ಒಂದೇ ಮನೆಯಲ್ಲಿ ಎರಡು ಮೂರು ರೇಷನ್ ಕಾರ್ಡ್ ಇರುವವರಿಗೆ ಬಿಗ್ ಅಪ್ಡೇಟ್; ಬಂದಿದೆ ಹೊಸ ರೂಲ್ಸ್
ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) 2,000 ರೂಪಾಯಿಗಳನ್ನು ಪಡೆದುಕೊಳ್ಳಬೇಕು ಅಂದ್ರೆ, ರೇಷನ್ ಕಾರ್ಡ್ (Ration Card) ಹೊಂದಿರುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು.
ಆದರೆ ಈ ರೇಶನ್ ಕಾರ್ಡ್ ನಲ್ಲಿಯೂ ಕೂಡ ಪ್ರಮುಖ ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕು. ಇಲ್ಲವಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಅಕೌಂಟ್ ಗೆ (Bank Account) ಬರುವುದಿಲ್ಲ. ಇನ್ನು ಕೆಲವು ಕುಟುಂಬಗಳು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಅನ್ನು ಕೂಡ ಹೊಂದಿರುತ್ತವೆ
ಇಂಥವರಿಗೆ ಸರ್ಕಾರ ಹೊಸ ನಿಯಮ ಜಾರಿಗೆ ತರಲಿದ್ದು ಹಾಗೇನಾದ್ರೂ ಆದರೆ ಒಂದೇ ಕುಟುಂಬದಲ್ಲಿ ಇರುವವರು ಎರಡು ಅಥವಾ ಮೂರು ರೇಷನ್ ಕಾರ್ಡ್ ಹೊಂದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗಬಹುದು.
ಇನ್ಮುಂದೆ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ಸಾಧ್ಯವಿಲ್ಲ! ತಲೆ ನೋವಾಗಿ ಪರಿಣಮಿಸಿದೆ ಹೊಸ ನಿಯಮ
ಕುಟುಂಬ ಒಂದು ರೇಷನ್ ಕಾರ್ಡ್ 3
ಕರ್ನಾಟಕ ರಾಜ್ಯದಲ್ಲಿ ಸಹೋದರರ (ಗಂಡ ಹೆಂಡತಿ ಹಾಗೂ ಮಕ್ಕಳು) ಹೆಸರಿನಲ್ಲಿ ತಂದೆ ತಾಯಿ ಹೆಸರಿನಲ್ಲಿ ಬೇರೆ ಬೇರೆ ರೇಷನ್ ಕಾರ್ಡ್ ಮಾಡಿಸಿಕೊಂಡವರು ಇದ್ದಾರೆ.
ಅದೇ ರೀತಿ ಹೀಗೆ ರೇಷನ್ ಕಾರ್ಡ್ ಮಾಡಿಕೊಂಡು ಅವರು ಒಂದೇ ಕುಟುಂಬದಲ್ಲಿ ವಾಸಿಸುತ್ತಾರೆ. ಹೆಸರಿಗೆ ಮೂರು ರೇಷನ್ ಕಾರ್ಡ್ ಆದರೆ ಪ್ರತಿಯೊಂದು ರೇಷನ್ ಕಾರ್ಡ್ ನಲ್ಲಿಯೂ ಇರುವ ವಿಳಾಸ (same address) ಮಾತ್ರ ಒಂದೇ ಆಗಿರುತ್ತದೆ.
ಒಂದು ವೇಳೆ ಹೀಗೆ ಬೇರೆ ಬೇರೆ ರೇಷನ್ ಕಾರ್ಡ್ ಹೊಂದಿದ್ದು ಹೆಸರುಗಳು ಬೇರೆ ಬೇರೆ ಆಗಿದ್ದರು ವಿಳಾಸ ಮಾತ್ರ ಒಂದೇ ಆಗಿದ್ದರೆ, ಖಂಡಿತವಾಗಿಯೂ ಸರ್ಕಾರ ಜಾರಿಗೆ ತರಲಿರುವ ಈ ಹೊಸ ರೂಲ್ಸ್ (new rules) ಬಗ್ಗೆ ತಿಳಿದುಕೊಳ್ಳಲೇಬೇಕು.
10ನೇ ತರಗತಿ ಪಾಸ್ ಆಗಿದ್ರೂ ಸಾಕು ಸಿಗಲಿದೆ ಸರ್ಕಾರಿ ಕೆಲಸ! ₹37,900 ಸಂಬಳ, ಇಂದೇ ಅಪ್ಲೈ ಮಾಡಿ
ರೇಷನ್ ಕಾರ್ಡ್ ದುರುಪಯೋಗ ಆಗುತ್ತಿರುವುದರ ಬಗ್ಗೆ ಸರ್ಕಾರದ ಗಮನ
ಒಂದು ಕುಟುಂಬದಲ್ಲಿ ಅಪ್ಪ-ಅಮ್ಮನ ಹೆಸರಿನಲ್ಲಿ ಒಂದು ರೇಷನ್ ಕಾರ್ಡ್ ಹಿರಿಯ ಮಗನ ಹಾಗೂ ಹೆಂಡತಿಯ ಹೆಸರಿನಲ್ಲಿ ಒಂದು ಕಾರ್ಡ್ ಎರಡನೇ ಮಗನ ಹಾಗೂ ಹೆಂಡತಿಯ ಹೆಸರಿನಲ್ಲಿ ಮತ್ತೊಂದು ಕಾರ್ಡ್ ಹೀಗೆ ಒಂದೇ ಕುಟುಂಬದ ಮೂವರು ಸದಸ್ಯರು ಮೂರು ಕಾರ್ಡ್ ಮಾಡಿಕೊಂಡು ಒಂದೇ ಕುಟುಂಬದಲ್ಲಿ (same family) ವಾಸಿಸುವಂತಿಲ್ಲ.
ಎಲ್ಲರೂ ಬೇರೆ ಬೇರೆ ವಾಸಿಸುತ್ತಿದ್ದು ವಿಳಾಸವು ಕೂಡ ಬೇರೆ ಆಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಹೆಸರಿಗೆ ಮಾತ್ರ ಬೇರೆ ಬೇರೆ ಕುಟುಂಬದಲ್ಲಿ ವಾಸಿಸುತ್ತಿರುವಂತೆ ತೋರಿಸಿ ವಿಳಾಸ ಮಾತ್ರ ಒಂದೇ ಆಗಿದ್ದರೆ ಸಮಸ್ಯೆ ತಪ್ಪಿದ್ದಲ್ಲ.
ಗಣೇಶ ಹಬ್ಬಕ್ಕೆ ಮಹಿಳೆಯರಿಗೆ ಗುಡ್ ನ್ಯೂಸ್; ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದ ಸಿಎಂ
ಯಾವುದೇ ಕಾರಣಕ್ಕೂ ಈ ರೀತಿ ಮಾಡಿ ಸರ್ಕಾರದ ಕಣ್ಣಿಗೆ ಮಣ್ಣೆರೆಚಲು ಸಾಧ್ಯವಲ್ಲ. ರೇಷನ್ ಕಾರ್ಡ್ ಅದರಲ್ಲೂ ಬಿಪಿಎಲ್ ಕಾರ್ಡ್ (BPL card) ನೀಡುವುದು ಬಡತನ ರೇಖೆಗಿಂತ ಕೆಳಗಿರುವ (below poverty line) ಕುಟುಂಬದವರು ಪ್ರಯೋಜನ ಪಡೆದುಕೊಳ್ಳಲಿ ಅಂತ, ಉಚಿತ ಪಡಿತರ ಅವರಿಗೆ ಸಿಗಲಿ ಎನ್ನುವ ಕಾರಣಕ್ಕೆ.
ಆದರೆ ರಾಜ್ಯದಲ್ಲಿ ಅದೆಷ್ಟೋ ಜನ ಸಕಲ ಅನುಕೂಲಗಳು ಇದ್ದರೂ ಕೂಡ ಬಿಪಿಎಲ್ ಪಡಿತರ ಕಾರ್ಡ್ ಹೊಂದಿದ್ದಾರೆ. ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಯೋಜನೆಯಿಂದಾಗಿ ಈ ತರಹದ ವಂಚನೆಗಳು ಸರ್ಕಾರದ ಗಮನಕ್ಕೆ ಬರುತ್ತಿವೆ.
ಒಂದು ಕುಟುಂಬದಲ್ಲಿ ಬೇರೆ ಬೇರೆ ರೇಷನ್ ಕಾರ್ಡ್ ಮಾಡಿಕೊಳ್ಳುವುದರಿಂದ ಹಿಡಿದು, ಮೃತ ಸದಸ್ಯರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆಯದೆ ಇರುವ ವಂಚನೆಯವರೆಗೆ ಎಲ್ಲವನ್ನು ಸರ್ಕಾರ ಹಾಗೂ ಆರೋಗ್ಯ ಇಲಾಖೆ (health department) ಪತ್ತೆ ಹಚ್ಚುತ್ತಿದ್ದು, ಸದ್ಯದಲ್ಲಿಯೇ ಇಂತಹ ರೇಷನ್ ಕಾರ್ಡ್ ಗಳು ರದ್ದಾಗಲಿವೆ.
ರೇಷನ್ ಕಾರ್ಡ್ ಇಲ್ಲದ್ರೆ ಇದ್ರೂ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬಹುದಾ? ಇಲ್ಲಿದೆ ನಿಮ್ಮ ಗೊಂದಲಗಳಿಗೆ ಉತ್ತರ
ಜೊತೆಗೆ ಸರ್ಕಾರದ ಯೋಜನೆಯ ದುರುಪಯೋಗ ಮಾಡಿಕೊಂಡಿರುವುದು ಗಮನಕ್ಕೆ ಬಂದರೆ ಅಂತವರಿಗೆ ಯಾವ ಶಿಕ್ಷೆ ನೀಡಬಹುದು ಎಂಬುದು ಸದ್ಯದಲ್ಲಿಯೇ ತಿಳಿಯಲಿದೆ.
Big update for those who have two or three ration cards in the same Family