10ನೇ ತರಗತಿ ಪಾಸ್ ಆಗಿದ್ರೂ ಸಾಕು ಸಿಗಲಿದೆ ಸರ್ಕಾರಿ ಕೆಲಸ! ₹37,900 ಸಂಬಳ, ಇಂದೇ ಅಪ್ಲೈ ಮಾಡಿ
ಹಾಸನದಲ್ಲಿ (Hasan) ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ನಿಮ್ಮದಾಗಿದೆ, ಹಾಸನದ ಕೋರ್ಟ್ (Hasan Court) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
10ನೇ ತರಗತಿ ಆಗಿದೆ ಅಷ್ಟೇ ನಮಗೆಲ್ಲ ಸರ್ಕಾರಿ ಕೆಲಸ (Government Job) ಎಲ್ಲಿ ಸಿಗುತ್ತದೆ ಎಂದು ನೀವು ಯೋಚನೆ ಮಾಡುತ್ತಿದ್ದರೆ ನಿಮಗಾಗಿ ಇಲ್ಲಿ ಒಂದು ಒಳ್ಳೆಯ ಅವಕಾಶ ಕಾದಿದೆ.
ಹಾಸನದಲ್ಲಿ (Hasan) ಸರ್ಕಾರಿ ಉದ್ಯೋಗ (Govt Job) ಪಡೆಯುವ ಅವಕಾಶ ನಿಮ್ಮದಾಗಿದೆ, ಹಾಸನದ ಕೋರ್ಟ್ (Hasan Court) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಸುಮಾರು 43 ಪ್ರೊಸೆಸ್ ಸರ್ವರ್ ಮತ್ತು ಪ್ಯೂನ್ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ಪಾಸ್ ಆಗಿದ್ರೆ ಸಾಕು ನಿಮಗೆ ಕೆಲಸ ಸಿಗುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಕ್ಟೊಬರ್ 3 ಆಗಿದ್ದು, ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
ಗಣೇಶ ಹಬ್ಬಕ್ಕೆ ಮಹಿಳೆಯರಿಗೆ ಗುಡ್ ನ್ಯೂಸ್; ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದ ಸಿಎಂ
ಹುದ್ದೆಗಳ ಬಗ್ಗೆ ಮಾಹಿತಿ ನೀಡುವುದಾರೆ ಖಾಲಿ ಇರುವುದು ಒಟ್ಟು 11 ಪ್ರೊಸೆಸ್ ಸರ್ವರ್, 32 ಪ್ಯೂನ್ ಹುದ್ದೆಗಳು. ಇನ್ನು ವಿದ್ಯಾರ್ಹತೆ, ಸರ್ಕಾರದ ಮಾನ್ಯತೆ ಹೊಂದಿರುವ ಸಂಸ್ಥೆ ಅಥವಾ ಶಾಲೆಯಿಂದ 10ನೇ ತರಗತಿ ಪಾಸ್ ಆಗಿರಬೇಕು.
ವಯೋಮಿತಿ ಬಗ್ಗೆ ಹೇಳುವುದಾದರೆ 2023ರ ಆಕ್ಟೊಬರ್ 3ಕ್ಕೆ 18 ವರ್ಷ ತುಂಬಿದ್ದು, 35 ವರ್ಷಗಳ ಒಳಗೆ ಇರಬೇಕು. ವಯೋಮಿತಿ ಸಡಿಲಿಕೆ ಇದ್ದು, SC/ST/ಪ್ರವರ್ಗ 1ವರ್ಗದವರಿಗೆ ವರ್ಷ. ಪ್ರವರ್ಗ 2A/2B/3A ಮತ್ತು 3B ನವರಿಗೆ 3 ವರ್ಷ ಮತ್ತು PwD/ವಿಧವೆಯರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ..
ರೇಷನ್ ಕಾರ್ಡ್ ಇಲ್ಲದ್ರೆ ಇದ್ರೂ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬಹುದಾ? ಇಲ್ಲಿದೆ ನಿಮ್ಮ ಗೊಂದಲಗಳಿಗೆ ಉತ್ತರ
ಕೆಲಸಕ್ಕೆ ಅಪ್ಲೈ ಮಾಡಲು ತಗಲುವ ಅರ್ಜಿ ಶುಲ್ಕದ ಬಗ್ಗೆ ಹೇಳುವುದಾದರೆ, SC/ST/ಪ್ರವರ್ಗ 1ವರ್ಗದವರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಪ್ರವರ್ಗ 2A/2B/3A/ 3B ಮ್ ಮತ್ತು ಮಾಜಿ ಸೈನಿಕ್ ಆಗಿರುವವರು ನವರು 200 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಹಣ ಪಾವತಿ ಮಾಡುವುದು ಆನ್ಲೈನ್ ಮೂಲಕ ಆಗಿರುತ್ತದೆ. ಕೆಲಸ ಅಪಾಯಿಂಟ್ ಆಗುವುದು ಹಾಸನ ಜಿಲ್ಲೆಯಲ್ಲಿ.
ಕೆಲಸಕ್ಕೆ ಸಿಗಬಹುದಾದ ಸಂಬಳದ ಬಗ್ಗೆ ಹೇಳುವುದಾದರೆ, ಪ್ರೊಸೆಸ್ ಸರ್ವರ್ ಕೆಲಸಕ್ಕೆ ಸಿಗಬಹುದಾದ ತಿಂಗಳ ಸಂಬಳ ₹19,950 ಇಂದ ₹37,900 ರೂಪಾಯಿವರೆಗು ಇರುತ್ತದೆ.
ಹೊಸ ಅಪ್ಡೇಟ್! ಗೃಹಲಕ್ಷ್ಮಿ ಯೋಜನೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಸರಿಯಾಗಿ ಲಿಂಕ್ ಆಗಿದ್ಯಾ ತಿಳಿದುಕೊಳ್ಳಿ
ಪ್ಯೂನ್ ಕೆಲಸಕ್ಕೆ ಸಿಗಬಹುದಾದ ತಿಂಗಳ ಸಂಬಳ ₹17,000 ಇಂದ ₹28,950 ರೂಪಾಯಿವರೆಗು ಇರುತ್ತದೆ. ಇನ್ನು ಕೆಲಸದ ಆಯ್ಕೆ ಪ್ರಕ್ರಿಯೆ ಮೆರಿಟ್ ಲಿಸ್ಟ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಈ ಮೂರು ಹಂತಗಳಲ್ಲಿ ನಡೆಯುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ. ಪ್ರೊಸೆಸ್ ಸರ್ವರ್ ಕೆಲಸಕ್ಕೆ ಅರ್ಜಿ https://recruitmenthck.kar.nic.in/district/has/prs/home.php
ಪ್ಯೂನ್ ಕೆಲಸಕ್ಕೆ ಅರ್ಜಿ https://recruitmenthck.kar.nic.in/district/has/gdp/home.php
ಅರ್ಜಿ ಸಲ್ಲಿಕೆ ಶುರು ಆಗಿರುವುದು 4/9/2023 ರಂದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3/10/2023. ಆಸಕ್ತಿ ಮತ್ತು ಹೊಂದಿರುವವರು ಕೆಲಸಕ್ಕೆ ಅಪ್ಲೈ ಮಾಡಿ, ಸರ್ಕಾರಿ ಕೆಲಸ ಪಡೆಯಿರಿ.
10th pass will be enough to get a government job