ಎಪಿಎಲ್ ಕಾರ್ಡ್ ಇದ್ರೂ ಸಿಗುತ್ತಾ ಗೃಹಲಕ್ಷ್ಮಿ ಹಣ? ಈಗಲೂ ಅಪ್ಲೈ ಮಾಡಬಹುದಾ? ಇಲ್ಲಿದೆ ಉತ್ತರ
ಬಿಪಿಎಲ್ ಕಾರ್ಡ್ (BPL card) ಹೊಂದಿರುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ, ಆದರೆ ಎಪಿಎಲ್ ಕಾರ್ಡ್ (APL Card) ಹೊಂದಿರುವ ಗೃಹಿಣಿಯರಿಗೆ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಸಿಗುತ್ತದೆಯೇ?
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ (gruha Lakshmi scheme) ಅರ್ಜಿ ಸಲ್ಲಿಸಿರುವವರು ಒಬ್ಬರೋ ಇಬ್ಬರೋ ಅಲ್ಲ ಕೋಟ್ಯಾಂತರ ಗೃಹಿಣಿಯರು.
ಹಾಗಾಗಿ ಎಲ್ಲರ ಖಾತೆಗೆ 2000 ರೂ.ಒಮ್ಮೆಲೇ ಬಂದು ಜಮಾ ಆಗಲು (Money Deposit) ಸಾಧ್ಯವಿಲ್ಲ. ಮೊದಲ ಕಂತಿನ ಹಣ ಬಿಡುಗಡೆ ಆಗಿ ಸುಮಾರು 20 ದಿನಗಳ ಮೇಲಾಗಿದೆ. ಸರ್ಕಾರ ಹೇಳಿರುವ ಪ್ರಕಾರ ಸುಮಾರು 55% ನಷ್ಟು ಮಹಿಳೆಯರಿಗೆ ಈಗಾಗಲೇ ಹಣ ವರ್ಗಾವಣೆ ಆಗಿದೆ. 45% ಮಹಿಳೆಯರಿಗೆ ಇನ್ನೂ ಮೊದಲ ಕಂತಿನ ಹಣ ಬಂದಿಲ್ಲ.
ಹೌದು, ಹಲವರಿಗೆ ಅರ್ಜಿ ಸಲ್ಲಿಸಿದ್ದು ಸರಿಯಾಗಿದೆ ಆದರೂ ಹಣ ಬಂದು ಸೇರಿಲ್ಲ ಅಂತ ಬಹಳ ಬೇಸರವಿದೆ. ಆದರೆ ಇದಕ್ಕೆ ಕಾರಣವನ್ನು ಕೂಡ ಸರ್ಕಾರ ಈಗಾಗಲೇ ತಿಳಿಸಿದೆ. ಮೊದಲನೆಯದಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಗೃಹಿಣಿಯರ ರೇಷನ್ ಕಾರ್ಡ್ (ration card) ನಲ್ಲಿ ಮುಖ್ಯ ಹೆಸರು ಗೃಹಿಣಿಯದ್ದೇ ಆಗಿರಬೇಕು.
ಒಂದೇ ಮನೆಯಲ್ಲಿ ಎರಡು ಮೂರು ರೇಷನ್ ಕಾರ್ಡ್ ಇರುವವರಿಗೆ ಬಿಗ್ ಅಪ್ಡೇಟ್; ಬಂದಿದೆ ಹೊಸ ರೂಲ್ಸ್
ಯಾರು ಅರ್ಜಿ ಸಲ್ಲಿಸಿದ್ದಾರೋ ಅಂಥವರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ (bank account Aadhar link) ಆಗಿರಬೇಕು. ಈ ಎಲ್ಲಾ ತಿದ್ದುಪಡಿಗಳ ಜೊತೆಗೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ (Bank Account) ನಮೋದಿಸಲಾಗಿರುವ ಹೆಸರುಗಳು ಕೂಡ ಟ್ಯಾಲಿ ಆಗಬೇಕು.
ಇವುಗಳಲ್ಲಿ ಯಾವುದೇ ತಪ್ಪುಗಳು ಇದ್ದರೂ ಅಂತವರ ಖಾತೆಗೆ ಹಣ ಬರಲು ಸಾಧ್ಯವಿಲ್ಲ.
ಗೃಹಲಕ್ಷ್ಮಿ ಯೋಜನೆಯ ಹಣ ಎಪಿಎಲ್ ಕಾರ್ಡ್(APL card) ಗೆ ಬರುತ್ತದೆ
ಬಿಪಿಎಲ್ ಕಾರ್ಡ್ (BPL card) ಹೊಂದಿರುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಎನ್ನುವುದು ಸರ್ಕಾರವು ಕೂಡ ತಿಳಿಸಿರುವ ವಿಚಾರ. ಆದರೆ ಎಪಿಎಲ್ ಕಾರ್ಡ್ (APL Card) ಹೊಂದಿರುವ ಗೃಹಿಣಿಯರಿಗೆ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಸಿಗುತ್ತದೆಯೇ ಇಲ್ಲವೇ ಎನ್ನುವ ಅನುಮಾನ ಹಲವರಲ್ಲಿ ಇದೆ.
ಗೃಹಲಕ್ಷ್ಮಿ ಯೋಜನೆ ಕರ್ನಾಟಕದ ಪ್ರತಿಯೊಂದು ಕುಟುಂಬದ ಮೊದಲ ಗೃಹಿಣಿಗೆ ಸಿಗಬೇಕು ಎನ್ನುವುದು ಸರ್ಕಾರದ ಆಶಯ ಹಾಗಾಗಿ ನಿಮ್ಮ ಬಳಿ ಎಪಿಎಲ್ ಕಾರ್ಡ್ ಇರಲಿ ಅಥವಾ ಬಿಪಿಎಲ್ ಕಾರ್ಡ್ ಇರಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗುತ್ತದೆ.
ಇನ್ಮುಂದೆ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯವಿಲ್ಲ! ತಲೆ ನೋವಾಗಿ ಪರಿಣಮಿಸಿದೆ ಹೊಸ ನಿಯಮ
ಗೃಹಲಕ್ಷ್ಮಿ ಯೋಜನೆಗೆ ಈಗಲೂ ಅರ್ಜಿ ಸಲ್ಲಿಸಬಹುದಾ?
ಯಾವುದೇ ಯೋಜನೆ ಜಾರಿ ಬಂದರೂ ಅದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂಬುದು ಇರುತ್ತದೆ. ಗೃಹ ಜ್ಯೋತಿ ಯೋಜನೆಗೂ ಕೂಡ ಅರ್ಜಿ ಸಲ್ಲಿಸಲು ಆಗಸ್ಟ್ ತಿಂಗಳು ಕೊನೆಯ ಸಮಯವಾಗಿತ್ತು. ಆದರೆ ಅದೃಷ್ಟವಶಾತ್ ಗೃಹಲಕ್ಷ್ಮಿ ಯೋಜನೆಗೆ ಕೊನೆಯ ದಿನಾಂಕ ಇಲ್ಲ.
ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ ಇದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಳ್ಳಿ ಹಾಕಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಗೃಹಿಣಿಯರು ವರ್ಷವಿಡಿ ಯಾವ ಅವಧಿಯಲ್ಲಿ ಬೇಕಾದರೂ ಅರ್ಜಿ ಸಲ್ಲಿಸಬಹುದು. ಹಾಗಾಗಿ ಯಾರ ಬಳಿ ಪಡಿತರ ಚೀಟಿ ಇಲ್ಲವೋ ಅಂತವರು ಪಡಿತರ ಚೀಟಿ ಹೊಸದಾಗಿ ಬಿಡುಗಡೆ ಆದ ನಂತರ ಪಡಿತರ ಚೀಟಿ ಮಾಡಿಸಿಕೊಂಡು ಅರ್ಜಿ ಸಲ್ಲಿಸಬಹುದು.
ಇನ್ನು ಗೃಹಿಣಿಯರು ತಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ನ ದಾಖಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶವಿದೆ.
ರೇಷನ್ ಕಾರ್ಡ್ ಇಲ್ಲದ್ರೆ ಇದ್ರೂ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬಹುದಾ? ಇಲ್ಲಿದೆ ನಿಮ್ಮ ಗೊಂದಲಗಳಿಗೆ ಉತ್ತರ
60 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದೇ
ಪ್ರತಿ ಮನೆಯ ಮೊದಲ ಗೃಹಿಣಿ ಹೆಚ್ಚಾಗಿ ಹಿರಿಯ ಹೆಂಗಸರೆ ಆಗಿರುತ್ತಾರೆ. ನಿಮ್ಮ ತಾಯಿ ಅಥವಾ ಅತ್ತೆ ಹಿರಿಯ ಗೃಹಿಣಿ ಎನಿಸಿಕೊಂಡಿರುತ್ತಾರೆ. ಇಂಥವರಿಗೆ 60 ವರ್ಷ ವಯಸ್ಸು ದಾಟಿದರೂ ಕೂಡ ಗೃಹಲಕ್ಷ್ಮಿಯ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಅರ್ಹತೆ ಇರುತ್ತದೆ. ಜೊತೆಗೆ ಈಗಾಗಲೇ ಸರ್ಕಾರದ ಪಿಂಚಣಿ ಹಣ ಬರುತ್ತಿರುವವರು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
People with APL card also get Gruha Lakshmi Yojana Money