ನೀವಿನ್ನೂ ಅರ್ಜಿ ಹಾಕಿಲ್ವಾ? ಗೃಹಲಕ್ಷ್ಮಿ ಯೋಜನೆ ಅರ್ಜಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತ! ಕಾರಣ ಇಲ್ಲಿದೆ
ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರ ಹಾಗೂ ಕರ್ನಾಟಕ ಒನ್ ಈ ನಾಲ್ಕು ಸೇವಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವವರ ಅರ್ಜಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
- ಗೃಹಲಕ್ಷ್ಮಿ ಅರ್ಜಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತ! ಕಾರಣ ಏನು ಗೊತ್ತಾ?
- ನೀವಿನ್ನು ಗೃಹ ಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿಲ್ವಾ?
- ರೇಷನ್ ಕಾರ್ಡ್ ಅಪ್ಡೇಟ್ ಆದ ನಂತರ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೀರಾ?
- ಸೇವಾ ಕೇಂದ್ರಗಳಲ್ಲಿ ಹೊಸ ಅಪ್ಲಿಕೇಶನ್ ತೆಗೆದುಕೊಳ್ಳುತ್ತಿಲ್ಲವಾ?
ಅರ್ಜಿ ಸಲ್ಲಿಸಿದವರಿಗೆ ಮೊದಲ ಕಂತಿನ ಹಣ ಬಂದಿಲ್ವಾ? ಈ ಎಲ್ಲಾ ನಿಮ್ಮ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಇದೆ ಉತ್ತರ.
ಈಗಾಗಲೇ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಅಪ್ಡೇಟ್ ಒಂದನ್ನು ಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಆರಂಭವಾಗಿ 20 ದಿನಗಳೆ ಕಳೆದಿವೆ. ಯೋಜನೆಯ ಅಡಿಯಲ್ಲಿ ಹಲವು ಗೃಹಿಣಿಯರು ಲಾಭ ಪಡೆದುಕೊಂಡಿದ್ದಾರೆ. ಆದ್ರೂ ಲಕ್ಷಾಂತರ ಮಹಿಳೆಯರ ಖಾತೆಗೆ ಇನ್ನೂ ಎರಡು ಸಾವಿರ ರೂಪಾಯಿಗಳು ಬಂದಿಲ್ಲ.
ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಂದಿಲ್ಲದ ಮಹಿಳೆಯರಿಗೆ ಮತ್ತೊಂದು ಅಪ್ಡೇಟ್ ಕೊಟ್ಟ ಸರ್ಕಾರ
ಎರಡು ಕಂತಿನ ಹಣ ಒಟ್ಟಿಗೆ ಜಮಾ
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರಿಗೆ ಮೊದಲ ಕಂತಿನ ಹಣ ಸೆಪ್ಟೆಂಬರ್ ತಿಂಗಳ ಒಳಗೆ ಬರುವುದಿಲ್ಲವೋ ಅಂತವರ ಖಾತೆಗೆ (Bank Account) ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೆ ಎರಡು ತಿಂಗಳಿನ ಹಣವನ್ನು ಒಟ್ಟಿಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಅಂದರೆ 4000 ರೂ.ಗಳನ್ನು ಗೃಹಿಣಿಯರು ಪಡೆಯಬಹುದು.
ಹೊಸ ಅರ್ಜಿ ಸ್ವೀಕರಿಸುತ್ತಿಲ್ಲ
ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರ ಹಾಗೂ ಕರ್ನಾಟಕ ಒನ್ ಈ ನಾಲ್ಕು ಸೇವಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವವರ ಅರ್ಜಿಯನ್ನು (Application Process) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸ್ಪಷ್ಟನೆ ನೀಡಿದ್ದು ಹಣ ಸಂದಾಯ ಮಾಡುವ ಪ್ರಕ್ರಿಯೆ ಜಾರಿಯಲ್ಲಿ ಇದೆ. ಹಾಗಾಗಿ ಈ ಗೊಂದಲ ನಿವಾರಣೆಯಾಗುವವರೆಗೆ ಒಂದರಿಂದ ಎರಡು ವಾರಗಳ ಕಾಲ ಹೊಸ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇವರಿಗಿಲ್ಲ ಗೃಹಲಕ್ಷ್ಮಿ ಹಣ! 1 ಲಕ್ಷ ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಗಳು ತಿರಸ್ಕೃತ
ಹಾಗಾಗಿ ಹೊಸದಾಗಿ ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸೇವಾ ಕೇಂದ್ರಗಳಿಗೆ ಹೋಗುತ್ತಾರೋ, ಅಂತವರಿಗೆ ಸ್ವಲ್ಪ ನಿರಾಸೆ ಆಗಬಹುದು. ಒಂದೆರಡು ವಾರ ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಮೊದಲ ಕಂತಿನ ಹಣ ಎಲ್ಲಾ ಗ್ರಹಿಣಿಯರ ಖಾತೆಗೆ ಸಂದಾಯವಾದ ನಂತರ ಮತ್ತೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಪ್ರಕ್ರಿಯೆ ಆರಂಭವಾಗಬಹುದು. ಆದರೆ ಚಿಂತೆ ಬೇಡ ಈಗಾಗಲೇ ತಿಳಿಸಿರುವಂತೆ ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆ ದಿನಾಂಕ ಎಂಬುದು ಇರುವುದಿಲ್ಲ. ಆದ್ದರಿಂದ ಸ್ವಲ್ಪ ಸಮಯ ಕಾದು ಮತ್ತೆ ಅರ್ಜಿ ಪ್ರಕ್ರಿಯೆ ಶುರುವಾದ ಬಳಿಕ ಅರ್ಜಿ ಸಲ್ಲಿಸಿ. ಈ ನಡುವೆ ನಿಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಿ.
Gruha Lakshmi Yojana application process temporarily Stopped
Follow us On
Google News |