Karnataka NewsCrime News

ಮಲಗಿದ್ದ ಸ್ನೇಹಿತನ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಕುಚಿಕು ಗೆಳೆಯ

ಬಾಗಲಕೋಟೆ ಜಿಲ್ಲೆಯ ಕುಂಬಾರಹಳ್ಳ ಗ್ರಾಮದಲ್ಲಿ ಹಣದ ವಿಚಾರಕ್ಕೆ ಗೆಳೆಯರ ನಡುವೆ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಸ್ನೇಹಿತನೇ ಸ್ನೇಹಿತನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

  • ಹಣದ ವಿಚಾರಕ್ಕೆ ಕುಚಿಕು ಗೆಳೆಯರ ನಡುವೆ ಜಗಳ
  • ಸ್ನೇಹಿತನೇ ಸ್ನೇಹಿತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ
  • ಆರೋಪಿಯ ಹೈಡ್ರಾಮಾ, ನಂತರ ಪೊಲೀಸರಿಗೆ ಶರಣು

Bagalkote: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಸ್ನೇಹಿತರ ಮಧ್ಯೆ ಹಣದ ವಿಚಾರಕ್ಕೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. 32 ವರ್ಷದ ಬಸಪ್ಪ ತಳವಾರ ಎಂಬವನನ್ನು 37 ವರ್ಷದ ಸ್ನೇಹಿತ ಮಹಾನಿಂಗ ಬಿದರಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.

ಬಸಪ್ಪ, ಮಹಾನಿಂಗನಿಗೆ ಸುಮಾರು ಎರಡುವರೆ ಲಕ್ಷ ರೂಪಾಯಿ ಕೊಡಬೇಕಾಗಿತ್ತು. ಈ ಹಣವನ್ನು ಮರಳಿಸಲು ನಿರಾಕರಿಸಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಕೊನೆಗೆ ಕೊಲೆ ನಡೆದಿರಬಹುದು ಎಂದು ತಿಳಿದುಬಂದಿದೆ.

ಮಲಗಿದ್ದ ಸ್ನೇಹಿತನ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಕುಚಿಕು ಗೆಳೆಯ

ಘಟನೆ ನಡೆದ ಬಳಿಕ, ಮಹಾನಿಂಗ ರಸ್ತೆ ಮೇಲೆ ನಿಂತು “ನನ್ನ ಸ್ನೇಹಿತನೂ ಹೋದ, ನನ್ನ ಹಣವೂ ಹೋಯ್ತು” ಎಂದು ಜೋರಾಗಿ ಕೂಗಾಡಿ, ಜನರನ್ನು ನಂಬಿಸಲು ಹೈಡ್ರಾಮಾ ಮಾಡಿದ್ದ. ನಂತರ, ಜನ ಸೇರುವ ಮುನ್ನವೇ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ತಾನೇ ತೆರಳಿ ಶರಣಾಗಿದ್ದಾನೆ.

ಇಬ್ಬರೂ ಹಿಂದಿನಿಂದಲೂ ಸ್ನೇಹಿತರಾಗಿದ್ದು, ಮೈಸೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಮಹಾನಿಂಗ ಕುಂಬಾರಹಳ್ಳ ಗ್ರಾಮಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಫೆಬ್ರವರಿ 2ರಂದು ಬಸಪ್ಪ ಕೂಡ ಅಲ್ಲಿಗೆ ಬಂದು ಇದ್ದು, ಹಣದ ವಿಚಾರವಾಗಿ ಜಗಳ ಶುರುವಾಗಿತ್ತು. ಫೆಬ್ರವರಿ 3ರಂದು ಮಧ್ಯಾಹ್ನ ಇಬ್ಬರೂ ಮದ್ಯಪಾನ ಮಾಡಿದ್ದು, ಬಸಪ್ಪ ಕುಡಿದು ಮತ್ತಿನಲ್ಲಿ ಮಲಗಿದ್ದಾಗ, ಮಹಾನಿಂಗ ಮನೆಯಲ್ಲಿದ್ದ ಚಿತ್ರಾನ್ನ ತಿಂದು ಬೈಕ್ ನಲ್ಲಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಈ ಘಟನೆಗೆ ಕಾರಣ ಹಣವನ್ನೇ ವಾಪಸ್ ನೀಡಲು ನಿರಾಕರಿಸಿದ್ದರಿಂದ ಆಗಿದೆ. ಮಹಾನಿಂಗನಿಗೆ ಮದುವೆಯಾಗಿದ್ದು, ಪತ್ನಿ ಗರ್ಭಿಣಿಯಾಗಿದ್ದಾಳೆ. ಬಸಪ್ಪ ತಳವಾರ ಮದುವೆಯಾಗದಿದ್ದರೂ, ಕುಟುಂಬದ ಹಿರಿಯ ಮಗನಾಗಿದ್ದು, ಹೊಣೆಗಾರಿಕೆ ಹೊಂದಿದ್ದ. ಈ ಕೊಲೆಯಿಂದ ಬಸಪ್ಪನ ಕುಟುಂಬ ಆಕ್ರೋಶಗೊಂಡಿದ್ದು, ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

Friend Sets Another on Fire Over Money Dispute

English Summary

Our Whatsapp Channel is Live Now 👇

Whatsapp Channel

Related Stories