ಆಸ್ತಿ ನೋಂದಣಿಗೆ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ, ಧಿಡೀರ್ ನಿಯಮದಲ್ಲಿ ಬದಲಾವಣೆ
ಆಸ್ತಿ ನೋಂದಣಿ (property registration) ವಿಚಾರ ಇರಬಹುದು ಅಥವಾ ಯಾವುದೇ ಹಣಕಾಸಿನ ವ್ಯವಹಾರ ದ ಬಗ್ಗೆ ಇರಬಹುದು ಎಲ್ಲಾ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ರಾಜ್ಯ ಸರ್ಕಾರ ತರುತ್ತಿದೆ.
ರಾಜ್ಯದಲ್ಲಿ ಹೊಸ ಹೊಸ ಯೋಜನೆಗಳು (schemes) ಕೂಡ ಪರಿಚಯಗೊಳ್ಳುತ್ತಿವೆ. ಅದರ ಜೊತೆಗೆ ಸಾಕಷ್ಟು ನಿಯಮಗಳಲ್ಲಿಯೂ ಕೂಡ ಬದಲಾವಣೆಗಳು ಆಗುತ್ತಿವೆ. ಆಸ್ತಿ ನೋಂದಣಿ (property registration) ವಿಚಾರ ಇರಬಹುದು ಅಥವಾ ಯಾವುದೇ ಹಣಕಾಸಿನ ವ್ಯವಹಾರ ದ ಬಗ್ಗೆ ಇರಬಹುದು ಎಲ್ಲಾ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ರಾಜ್ಯ ಸರ್ಕಾರ ತರುತ್ತಿದೆ.
ಇದೀಗ ಸ್ಥಿರಾಸ್ತಿ ನೋಂದಣಿ ಮಾರ್ಗಸೂಚಿಯನ್ನು ಪರಿಷ್ಕರಿಸಿ ಹೊಸ ನಿಯಮವನ್ನು (new rules) ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಈ ಹೊಸ ನಿಯಮ ಗ್ರಾಹಕರಿಗೆ ಲಾಭವಾಗಲಿದೆಯೇ ಅಥವಾ ಜೇಬಿಗೆ ಕತ್ತರಿ ಬೀಳಲಿದೆಯೇ ನೋಡೋಣ.
ಬಿಪಿಎಲ್ ಕಾರ್ಡ್ ಇದ್ರೂ 3 ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಬಂದಿಲ್ವಾ? ಇಲ್ಲಿದೆ ಅಸಲಿ ಕಾರಣ
ಸ್ಥಿರಾಸ್ತಿಯ ದರ ಶೇಕಡ 30% ಹೆಚ್ಚಳ
ರಾಜ್ಯ ಸರ್ಕಾರ ಸ್ಥಿರಾಸ್ತಿ ನೋಂದಣಿಗಳ ಬಗ್ಗೆ ಹೊಸ ಮಾರ್ಗಸೂಚಿಯನ್ನು ನೀಡಿದ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಕೂಡ ರಾಜ್ಯ ಸರ್ಕಾರ ನೀಡಿದೆ. ಹೆಚ್ಚಳದಿಂದಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳುವುದು ಜನರಿಗೆ ದುಬಾರಿಯಾಗಿದೆ ಎನ್ನಬಹುದು.
ಹೌದು, ಸ್ಥಿರಾಸ್ತಿಗಳ ಮಾರ್ಗಸೂಚಿ ದರದಲ್ಲಿ ಧಿಡೀರ್ ಏರಿಕೆ ಮಾಡಿದ್ದು ಗ್ರಾಹಕರು ತಲೆ ಕೆಡಿಸಿಕೊಳ್ಳುವಂತಾಗಿದೆ. ಮುದ್ರಣಾಂಕ ಶುಲ್ಕವನ್ನು ಸರ್ಕಾರ ಜಾಸ್ತಿ ಮಾಡಲು ಚಿಂತನೆ ನಡೆಸಿದೆ ಹಾಗಾಗಿ ಆಸ್ತಿ ಖರೀದಿ ವೆಚ್ಚ ಈಗಿನಕ್ಕಿಂತ ಬಹಳ ದುಬಾರಿಯಾಗಲಿದೆ.
ಗೃಹಲಕ್ಷ್ಮಿ ಯೋಜನೆಯನ್ನೇ ಹಿಂದಿಕ್ಕಿದ ಕೇಂದ್ರ ಸರ್ಕಾರದ ಬಂಪರ್ ಯೋಜನೆಗಳು! ಅರ್ಜಿ ಸಲ್ಲಿಸಿ
ಯಾವಾಗಿನಿಂದ ಹೊಸ ರೂಲ್ಸ್?
ಹಾಗಾಗಿ ಆಸ್ತಿ (Property), ನಿವೇಶನ (House), ಸ್ಥಿರಾಸ್ತಿ ಖರೀದಿ ಮಾಡುವವರು ಸರ್ಕಾರದ ಈ ಮಾರ್ಗಸೂಚಿಯನ್ನು ಪ್ರಶ್ನಿಸುತ್ತಿದ್ದಾರೆ. ಭೂಮಿ ನಿವೇಶನ ಕಟ್ಟಡ ಮೊದಲಾದ ಸ್ಥಿರಾಸ್ತಿಗಳ ದರ ಪರಿಷ್ಕರಣೆ ಮಾಡಿರುವುದರಿಂದ ಆಸ್ತಿ ಮಾರಾಟ (Property Sale) ಮಾಡುವವರೆಗೂ ಖರೀದಿ ಮಾಡುವವರೆಗೂ ದೊಡ್ಡ ಸವಾಲಾಗಿದೆ.
ಇನ್ನು 2023-24 ನೇ ಸಾಲಿನಲ್ಲಿ, ಸ್ಥಿರಾಸ್ತಿ ನೋಂದಣಿ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕೂಡ ಹೆಚ್ಚಿದೆ ಹಾಗಾಗಿ ಸೆಪ್ಟೆಂಬರ್ 30ರವರೆಗೆ ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿ(sab registrar office) ಯ ಕೆಲಸ ಮಾಡುವ ಸಮಯವನ್ನು ಸರ್ಕಾರ ವಿಸ್ತರಿಸಲು ನಿರ್ಧರಿಸಿದೆ.
ಇದೊಂದು ಪ್ರಯತ್ನ ಮಾಡಿ, ಕೇವಲ 2 ದಿನಗಳಲ್ಲಿ ಗೃಹಲಕ್ಷ್ಮಿ ಹಣ ₹2,000 ಖಾತೆಗೆ ಜಮಾ ಆಗತ್ತೆ
ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಇನ್ನು ಮುಂದೆ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆದಿರುತ್ತದೆ. ಬರೋಬ್ಬರಿ 12 ಗಂಟೆಗಳ ಕಾಲ ಕಚೇರಿ ತೆರೆದಿರುವುದರಿಂದ ಸುಲಭವಾಗಿ ಜನ ನೋಂದಣಿ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ.
ತೆರಿಗೆ ವಿಚಾರಕ್ಕೂ ಸಂಬಂಧ ಪಟ್ಟ ಹಾಗೆ ಆಸ್ತಿ ನೋಂದಣಿಯನ್ನು ಬಹಳ ಶೀಘ್ರವಾಗಿ ಮಾಡಿಸಿಕೊಳ್ಳಬೇಕಾಗುತ್ತದೆ, ಅದು ಅಲ್ಲದೆ ಮುಂದಿನ ತಿಂಗಳ ಹೊಸ ನಿಯಮ ಬರುವುದರಿಂದ ಈ ಹಿಂದೆ ತೆಗೆದುಕೊಂಡ ಸ್ಥಿರಸ್ತಿ ನೋಂದಣಿಯನ್ನು ಮಾಡಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಹಾಗಾಗಿ ನೋಂದಣಿ ಕಚೇರಿ ಜನರಿಂದ ತುಂಬಿ ತುಳುಕಾಡುತ್ತಿದೆ. ಇದೇ ಕಾರಣಕ್ಕೆ ಜನರಿಗೆ ಅನುಕೂಲವಾಗಲಿ ಎಂದು ಕಚೇರಿಯ ಕೆಲಸದ ಅವಧಿಯನ್ನು ವಿಸ್ತರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎನ್ನಬಹುದು.
State government brought new rules for property registration, change in rules
Follow us On
Google News |