ಹಾವೇರಿ ಜಿಲ್ಲೆಯಲ್ಲಿ ಮನೆಯ ಫ್ರಿಡ್ಜ್ ಸ್ಫೋಟಗೊಂಡು ಲಕ್ಷಾಂತರ ರೂಪಾಯಿ ನಷ್ಟ
ಹಾವೇರಿ ಜಿಲ್ಲೆಯ (Haveri district) ಮಂಜುನಾಥ ನಗರದಲ್ಲಿ ಫ್ರಿಡ್ಜ್ ಸ್ಫೋಟಗೊಂಡು (refrigerator explosion) ನಷ್ಟ ಉಂಟಾದ ಘಟನೆ ನಡೆದಿದೆ. ಚೇನ್ನಬಸಪ್ಪ ಗೂಲಪ್ಪನವರ್ ಎಂಬುವವರ ಮನೆಯಲ್ಲಿ ರವಿವಾರ ರಾತ್ರಿ ಆಘಾತಕಾರಿ ಘಟನೆ ಸಂಭವಿಸಿದೆ. ಫ್ರಿಡ್ಜ್ ಹಠಾತ್ ಶಬ್ಧ ಮಾಡಿ ಸ್ಫೋಟಗೊಂಡು, ಬೆಂಕಿ ಹೊತ್ತಿಕೊಂಡಿತು.
ಅಕಸ್ಮಾತ್ ಉಂಟಾದ ಸ್ಫೋಟದಲ್ಲಿ ಮನೆಯಲ್ಲಿದ್ದ ಸಾಮಾನುಗಳು ಸಂಪೂರ್ಣ ಬೆಂಕಿಗೆ ಆಹುತಿಯಾದವು. ಸುಮಾರು ₹2 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಘಟನೆಯ ವೇಳೆ ಅದೃಷ್ಟವಶಾತ್ ಯಾರೂ ಫ್ರಿಡ್ಜ್ ಬಳಿ ಇರಲಿಲ್ಲ, ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬೆಂಗಳೂರು: ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ ಎಂಬ ಸುದ್ದಿ ಸುಳ್ಳು: ಡಿ.ಕೆ. ಶಿವಕುಮಾರ್
ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.
Refrigerator Explosion in Haveri District, Loss of 2 Lakhs