ರೇಷನ್ ಕಾರ್ಡ್ ಇಲ್ಲದ್ರೆ ಇದ್ರೂ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬಹುದಾ? ಇಲ್ಲಿದೆ ನಿಮ್ಮ ಗೊಂದಲಗಳಿಗೆ ಉತ್ತರ
ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ ಅವರು ಹೊಸ ರೇಷನ್ ಕಾರ್ಡ್ ಆಗುವವರೆಗೆ ಕಾದು ಹೊಸ ರೇಷನ್ ಕಾರ್ಡ್ ಪಡೆದು ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
1.ರೇಷನ್ ಕಾರ್ಡ್(ration card) ಇಲ್ಲದೆ ಇದ್ದರೂ ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme) ಅಪ್ಲೈ ಮಾಡಬಹುದಾ?
2. ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗದೆ ಇದ್ರೂ ಗೃಹಲಕ್ಷ್ಮಿ ಯೋಜನೆಯ ಹಣ ನಮ್ಮ ಖಾತೆಗೆ ಬರುತ್ತಾ?
3. ಗೃಹಿಣಿ ಯಜಮಾನಿ ಆಗದೆ ಇದ್ದರೂ ಹಣ ಬರುತ್ತಾ.
ಹೌದು ಕೋಟ್ಯಾಂತರ ಅರ್ಜಿದಾರರಲ್ಲಿ ಬಹುಶ: ಲಕ್ಷಾಂತರ ಜನರಿಗೆ ಈ ಅನುಮಾನ ಇದ್ದೇ ಇರುತ್ತದೆ. ನಿಮ್ಮ ಇಂತಹ ಹಲವು ಗೊಂದಲಗಳನ್ನು ಈ ಲೇಖನದ ಮೂಲಕ ಪರಿಹರಿಸಲು ಪ್ರಯತ್ನಿಸುತ್ತೇವೆ ನೀವು ಕೇಳುವ ಹಲವು ಪ್ರಶ್ನೆಗಳಿಗೆ ಇಲ್ಲಿ ಸರಿಯಾದ ಉತ್ತರ ಇದೆ. ನಿಮ್ಮ ಗೊಂದಲ ನಿವಾರಣೆಗೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಹೊಸ ಅಪ್ಡೇಟ್! ಗೃಹಲಕ್ಷ್ಮಿ ಯೋಜನೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಸರಿಯಾಗಿ ಲಿಂಕ್ ಆಗಿದ್ಯಾ ತಿಳಿದುಕೊಳ್ಳಿ
ಮೊದಲನೆಯದಾಗಿ ರೇಷನ್ ಕಾರ್ಡ್ ಇಲ್ಲದೆ ಅಪ್ಲೈ ಮಾಡಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸುವುದಾದರೆ, ಗೃಹಲಕ್ಷ್ಮಿ ಯೋಜನೆಯ 2000ರೂ.ಗಳನ್ನು ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ ಕಡ್ಡಾಯ.
ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ ಅವರು ಹೊಸ ರೇಷನ್ ಕಾರ್ಡ್ ಆಗುವವರೆಗೆ ಕಾದು ಹೊಸ ರೇಷನ್ ಕಾರ್ಡ್ ಪಡೆದು ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಸದ್ಯದಲ್ಲಿಯೇ ಈಗಾಗಲೇ ಅರ್ಜಿ ತೆಗೆದುಕೊಂಡಿರುವ ರೇಷನ್ ಕಾರ್ಡ್ ಗಳನ್ನು ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಇನ್ನು ಗೃಹಲಕ್ಷ್ಮಿ ಯೋಜನೆಗೆ ಅಂತಿಮ ದಿನಾಂಕ ಕೂಡ ಘೋಷಣೆಯಾಗಿಲ್ಲ, ವರ್ಷ ಪೂರ್ತಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ರೇಷನ್ ಕಾರ್ಡ್ ಇಲ್ಲದವರು ರೇಷನ್ ಕಾರ್ಡ್ ಪಡೆದು ನಂತರ ಅರ್ಜಿ ಸಲ್ಲಿಸಬಹುದು.
ಬ್ಯಾಂಕ್ ಅಕೌಂಟ್ (ಬ್ಯಾಂಕ್ ಅಕೌಂಟ್) ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತದೆಯೇ? ಖಂಡಿತವಾಗಿಯೂ ಇಲ್ಲ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ನೀವು ಪಡೆದುಕೊಳ್ಳಬೇಕೆಂದರೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ (Bank Account) ಜೊತೆಗೆ ಲಿಂಕ್ ಆಗಿರಲೇಬೇಕು.
ರೇಷನ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಹೊಸ ಸಮಸ್ಯೆ, ಈಗ ಅಪ್ಡೇಟ್ ಮಾಡಿಸುವ ಅವಕಾಶ ಕೂಡ ಇಲ್ಲ
ಒಂದು ವೇಳೆ ಆಧಾರ್ ಸೀಡಿಂಗ್ (ಆಧಾರ್ ಸೀಡಿಂಗ್) ಆಗದೇ ಇದ್ದಲ್ಲಿ ಸರ್ಕಾರದಿಂದ ನಿಮ್ಮ ಖಾತೆಗೆ ಹಣ ಮಂಜೂರಾಗಿದ್ದರು ಕೂಡ ಅದು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಸೀಡಿಂಗ್, ಎನ್ ಪಿಸಿಐ ಕಡ್ಡಾಯವಾಗಿದೆ.
ಹಾಗಾಗಿ ಮನೆಯಲ್ಲಿ ಯಜಮಾನಿ ಇಲ್ಲದೆ ಇದ್ದಲ್ಲಿ ತಕ್ಷಣವೇ ರೇಷನ್ ಕಾರ್ಡ್ ನಿಂದ ಅವರ ಹೆಸರನ್ನು ತೆಗೆಸಬೇಕು ಜೊತೆಗೆ ಹೊಸ ಯಜಮಾನಿ ಹೆಸರನ್ನು ಮುಖ್ಯ ಸದಸ್ಯರಾಗಿ ಸೇರ್ಪಡೆ ಮಾಡಬೇಕು.
ರಾಜ್ಯದ ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಯುವ ನಿಧಿ ಯೋಜನೆಯ ಪ್ರಮುಖ ಘೋಷಣೆ
ಸದ್ಯ ರೇಷನ್ ಕಾರ್ಡ್ ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ಸ್ಥಗಿತಗೊಳಿಸಲಾಗಿದ್ದು ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಡುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.
ಇನ್ನು ಗ್ರಹಲಕ್ಷ್ಮಿ ಯೋಜನೆಯ 2000 ಗಳನ್ನು ಪಡೆದುಕೊಳ್ಳಲು ಬೇಕಾಗಿರುವ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ದರೂ ಕೂಡ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂಬುದಾದರೆ, ಸರ್ಕಾರ ಈಗಾಗಲೇ ತಿಳಿಸಿರುವ ಹಾಗೆ ದಿನಕ್ಕೆ 6 ರಿಂದ 7 ಲಕ್ಷ ಜನರ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ ಹಾಗಾಗಿ ಉಳಿದವರ ಖಾತೆಗೆ ಹತ್ತರಿಂದ ಹನ್ನೆರಡು ದಿನಗಳ ಒಳಗಾಗಿ ಮೊದಲ ಕಂತಿನ ಹಣ ವರ್ಗಾವಣೆ ಆಗುವುದು.
ಗೃಹಲಕ್ಷ್ಮಿ ಹಣ ₹2000 ಯಾರಿಗೆ ಬಂದಿಲ್ವೋ, ಕಡೆಗೂ ಗೊತ್ತಾಯ್ತು ಯಾವಾಗ ಜಮಾ ಆಗುತ್ತೆ ಅಂತ
ಆದಾಗ್ಯೂ ನಿಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎಂಬುದಾದರೆ ನೀವು ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಯನ್ನು ಸಂಪರ್ಕಿಸಿ ನಿಮ್ಮ ಅರ್ಜಿ ಸಲ್ಲಿಸುವಿಕೆ ಅಥವಾ ದಾಖಲೆಯಲ್ಲಿ ಯಾವುದಾದರೂ ಸಮಸ್ಯೆ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಒಟ್ಟಿನಲ್ಲಿ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ ಹಣ ಸೆಪ್ಟೆಂಬರ್ ಅಂತ್ಯದ ಒಳಗೆ ಜಮಾ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
Can apply for Gruha Lakshmi Yojana without ration card
Follow us On
Google News |