ಬಿಪಿಎಲ್ (BPL card) ಹಾಗೂ ಎಪಿಎಲ್ (APL card) ತಿದ್ದುಪಡಿ ಮಾಡಿಕೊಳ್ಳುತ್ತಿರುವವರ ರೇಷನ್ ಕಾರ್ಡ್ (Ration Card) ಮೇಲೆಯೂ ಸರ್ಕಾರ ತನ್ನ ಹದ್ದಿನ ಕಣ್ಣು ಇಟ್ಟಿದೆ. ತಿದ್ದುಪಡಿ ಮಾಡಿಕೊಳ್ಳಲು ಹೋದಾಗಲೇ ಅದರಲ್ಲಿ ಇರುವ ಮಿಸ್ಟೇಕ್ ಸರ್ಕಾರದ ಗಮನಕ್ಕೆ ಬರುತ್ತಿದೆ.
ರಾತ್ರೋರಾತ್ರಿ ಹೊಸ ನಿಯಮ ಜಾರಿಗೆ ತಂದಿರುವ ಸರ್ಕಾರ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ದೊಡ್ಡ ಶಾಕಿಂಗ್ ಸುದ್ದಿ ನೀಡಿದೆ.
ರಾಜ್ಯದಲ್ಲಿ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವವರಿಗೆ ಹೊಸ ನಿಯಮ ಜಾರಿ! ಇನ್ಮುಂದೆ ಹೊಸ ರೂಲ್ಸ್
ಇಂಥವರ ಅರ್ಜಿ ತಿರಸ್ಕಾರ
ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಪ್ರಯೋಜನಗಳನ್ನು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಮಾತ್ರವಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರು ಕೂಡ ಪಡೆದುಕೊಳ್ಳಬಹುದು.
ಆದರೆ ಈಗ ಎಪಿಎಲ್ ನಲ್ಲಿ (Ration Card) ತಿದ್ದುಪಡಿ (Corrections) ಮಾಡಿಕೊಳ್ಳಲು ಹೋದ ಹಲವರ ಅರ್ಜಿಗಳನ್ನು (applications) ವಜಾ ಮಾಡುತ್ತಿದೆ. ಎಪಿಎಲ್ ಗೃಹಿಣಿಯರ ಸಾಕಷ್ಟು ಅರ್ಜಿಗಳು (Rejected) ತಿರಸ್ಕೃತಗೊಂಡಿದೆ. ರಾಜ್ಯದಲ್ಲಿ ಶೇಕಡ 70ರಷ್ಟು ಎಪಿಎಲ್ ಅರ್ಜಿಗಳು ಸಂದಾಯವಾಗಿವೆ. ಒಟ್ಟು 24 ಲಕ್ಷ ಎಪಿಎಲ್ ಕಾರ್ಡ್ ದಾರರು ಅರ್ಜಿ ಸಲ್ಲಿಸಿದ್ದರು.
ಕಳೆದ 14 ದಿನಗಳಲ್ಲಿ ಅರ್ಜಿ ತಿದ್ದುಪಡಿಗೆ ಸಲ್ಲಿಕೆಯಾಗಿದ್ದು 53 ಸಾವಿರ ಅರ್ಜಿಗಳು. ಒಟ್ಟು 3.71 ಲಕ್ಷ ಬಿಪಿಎಲ್ ಕಾರ್ಡ್ ತಿದ್ದುಪಡಿ ಆಗದೇ ಇರುವ ಕಾರಣ ಅರ್ಜಿ ಯಶಸ್ವಿಯಾಗದೆ ಹಾಗೆಯೇ ಉಳಿದಿತ್ತು.
ಸರ್ಕಾರ 1.27 ಲಕ್ಷ ಪಡಿತರ ಅರ್ಜಿಗಳಿಗೆ ಒಪ್ಪಿಗೆ ಸೂಚಿಸಿದೆ. ಆದರೆ 93,000 ಅರ್ಜಿಗಳು ತಿರಸ್ಕಾರಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೂ ಉಳಿದ ಅರ್ಜಿಗಳ ಪರಿಷ್ಕರಣೆ ಆಗುತ್ತಿದೆ, ಹಾಗಾಗಿ ಈ ತಿಂಗಳ ಅಂತ್ಯದ ಒಳಗೆ ಪರಿಷ್ಕರಣೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ತಿಳಿಸಿದೆ.
ರೇಷನ್ ಕಾರ್ಡ್ eKYC ಆಗಿದ್ಯೋ ಇಲ್ಲವೋ ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ? ಆಗದೆ ಇದ್ರೆ ಈ ರೀತಿ ಮಾಡಿ
ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ವಂಚನೆ
ಇನ್ನು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಒಂದೇ ಕುಟುಂಬದಲ್ಲಿ ಇದ್ದು ಬೇರೆ ಬೇರೆ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ರೇಷನ್ ಕಾರ್ಡ್ ನಲ್ಲಿ ಇದ್ದ ಹೆಸರು ಡಿಲೀಟ್ ಮಾಡಿಸಲಾಗಿದೆ. ಅತ್ತೆ ಹಾಗೂ ಸೊಸೆಯ ಹೆಸರಿನಲ್ಲಿ ಪ್ರತ್ಯೇಕ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲಾಗಿದೆ.
ಜೊತೆಗೆ ವಿಳಾಸ ಬದಲಾಯಿಸಲಾಗಿದೆ. ಇಂತಹ ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ ಬದಲು ರೇಷನ್ ಕಾರ್ಡ್ ರದ್ದುಪಡಿಸಲು ಸರ್ಕಾರ ಮುಂದಾಗಿದೆ.
ಎಪಿಎಲ್ ಕಾರ್ಡ್ ಇದ್ರೂ ಸಿಗುತ್ತಾ ಗೃಹಲಕ್ಷ್ಮಿ ಹಣ? ಈಗಲೂ ಅಪ್ಲೈ ಮಾಡಬಹುದಾ? ಇಲ್ಲಿದೆ ಉತ್ತರ
ಮೊದಲನೇ ಕಂತಿನ ಹಣ ಎಲ್ಲರಿಗೂ ಸಿಕ್ಕಿಲ್ಲ (first installment)
ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 1.13 ಕೋಟಿ ಜನರಲ್ಲಿ 82 ಲಕ್ಷ ಜನರ ಖಾತೆಗೆ ಹಣ ವರ್ಗಾವಣೆ (Money Transfer) ಆಗಿದೆ ಇನ್ನು 24 ಲಕ್ಷ ಜನರಿಗೆ ಹಣ ತಲುಪಿಲ್ಲ. ಇದೀಗ ರೇಷನ್ ಕಾರ್ಡ್ ತಿದ್ದುಪಡಿ ವೇಳೆ ಸಾಕಷ್ಟು ವಂಚನೆ ಗಮನಕ್ಕೆ ಬಂದಿದ್ದು ಇಂತಹ ತಿದ್ದುಪಡಿ ಅರ್ಜಿಯನ್ನು ಕೂಡ ವಜಾಗೊಳಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಯಾರಲ್ಲ ಗಿಮಿಕ್ ಗಳನ್ನು ಮಾಡುತ್ತಿದ್ದಾರೆ, ಅಂತವರ ರೇಷನ್ ಕಾರ್ಡ್ ಶಾಶ್ವತವಾಗಿ ರದ್ದುಪಡಿಸಲಾಗುತ್ತಿದೆ.
1 lakh APL and BPL ration card Correction applications rejected
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.