Kannada News Live Updates: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ

Kannada News Live Updates: ಇಂದು (ಫೆಬ್ರವರಿ 27 ರಂದು) ಕರ್ನಾಟಕ (Karnataka) ಶಿವಮೊಗ್ಗ ವಿಮಾನ ನಿಲ್ದಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟನೆ ಮಾಡಲಿದ್ದಾರೆ. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಈ ವಿಮಾನ ನಿಲ್ದಾಣವು ಶಿವಮೊಗ್ಗ ನೆರೆಯ ಪ್ರದೇಶಗಳ ಸಂಪರ್ಕ ಮತ್ತು ಪ್ರವೇಶವನ್ನು ಸುಧಾರಿಸುವ ನಿರೀಕ್ಷೆಯಿದೆ (Shivamogga Airport inauguration).
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ಬೆಳಗಾವಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಲುವಾಗಿ ಈ ವರ್ಷ ಚುನಾವಣಾ ಕಣದಲ್ಲಿರುವ ಕರ್ನಾಟಕಕ್ಕೆ ಐದನೇ ಬಾರಿಗೆ ಭೇಟಿ ನೀಡಲಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ಪ್ರಧಾನಿಯವರು ಶಿವಮೊಗ್ಗದ ವಿಮಾನ ನಿಲ್ದಾಣವನ್ನು ವಾಕ್-ಥ್ರೂ ಪರಿಶೀಲಿಸಲಿದ್ದಾರೆ. ಜಿಲ್ಲೆಯ ಬಹುವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದ ಭಾಗವಾಗಿದೆ.
ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ವಿಮಾನ ನಿಲ್ದಾಣದ ಕಮಲದ ಆಕಾರದ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡವು ಗಂಟೆಗೆ 300 ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಈ ವಿಮಾನ ನಿಲ್ದಾಣವು ಶಿವಮೊಗ್ಗ ಮತ್ತು ಮಲೆನಾಡು ಪ್ರದೇಶದ ಇತರ ನೆರೆಯ ಪ್ರದೇಶಗಳ ಸಂಪರ್ಕ ಮತ್ತು ಪ್ರವೇಶವನ್ನು ಸುಧಾರಿಸುವ ನಿರೀಕ್ಷೆಯಿದೆ.
ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ಹಾಗೂ ರೈಲ್ವೆ ಯೋಜನೆಗಳಿಗೂ ಭೇಟಿಯ ವೇಳೆ ಶಂಕುಸ್ಥಾಪನೆ ನಡೆಯಲಿದೆ…
PM Modi inaugurate Shivamogga airport and development projects in Karnataka Today Live News Updates
Live
News Live Today Updates
ನಾಳೆಯ ದಿನ ಭವಿಷ್ಯ: 11-11-2026, ಬುಧವಾರ
Read the story
ಹಾಸನಾಂಬೆ ದರ್ಶನದ ಅವಧಿ ವಿಸ್ತರಣೆ; ಬಿಗ್ ಅಪ್ಡೇಟ್
Read the story
ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮುಕ್ತಾಯ; ಲಕ್ಷಾಂತರ ಕಾರ್ಡುಗಳು ರದ್ದು
Read the story
ಕರ್ನಾಟಕ ಬರ ಪರಿಹಾರ ಹಣದಲ್ಲೂ ಕತ್ತರಿ
Read the story
KSRTC ಲಗೇಜ್ ಶುಲ್ಕ ಹೆಚ್ಚಳ; ಇಂದಿನಿಂದಲೇ ಹೊಸ ದರ ಜಾರಿ
Read the story
ಪಿಎಂ ಕಿಸಾನ್ ಹಣ ಇನ್ನೂ ಬಂದಿಲ್ವ? ತಕ್ಷಣ ಈ ಕೆಲಸ ಮಾಡಿ
Read the story



