ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ (Annabhagya Scheme) ಕೂಡ ಒಂದು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಈ ಯೋಜನೆಯ ಮೂಲಕ ಬಡವರಿಗೆ 5 ಕೆಜಿ ಉಚಿತ ಅಕ್ಕಿ (Free Rice) ನೀಡುವುದಾಗಿ ಭರವಸೆ ನೀಡಿದ್ದರು.
ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಅನ್ನ ರಾಮಯ್ಯ ಎಂದೇ ಜನ ಕರೆಯುತ್ತಾರೆ. ಆದರೆ ಅಕ್ಕಿ ಹೆಚ್ಚುವರಿಯಾಗಿ ಒದಗಿಸಲು ಸಾಧ್ಯವಾಗದೆ ಇರುವ ಕಾರಣ ಕಳೆದ ಎರಡು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಹಣ ವರ್ಗಾವಣೆ (DBT) ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ದುರಾದೃಷ್ಟವಶಾತ್ ಸಾಕಷ್ಟು ಜನರ ಖಾತೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯ ಬದಲು ಹಣ ನೀಡುವ ಕೆಲಸ ಸಂಪೂರ್ಣಗೊಂಡಿಲ್ಲ. ಹೌದು ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದರು ಕೂಡ 5 ಕೆಜಿ ಕೇಂದ್ರ ಸರ್ಕಾರದ ಅಕ್ಕಿ ಸಿಗುತ್ತಿದೆ ಹೊರತು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿಗಳು ಸಂದಾಯವಾಗಬೇಕಿತ್ತು ಆದರೆ ಈ ಹಣ ಎಲ್ಲರ ಖಾತೆಗೆ ಜಮಾ ಆಗಿಲ್ಲ (Money Not Deposited).
ಅಕ್ಕಿಯ ಬದಲು ಹಣ ಕೊಡುವ ಪ್ರಕ್ರಿಯೆ ನಡೆಯುತ್ತಿದೆ, ಜುಲೈ ತಿಂಗಳಿನಲ್ಲಿ ನಾಲ್ಕು ಕೋಟಿಗೂ ಅಧಿಕ ಫಲಾನುಭವಿಗಳಲ್ಲಿ 31 ಲಕ್ಷ ಜನರ ಖಾತೆಗೆ ಹಣ ವರ್ಗಾವಣೆಯಾಗಿಲ್ಲ. ಅದೇ ರೀತಿ ಆಗಸ್ಟ್ ತಿಂಗಳಲ್ಲಿ 25 ಲಕ್ಷ ಜನರ ಖಾತೆಗೆ ಹಣ ವರ್ಗಾವಣೆಯಾಗಿಲ್ಲ. ಇದಕ್ಕೆಲ್ಲ ಮುಖ್ಯವಾಗಿರುವ ಕಾರಣ ಏನು ಗೊತ್ತಾ?
ಇಕೆವೈಸಿ ಆಗಿಲ್ಲ: (E-KYC)
ಎಲ್ಲಾ ಸರಿಯಾಗಿದೆ ಆದರೆ ನಮ್ಮ ಖಾತೆಗೆ ಮಾತ್ರ ಹಣ ಬರುತ್ತಿಲ್ಲ ಎಂದು ಸಾಕಷ್ಟು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಆದರೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನಿಮ್ಮ ಖಾತೆಗೂ ಹಣ ಬರಬೇಕು ಅಂದರೆ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ಸೀಡಿಂಗ್ (Aadhaar Seeding) ಆಗಿರಬೇಕು.
ಆದ್ರೆ ಅದೆಷ್ಟೋ ಜನರ ಖಾತೆ ಹೀಗೆ ಆಧಾರ್ ಕಾರ್ಡ್ (Aadhaar Card) ಜೊತೆಗೆ ಲಿಂಕ್ ಆಗದೆ ಇರುವ ಕಾರಣ ಅಂತವರ ಖಾತೆಗೆ ಹಣ ವರ್ಗಾವಣೆಯಾಗಿಲ್ಲ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಬ್ಯಾಂಕ್ ಖಾತೆ (Bank Account) ಯಾವ ಶಾಖೆಯಲ್ಲಿ ಇದೆಯೋ ಅದೇ ಶಾಖೆಗೆ ಹೋಗಿ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಿ.
ನಿಮ ರೇಷನ್ ಕಾರ್ಡ್ (Ration card) ನ ಹೆಸರು ಹಾಗೂ ಬ್ಯಾಂಕ್ ಖಾತೆ ಜೊತೆಗೆ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಒಂದೇ ರೀತಿಯದ್ದಾಗಿರಬೇಕು ಈ ಹೆಸರಿನಲ್ಲಿ ವ್ಯತ್ಯಾಸವಿದ್ದರೆ ಆಗಲು ಕೂಡ ಹಣ ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಆಗುವುದಿಲ್ಲ. ಇದಕ್ಕಾಗಿ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ (Name Corrections) ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ.
ಇನ್ನು ಅದೆಷ್ಟೋ ಜನ ಅದರಲ್ಲೂ ಮುಖ್ಯವಾಗಿ ಹಳ್ಳಿಗಳಲ್ಲಿ ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲದೆ ಇರುವ ಫಲಾನುಭವಿಗಳು ಇದ್ದಾರೆ, ಇಂಥವರಿಗೆ ಆಹಾರ ಇಲಾಖೆಯೇ ಸ್ವತಃ ಖುದ್ದಾಗಿ ಪೋಸ್ಟ್ ಆಫೀಸ್ (Post Office)ನಲ್ಲಿ ಖಾತೆ ತೆರೆಯಲು ಮಾಹಿತಿ ನೀಡುವುದರ ಮೂಲಕ ಅಂಥವರ ಖಾತೆಗೂ ಕೂಡ ಹಣ ಹಾಕುವುದಕ್ಕೆ ಪ್ರಯತ್ನಿಸುತ್ತಿದೆ. ಈಗಾಗಲೇ ಹಲವರಿಗೆ ಹೊಸ ಖಾತೆ ಮಾಡಿಸಿಕೊಟ್ಟಿದ್ದು ಆಗಿದೆ.
ರೇಷನ್ ತೆಗೆದುಕೊಳ್ಳುವುದನ್ನೇ ಮರೆತಿದ್ದೀರಾ?
ಬಿಪಿಎಲ್ ರೇಷನ್ ಕಾರ್ಡ್ (BPL Ration Card) ನೀಡುವುದು ಬಡತನ ರೇಖೆಗಿಂತ ಕೆಳಗಿನವರಿಗೆ ಮಾತ್ರ, ಆದರೆ ಸಾಕಷ್ಟು ಅನುಕೂಲ ಇರುವವರು ಕೂಡ ರೇಷನ್ ಕಾರ್ಡ್ ಹೊಂದಿದ್ದಾರೆ. ಇದೇ ಕಾರಣಕ್ಕೆ ಅಂತವರು ಕಳೆದ ಮೂರು ತಿಂಗಳಿನಿಂದ ಪಡಿತರವನ್ನೇ ತೆಗೆದುಕೊಂಡಿಲ್ಲ
ಇನ್ನು ಕೆಲವು ಗ್ರಾಹಕರು ಹೇಳುವ ಪ್ರಕಾರ ತಾವು ಬೇರೆ ಊರಿನಲ್ಲಿ ವಾಸವಾಗಿರುವುದರಿಂದ ರೇಷನ್ ತೆಗೆದುಕೊಂಡಿಲ್ಲ. ಆದರೆ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ರೆ ದೇಶದ ಯಾವ ಮೂಲೆಯಲ್ಲಿ ಬೇಕಾದರೂ ಪಡಿತರ ಪಡೆದುಕೊಳ್ಳಲು ಸಾಧ್ಯವಿದೆ.
ರಾಜ್ಯ ಸರ್ಕಾರದ ಹಣ ವರ್ಗಾವಣೆ ಆಗಬೇಕು ಅಂದ್ರೆ ನೀವು ಪ್ರತಿ ತಿಂಗಳು ಪಡಿತರ ತೆಗೆದುಕೊಳ್ಳಲೇಬೇಕು, ಒಂದು ವೇಳೆ ಮೂರು ತಿಂಗಳಿನಿಂದ ತೆಗೆದುಕೊಂಡಿರದೆ ಇದ್ರೆ ಕೂಡಲೇ ಆ ಕೆಲಸವನ್ನು ಮಾಡಿ ಮುಂದಿನ ಮೂರು ತಿಂಗಳು ಸರಿಯಾಗಿ ನೀವು ಪಡಿತರ ತೆಗೆದುಕೊಂಡಿದ್ದರೆ ಅದರ ನಂತರದ ತಿಂಗಳಿನಿಂದ ನಿಮಗೆ ಸರ್ಕಾರ ಕೊಡುವ 5 ಕೆಜಿ ಬದಲಿಗೆ ಹಣ ಅಥವಾ ಅಕ್ಕಿ ಎರಡರಲ್ಲಿ ಒಂದು ಸಿಗುವ ಸಾಧ್ಯತೆ ಇದೆ.
ಇನ್ನು ಅಂತ್ಯೋದಯ ಕಾರ್ಡ್ ನ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ಈಗಾಗಲೇ ಪ್ರತಿ ಸದಸ್ಯರಿಗೂ ನೀಡಲಾಗುತ್ತಿದೆ, ಹಾಗಾಗಿ ಮೂರಕ್ಕಿಂತ ಹೆಚ್ಚಿನ ಸದಸ್ಯರು ಇದ್ರೆ ಅಂತವರ ಕುಟುಂಬಕ್ಕೆ ಸರ್ಕಾರ ಮತ್ತೆ ಹೆಚ್ಚುವರಿ ಆಗಿ ಹಣವನ್ನು ನೀಡುತ್ತಿಲ್ಲ ಅದರ ಬದಲು 10 ಕೆಜಿ ಅಕ್ಕಿ ಪ್ರತಿಯೊಬ್ಬರಿಗೂ ಸಿಗುತ್ತಿದೆ.
ಇನ್ನು ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದರು ಸಾಕಷ್ಟು ಜನರಿಗೆ ಹಣ ವರ್ಗಾವಣೆಯಾಗಿಲ್ಲ. ಒಂದು ವೇಳೆ ನೀವು ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಸರಿ ಮಾಡಿಕೊಂಡು ಸರ್ಕಾರದ ನಿಯಮದ ಪ್ರಕಾರವೇ ನಿಮ್ಮ ಖಾತೆ ಇದ್ದರೆ ಮುಂದಿನ ತಿಂಗಳಿನಿಂದ ಹಣ ಬರಬಹುದು ಆದರೆ ಜುಲೈ ಅಥವಾ ಅಗಸ್ಟ್ ತಿಂಗಳಿನ ಹಣ ಜಮಾ ಆಗುವುದಿಲ್ಲ.
Here is the reason why Annabhagya Yojana money is not Deposit Even with BPL Ration Card
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
Here is the reason why Annabhagya Yojana money is not Deposit Even with BPL Ration Card