ಉಡುಪಿ ಡಿಸಿ ಕಚೇರಿಯಲ್ಲಿ ನಕ್ಸಲ್ ಲಕ್ಷ್ಮೀ ತೊಂಬಟ್ಟು ಶರಣಾಗತಿ
ಬಹು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಲಕ್ಷ್ಮೀ ತೊಂಬಟ್ಟು (Lakshmi Thombattu) ಶರಣಾಗಿದ್ದು, ಕಾನೂನು ಪ್ರಕ್ರಿಯೆ ಅನುಸರಿಸಿ ಅಧಿಕಾರಿಗಳ ಮುಂದೆ ಹಾಜರಾದರು.
- ಲಕ್ಷ್ಮೀ ತೊಂಬಟ್ಟು ಉಡುಪಿ ಎಸ್‌ಪಿ ಕಚೇರಿಯಲ್ಲಿ ಶರಣಾಗತಿ
- ಶರಣಾಗತಿಯ ನಂತರ, ಪೊಲೀಸ್ ಭದ್ರತೆಯೊಂದಿಗೆ ಡಿಸಿ ಕಚೇರಿಗೆ
- 2006ರಲ್ಲಿ ನಕ್ಸಲ್ ಚಟುವಟಿಕೆಗೆ ಸೇರಿದ್ದ ಲಕ್ಷ್ಮೀ ತೊಂಬಟ್ಟು
ನೂರಾರು ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಕುಂದಾಪುರ (Kundapura) ತಾಲೂಕಿನ ತೊಂಬಟ್ಟು ಮೂಲದ ನಕ್ಸಲ್ ಲಕ್ಷ್ಮೀ (Lakshmi Thombattu) ಬಹು ವರ್ಷಗಳ ಬಳಿಕ ಶರಣಾಗಿದ್ದಾರೆ. ಫೆಬ್ರವರಿ 2ರಂದು ಉಡುಪಿ (Udupi) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಶರಣಾಗತಿಯ (Surrender) ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರು.
ನಕ್ಸಲ್ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಲಕ್ಷ್ಮೀ ತೊಂಬಟ್ಟು, ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ (Rehabilitation Committee) ಸದಸ್ಯ ಶ್ರೀಪಾಲ್ ಅವರೊಂದಿಗೆ ಉಡುಪಿ ಎಸ್‌ಪಿ ಕಚೇರಿಗೆ ಬಂದರು. ಕಾನೂನು ಪ್ರಕ್ರಿಯೆ ಬಳಿಕ, ಪೊಲೀಸ್ ಭದ್ರತೆಯೊಂದಿಗೆ ಅವರನ್ನು ಡಿಸಿ ಕಚೇರಿಗೆ ಕರೆದೊಯ್ಯಲಾಯಿತು.
2006ರಲ್ಲಿ ತಮ್ಮ ಊರನ್ನು ತೊರೆದ ಲಕ್ಷ್ಮೀ, ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದವರೆಂದು ಹೇಳಲಾಗುತ್ತದೆ. ಶರಣಾದ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರು ಹಾಗೂ ಬಂಧುಗಳು ಹಾಜರಿದ್ದರು. ಈ ಶರಣಾಗತಿ ಪ್ರಕರಣದ ನಂತರ, ಪುನರ್ವಸತಿ ಯೋಜನೆಯಡಿ ಅವರ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Naxal Lakshmi Thombattu Surrenders at Udupi DC Office