ಪಕ್ಕದ ಮನೆಯವರ ಖಾತೆಗೆ 2,000 ರೂ. ಬಂದು ತಲುಪಿದರು ನಮಗೆ ಮಾತ್ರ ಬಂದು ತಲುಪಿಲ್ಲ, ನಾವು ಎಲ್ಲರಿಗಿಂತ ಮೊದಲೇ ಅರ್ಜಿ (application) ಸಲ್ಲಿಸಿದ್ದೇವೆ, ಅರ್ಜಿ ಸ್ವೀಕಾರವಾಗಿದೆ ಎನ್ನುವ ಮೆಸೇಜ್ ಕೂಡ ಬಂದಿದೆ, ಮಹಿಳೆಯರಲ್ಲಿ ಇದೀಗ ಇದೆ ಚರ್ಚೆ..

ಅಗಸ್ಟ್ 30ಕ್ಕೆ ಗೃಹಲಕ್ಷ್ಮಿ ಯೋಜನೆ (Gruha Lakshmi scheme ) ಲಾಂಚ್ ಆಗುತ್ತಿದ್ದ ಹಾಗೆ ನಮ್ಮ ಖಾತೆಗೆ ಹಣ ಬರುವುದಾಗಿ ಮೆಸೇಜ್ ಕೂಡ ಸರ್ಕಾರ ಕಳುಹಿಸಿದೆ. ಆದರೆ ನಮ್ಮ ಖಾತೆಯಲ್ಲಿ ಮಾತ್ರ 2000 ಕಾಣುತ್ತಿಲ್ಲ. ಇದೆ ಸುಮಾರು ಎಂಟು ಲಕ್ಷ ಗೃಹಿಣಿಯರ ಪ್ರಶ್ನೆ.

Gruha Lakshmi balance Money deposit, money transferred only for such People

ರೇಷನ್ ಕಾರ್ಡ್ ಜೊತೆಗೆ ಈ ಒಂದು ದಾಖಲೆ ಇದ್ರೆ ಮಾತ್ರ ಸಿಗುತ್ತೆ ರೇಷನ್! ಮತ್ತೆ ನಿಯಮ ಬದಲಾವಣೆ

ಹೌದು ಕರ್ನಾಟಕದಲ್ಲಿ 1 ಲಕ್ಷ 28,000 ಫಲಾನುಭವಿಗಳಲ್ಲಿ 1.13 ಲಕ್ಷ ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಂಥವರಲ್ಲಿ 82 ಲಕ್ಷ ಜನರ ಖಾತೆಗೆ ಈಗಾಗಲೇ ಹಣ ವರ್ಗಾವಣೆ ಆಗಿದೆ.

ಆದರೆ ಇನ್ನೂ ಶೇಕಡಾ 30% ನಷ್ಟು ಜನರ ಖಾತೆಗೆ ಹಣ ವರ್ಗಾವಣೆ (DBT) ಆಗಿಲ್ಲ. ಅದರಲ್ಲೂ 8 ಲಕ್ಷ ಜನರಿಗೆ ಅಂತೂ ಮೊದಲ ಕಂತು ಬರಲು ಸಾಧ್ಯವೇ ಇಲ್ಲ. ಇದಕ್ಕೆಲ್ಲ ಮುಖ್ಯವಾಗಿರುವ ಕಾರಣ ಏನು ಗೊತ್ತಾ?

ದಿನಕ್ಕೆ ಇಷ್ಟೇ ಖಾತೆಗೆ ಹಣ ವರ್ಗಾವಣೆ ಆಗುತ್ತದೆ:

ನಿಮಗೆ ಮುಖ್ಯವಾಗಿ ಈ ವಿಚಾರ ಗೊತ್ತಿರಬೇಕು. ಕೋಟ್ಯಾಂತರ ಜನರ ಖಾತೆಗೆ ಒಂದೇ ದಿನ ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಸುಮಾರು ಏಳರಿಂದ ಎಂಟು ಲಕ್ಷ ಜನರ ಖಾತೆಗೆ ಮಾತ್ರ ಪ್ರತಿದಿನ ವರ್ಗಾವಣೆ ಆಗುತ್ತದೆ.

ಇದಕ್ಕಿಂತ ಹೆಚ್ಚಿಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ಈಗ ಮೊದಲ ಕಂತಿನ ಹಣ ಯಾರಿಗೆಲ್ಲ ಬಂದು ಸೇರಿಲ್ಲವೋ ಅವರಿಗೆ ಕನಿಷ್ಠ 10ರಿಂದ 12 ದಿನಗಳ ಒಳಗೆ ಮೊದಲ ಕಂತಿನ ಹಣ ಜಮಾ ಆಗಬಹುದು ಎಂದು ಸರ್ಕಾರ ಮಾಹಿತಿ ನೀಡಿದೆ.

ನಮ್ಮ ಬೆಂಗಳೂರು ಸುತ್ತಮುತ್ತ 30*40 ಸೈಟ್ ಬೆಲೆ ಎಷ್ಟಾಗಬಹುದು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ಎಷ್ಟು

Gruha Lakshmi Yojaneಪ್ರತಿ ತಿಂಗಳು ಗೃಹಿಣಿಯರಿಗೆ ಎರಡು ಸಾವಿರ ರೂಪಾಯಿಗಳನ್ನು ಖಾತೆಗೆ ಜಮಾ ಮಾಡಲು ಸರ್ಕಾರ ಒಟ್ಟು 2,100 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.

ಒಂದು ಕೋಟಿ ಹತ್ತು ಲಕ್ಷ ಸಲ್ಲಿಕೆಯಾಗಿರುವ ಅರ್ಜಿಗಳು. ಅವುಗಳಲ್ಲಿ 82 ಲಕ್ಷ ಮನೆ ಒಡತಿಯರ ಖಾತೆಗೆ 2,000 ಜಮಾ ಆಗಿದೆ. ಇನ್ನು 28 ಲಕ್ಷ ಗ್ರಹಿಣಿಯರಿಗೆ ಜಮಾ ಆಗಬೇಕಿದೆ. ಅವುಗಳಲ್ಲಿ 8 ಲಕ್ಷ ಗೃಹಿಣಿಯರಿಗೆ ಮೊದಲ ಕಂತು ಬಿಡುಗಡೆ ಆಗೋದು ಬಹುತೇಕ ಅನುಮಾನ. 10 ರಿಂದ 12 ದಿನಗಳ ಒಳಗೆ ಸಾವಿರ ರೂಪಾಯಿ ಅವರ ಬ್ಯಾಂಕ್ ಖಾತೆಗೆ (Bank Account) ಜಮಾ ಆಗುವುದು.

ಗೃಹಲಕ್ಷ್ಮಿ ಹಣ ಇನ್ನೂ ಯಾರಿಗೆ ಬಂದಿಲ್ವೋ ಅವರು ಕೂಡಲೇ ಈ ಕಚೇರಿಗೆ ಹೋಗಿ! ಮಹತ್ವದ ಮಾಹಿತಿ

8 ಲಕ್ಷ ಜನರ ಅಕೌಂಟ್ಗೆ ಹಣ ಬರೋದಿಲ್ಲ ಯಾಕೆ!

ಸುಮಾರು 41,000 ಗೃಹಿಣಿಯರ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರಿನ ಇನ್ಶಿಯಲ್ ನಲ್ಲಿ ವ್ಯತ್ಯಾಸವಿದೆ. ಅದೇ ರೀತಿ ಬ್ಯಾಂಕ್ ಖಾತೆಯಲ್ಲಿ ಇರುವ ಫೋಟೋ ಹಾಗೂ ಆಧಾರ್ ಕಾರ್ಡ್ Aadhar card ನಲ್ಲಿ ಇರುವ ಫೋಟೋ ಕೂಡ ಸರಿಯಾಗಿ ಟ್ಯಾಲಿ ಆಗದೆ ಅವರ ಖಾತೆಗೆ ಸರ್ಕಾರ ಹಣ ಜಮಾ ಮಾಡಿದರು ಕೂಡ ಬ್ಯಾಂಕ್ bank ಗೆ ಬರುವುದಿಲ್ಲ. ಇದು ವೆರಿಫಿಕೇಶನ್ verification ಸಮಸ್ಯೆ ಆಗಿದ್ದು ಇದು ಸರಿ ಹೋಗುವವರೆಗೆ ಇಂಥವರ ಖಾತೆಗೆ ಹಣ ಬರಲು ಸಾಧ್ಯವಿಲ್ಲ.

ಈ ಕೆ ವೈ ಸಿ (EKYC) ಆಗಿಲ್ಲ

ಇನ್ನು 5 ಲಕ್ಷ 56 ಸಾವಿರ ಗೃಹಿಣಿಯರ ಬ್ಯಾಂಕ್ ಖಾತೆ (Bank Account) ಈಕೆ ವೈ ಸಿ ಆಗಿಲ್ಲ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯು ಇದೆ. ಈ ಸಮಸ್ಯೆಗಳನ್ನು ಅಧಿಕಾರಿಗಳೇ ಪರಿಹರಿಸಬೇಕು. ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ (CDPO) ಅಧಿಕಾರಿಗಳನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆ ಇದ್ದರೆ ಪರಿಹರಿಸಿಕೊಳ್ಳಬಹುದು.

ಬಿಪಿಎಲ್ ರೇಷನ್ ಕಾರ್ಡ್‌ನಲ್ಲಿ 4 ಜನಕ್ಕಿಂತ ಹೆಚ್ಚಿರುವ ಎಲ್ಲರಿಗೂ ಹೊಸ ಅಪ್ಡೇಟ್! ಹೊಸ ನಿಯಮ

ಇನ್ನು ಮನೆಯ ಯಜಮಾನಿ ತೀರಿಕೊಂಡಿದ್ದರೆ ಅವರ ಬದಲು ಮನೆಯ ಬೇರೆ ಗೃಹಿಣಿಯರ ಹೆಸರನ್ನು ಕೂಡ ರೇಷನ್ ಕಾರ್ಡ್ (ration Card)ನಲ್ಲಿ ಸೇರಿಸಬೇಕು. ನೀವು ಈ ರೀತಿ ಮಾಡಿ ಅಪ್ಡೇಟ್ (update) ಆಗುವವರೆಗೂ ನಿಮ್ಮ ಖಾತೆಗೆ ಹಣ ಬರುವುದಿಲ್ಲ. ಒಂದು ಅಂದಾಜಿನ ಪ್ರಕಾರ ಮೊದಲ ಕಂತಿನ ಹಣ ಈ ತಿಂಗಳ ಕೊನೆಯ ಒಳಗೆ ಪ್ರತಿ ಫಲಾನುಭವಿ ಗೃಹಿಣಿಯರ ಖಾತೆಗೆ ಜಮಾ ಆಗಬಹುದು.

know when Gruha Lakshmi Scheme Money will be deposited