ಹೊಲಿಗೆ ಹಾಕುವ ಬದಲಾಗಿ ಫೆವಿಕ್ವಿಕ್ ಹಾಕಿದ ನರ್ಸ್ ಅಮಾನತು
ಹಾವೇರಿ ಜಿಲ್ಲೆಯ ಆದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಬಳಸಿ ನಿರ್ಲಕ್ಷ್ಯ ತೋರಿದ ಘಟನೆ ನಡೆದಿದೆ.
- 7 ವರ್ಷದ ಬಾಲಕನಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ
- ನರ್ಸ್ ಹೊಲಿಗೆ ಹಾಕದೆ ಫೆವಿಕ್ವಿಕ್ ಬಳಸಿ ಚಿಕಿತ್ಸೆ
- ಪ್ರಕರಣದ ಬಳಿಕ ನರ್ಸ್ ಸೇವೆಯಿಂದ ಅಮಾನತು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಆದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಜ್ಯೋತಿ ಗಾಯಗೊಂಡ 7 ವರ್ಷದ ಬಾಲಕನಿಗೆ ಹೊಲಿಗೆ ಹಾಕುವ ಬದಲು, ಫೆವಿಕ್ವಿಕ್ ಬಳಸಿ ಚಿಕಿತ್ಸೆ ನೀಡಿದ್ದಾರೆ.
ಬಾಲಕನ ತಾಯಿತಂದೆ ಈ ನಿರ್ಲಕ್ಷ್ಯತೆಯನ್ನು ಪ್ರಶ್ನಿಸಿದರೂ, “ಎಲ್ಲರಿಗೂ ಹೀಗೆ ಮಾಡುತ್ತೇನೆ, ಹೊಲಿಗೆ ಹಾಕಿದರೆ ಗಾಯದ ಗುರುತು ಉಳಿಯುತ್ತದೆ” ಎಂದು ನರ್ಸ್ ಸಮರ್ಥಿಸಿಕೊಂಡಿದ್ದಾರೆ. ಈ ದೃಶ್ಯವನ್ನು ಪೋಷಕರು ವಿಡಿಯೋ ಮಾಡಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದರು.
ಮಲಗಿದ್ದ ಸ್ನೇಹಿತನ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಕುಚಿಕು ಗೆಳೆಯ
ವಿಚಾರಣೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ನರ್ಸ್ ಜ್ಯೋತಿಯನ್ನು ಪ್ರಾರಂಭದಲ್ಲಿ ಬೇರೆ ಕಡೆ ವರ್ಗಾವಣೆ ಮಾಡಿದರು. ಆದರೆ, ಸ್ಥಳೀಯವಾಗಿ ಈ ವಿಷಯದ ಬಗ್ಗೆ ಆಕ್ರೋಶ ಹೆಚ್ಚಿದ ನಂತರ, ಸರ್ಕಾರ ಮಧ್ಯಪ್ರವೇಶಿಸಿ ನರ್ಸ್‌ಗೆ ಅಮಾನತು ನೀಡಿದೆ.
ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, “ಚಿಕಿತ್ಸೆಯಲ್ಲಿ ಫೆವಿಕ್ವಿಕ್ ಅಥವಾ ಇದಕ್ಕೆ ಸಮಾನವಾದ ರಾಸಾಯನಿಕ ಪದಾರ್ಥಗಳನ್ನು ಬಳಸುವುದು ಅಪಾಯಕಾರಿಯಾಗಿದೆ” ಎಂದು ಘೋಷಣೆ ಮಾಡಿದೆ. ಘಟನೆ ಬಗ್ಗೆ ಪೂರ್ತಿಯಾಗಿ ತನಿಖೆ ನಡೆಯುತ್ತಿದೆ. ಬಾಲಕನ ಆರೋಗ್ಯವನ್ನು ಸದಾ ಮೇಲ್ವಿಚಾರಣೆಯಲ್ಲಿಟ್ಟುಕೊಳ್ಳಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Nurse Uses Fevikwik Instead of Stitches
Our Whatsapp Channel is Live Now 👇