ರಾಯಚೂರಿನಲ್ಲಿ 6ನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6ನೇ ತರಗತಿ ಬಾಲಕಿ ಮೇಲೆ 43 ವರ್ಷದ ಆರೋಪಿ ಚಂದ್ರಶೇಖರ್ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಪೊಲೀಸರು ಆತನನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
- 6ನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
- ಆರೋಪಿಯನ್ನು ಬಂಧಿಸಿದ ಹಟ್ಟಿ ಪೊಲೀಸರು
- ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
ರಾಯಚೂರು ಜಿಲ್ಲೆಯಲ್ಲಿ (Raichur) ಮತ್ತೊಂದು ದಾರುಣ ಘಟನೆ ನಡೆದಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6ನೇ ತರಗತಿಯ ಬಾಲಕಿ ಮೇಲೆ 43 ವರ್ಷದ ಚಂದ್ರಶೇಖರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಮಧ್ಯಾಹ್ನ ಊಟದ ವೇಳೆ ಚಾಕೊಲೇಟ್ ನೀಡುವ ನೆಪದಲ್ಲಿ ಆರೋಪಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಕೃತ್ಯ ಎಸಗಿದ್ದಾನೆ. ಈ ಕುರಿತು ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಹಟ್ಟಿ ಪೊಲೀಸರಿಗೆ ಮಾಹಿತಿ ನೀಡಿದರು.
ಹಟ್ಟಿ ಪೊಲೀಸ್ ಇನ್ಸ್‌ಪೆಕ್ಟರ್ ಹೊಸಕೇರಪ್ಪ ನೇತೃತ್ವದ ತಂಡ ತಕ್ಷಣವೇ ಚಂದ್ರಶೇಖರ್ ಮನೆಗೆ ತೆರಳಿ, ಬಾಗಿಲು ಮುರಿದು ಬಾಲಕಿಯನ್ನು ರಕ್ಷಿಸಿದೆ.
ಬೆಳಗಾವಿ ಖಾನಾಪುರ ತಹಶೀಲ್ದಾರ್ ಭ್ರಷ್ಟಾಚಾರ ಆರೋಪದಿಂದ ಅಮಾನತು
ಇದರ ಬೆನ್ನಲ್ಲೇ, ಫೆಬ್ರವರಿ 5ರಂದು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನೊಂದು ದೌರ್ಜನ್ಯ ಪ್ರಕರಣ ನಡೆದಿತ್ತು. ಆರೋಪಿ ಶಿವನಗೌಡ ಎರಡನೇ ತರಗತಿ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಅತ್ಯಾಚಾರ ಎಸಗಿದ್ದ.
ಈ ಸಂಬಂಧ ಶಿವನಗೌಡ ಮತ್ತು ಖಾಸಗಿ ಶಾಲೆಯ ವ್ಯವಸ್ಥಾಪಕ ರಾಜು ತಾಳಿಕೋಟೆಯನ್ನು ವಶಕ್ಕೆ ಪಡೆದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೋಷಕರು ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
Sexual Assault Case on Minor in Raichur
Our Whatsapp Channel is Live Now 👇