳಿಕ ಪ್ರಕರಣದ ಗೂಢಚರ್ಯೆ ಬಯಲಾಗಿದೆ.

ಕುಟುಂಬಕ್ಕೆ ಶಾಕ್

ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾ ಮತ್ತು ಡೇವಿಡ್ ನಡುವೆ ಪ್ರೇಮ ಬೆಳದಿದ್ದು, ಒಟ್ಟಿಗೆ ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದರೆಂದು ಮೂಲಗಳು ತಿಳಿಸಿವೆ. ಗಂಡನಿಂದ ದೂರವಾಗಿ ಪ್ರಿಯಕರನ ಜೊತೆ ಬೇರೆ ರಾಜ್ಯಕ್ಕೆ ತೆರಳಲು ಯೋಜನೆ ರೂಪಿಸಿದ್ದಾಳೆ ಎಂಬ ಸ್ಫೋಟಕ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಫೆಬ್ರವರಿ 14ರ ರಾತ್ರಿ ಕುಣಿಗಲ್‌ನಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಹಾಸನಕ್ಕೆ ಕರೆತಂದಿದ್ದಾರೆ. ಪ್ರಿಯಾಂಕಾಳ ಈ ಕ್ರಮದ ಹಿಂದಿನ ಉದ್ದೇಶ, ಹಣ ಮತ್ತು ಆಭರಣಗಳ ವಿಷಯದಲ್ಲಿ ಏನಾದರೂ ಲೆಕ್ಕಾಚಾರವಿದೆಯೇ ಎಂಬುದರ ಮೇಲೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories