ಗೃಹಲಕ್ಷ್ಮಿ ಹಣ ಇನ್ನೂ ಯಾರಿಗೆ ಬಂದಿಲ್ವೋ ಅವರು ಕೂಡಲೇ ಈ ಕಚೇರಿಗೆ ಹೋಗಿ! ಮಹತ್ವದ ಮಾಹಿತಿ

Story Highlights

ಸಾಕಷ್ಟು ಜನ ತಮ್ಮ ಬ್ಯಾಂಕ್ ಅಕೌಂಟ್ (Bank Account) ಈ-ಕೆ ವೈ ಸಿ (E-KYC) ಯನ್ನು ಈಗಲೂ ಕೂಡ ಮಾಡಿಸಿಕೊಂಡಿಲ್ಲ, ಹೀಗೆ ಇರುವ ಖಾತೆ ಆಕ್ಟಿವ್ (Active) ಆಗಿರುವುದಿಲ್ಲ.

ಸರ್ಕಾರದ ಯೋಜನೆಯ ಫಲಾನುಭವಿಗಳು 1.28 ಕೋಟಿ ಜನ ಆದರೆ ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ಅರ್ಜಿ ಸಲ್ಲಿಸಿದವರು 1.7 ಕೋಟಿ ಜನ. ಕೊನೆಗೆ ಇನ್ನೂ ಎಂಟು ಲಕ್ಷ ಜನರ ಕೈಗೆ ಮಾತ್ರ ಹಣ ಬಂದು ಸೇರಿಲ್ಲ

ಇದಕ್ಕಾಗಿ ಹಲವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಕ್ಕೂ ಇಷ್ಟು ಜನರಿಗೆ ಮಾತ್ರ 2,000 ಯಾಕೆ ಬಂದಿಲ್ಲ ಅಂತ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ರೆ ಅದಕ್ಕೆ ಹಲವು ಕಾರಣಗಳನ್ನು ಕೂಡ ಕೊಟ್ಟಿದ್ದಾರೆ.

ಬಿಪಿಎಲ್ ರೇಷನ್ ಕಾರ್ಡ್‌ನಲ್ಲಿ 4 ಜನಕ್ಕಿಂತ ಹೆಚ್ಚಿರುವ ಎಲ್ಲರಿಗೂ ಹೊಸ ಅಪ್ಡೇಟ್! ಹೊಸ ನಿಯಮ

ವಿಳಂಬವಾಗುತ್ತಿದೆ ಸರ್ಕಾರದಿಂದ ಬರುವ ಹಣ!

ಹೌದು, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದು ಖಾತೆಗೆ ಹಣ ಸರ್ಕಾರದಿಂದ ಬಂದು ಸೇರಬೇಕು ಅಂದ್ರೆ ಅದಕ್ಕೆ ಸಾಕಷ್ಟು ಪ್ರಕ್ರಿಯೆಗಳು ಕೂಡ ಇರುತ್ತದೆ. ಹಣ ಬಿಡುಗಡೆ ಮಾಡಲಾಗುತ್ತಿದ್ದು ಅದು ಬ್ಯಾಂಕ್ (Bank) ಗೆ ಬಂದು ತಲುಪಿ ಬ್ಯಾಂಕನಿಂದ ಗ್ರಾಹಕರ ಕೈ ಸೇರಬೇಕು. ಹಾಗಾಗಿ ಈ ಸುಧೀರ್ಘವಾದ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗುತ್ತಿದೆ, ಆ ಕಾರಣದಿಂದ ಹಲವಾರು ಖಾತೆಗೆ ಇನ್ನೂ ಹಣ ಬಂದಿಲ್ಲ.

ಇನ್ನು ಕೆಲವು ಪ್ರಮುಖ ವಿಚಾರಗಳು ಅಂದರೆ ಸಾಕಷ್ಟು ಜನ ತಮ್ಮ ಬ್ಯಾಂಕ್ ಅಕೌಂಟ್ (Bank Account) ಈ-ಕೆ ವೈ ಸಿ (E-KYC) ಯನ್ನು ಈಗಲೂ ಕೂಡ ಮಾಡಿಸಿಕೊಂಡಿಲ್ಲ, ಹೀಗೆ ಇರುವ ಖಾತೆ ಆಕ್ಟಿವ್ (Active) ಆಗಿರುವುದಿಲ್ಲ. ಆದ್ದರಿಂದ ಇಂತಹ ಖಾತೆಗೆ ಹಣ ಬರಲು ಸಾಧ್ಯವಿಲ್ಲ.

ಇನ್ನು 40,000 ಗೃಹಿಣಿಯರ ಆಧಾರ್ ಕಾರ್ಡ್ (Aadhaar card) ಹೆಸರು ಹಾಗೂ ರೇಷನ್ ಕಾರ್ಡ್ (Ration Card) ಮತ್ತು ಬ್ಯಾಂಕ್ ಹೆಸರುಗಳು ಕೂಡ ವ್ಯತ್ಯಾಸ ಹೊಂದಿವೆ. ಈ ಎಲ್ಲಾ ಹೆಸರುಗಳು ಹೊಂದಾಣಿಕೆ ಆದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಹಲವರಿಗೆ ಈ ಹೆಸರುಗಳು ಹೊಂದಾಣಿಕೆ ಆಗದೆ ಇರುವ ಕಾರಣ ಅದನ್ನು ಕೂಡ ಸರಿಪಡಿಸಿಕೊಂಡು ಹಣ ಅವರ ಖಾತೆಗೆ ಜಮಾ ಮಾಡಬೇಕಾಗಿದೆ.

ಹಳೆಯ ರೇಷನ್ ಕಾರ್ಡ್‌ಗಳ ಬಗ್ಗೆ ಬಿಗ್ ಅಪ್ಡೇಟ್, 2020ಕ್ಕೂ ಮೊದಲು ಕಾರ್ಡ್ ಮಾಡಿಸಿರುವವರಿಗೆ ಹೊಸ ರೂಲ್ಸ್

ಇನ್ನು ಸಾಕಷ್ಟು ಜನರು ಹಣ ಬಂದಿಲ್ಲ ಅಂತ ತಲೆಬಿಸಿ ಮಾಡಿಕೊಂಡಿದ್ದಾರೆ. ತಮ್ಮ ಎಲ್ಲಾ ದಾಖಲೆಗಳು ಸರಿಯಾಗಿ ಇವೆ ಅನ್ನೋದು ಗೃಹಿಣಿಯರ ನಂಬಿಕೆ. ಆದರೆ ನಿಮಗೂ ಗೊತ್ತಿಲ್ಲದೆ ಕೆಲವು ಬದಲಾವಣೆಗಳು ಆಗಬೇಕಾಗಿರಬಹುದು ಅಥವಾ ನಿಮ್ಮ ದಾಖಲೆಗಳಲ್ಲಿ ಯಾವುದಾದರು ತಪ್ಪು ಇರಬಹುದು

Gruha Lakshmi Yojaneಇದಕ್ಕಾಗಿ ಇನ್ನು ಮುಂದೆ ನೀವು ಚಿಂತೆ ಮಾಡಬೇಕಾಗಿಲ್ಲ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಕೂಡ, ಪ್ರತಿ ತಾಲೂಕುಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿ ಡಿ ಪಿ ಓ (CDOP) ಅಧಿಕಾರಿಗಳ ಬಳಿ ಪರಿಶೀಲಿಸಿಕೊಳ್ಳಬಹುದು.

ಇಂತಹ ಅಧಿಕಾರಿಗಳಿಗೆ ನೀವು ನಿಮ್ಮ ದಾಖಲೆಗಳನ್ನು ತೋರಿಸಿದರೆ ಅದರಲ್ಲಿ ಯಾವುದಾದರೂ ಸಮಸ್ಯೆ ಇದೆಯೋ ಇಲ್ಲವೋ ಅಥವಾ ಹೇಗೆ ಸರಿಪಡಿಸಿಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಾರೆ. ಜೊತೆಗೆ ಹೇಗೆ ಸರಿಪಡಿಸಿಕೊಳ್ಳುವುದು ಎನ್ನುವುದರ ಬಗ್ಗೆ ಸಲಹೆಯನ್ನು ಕೂಡ ಕೊಡುತ್ತಾರೆ.

ಇಂತವರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಸಿಗಲ್ಲ, ದುಡ್ಡು ಸಿಗಲ್ಲ! ಸರ್ಕಾರ ಖಡಕ್ ವಾರ್ನಿಗ್

ಸರ್ಕಾರ ಇಷ್ಟೆಲ್ಲಾ ವ್ಯವಸ್ಥೆ ಕಲ್ಪಿಸಿ ಕೊಡುತ್ತಿದೆ, ಹಾಗಾಗಿ ಯಾರಿಗೆ ಹಣ ಬಂದಿಲ್ಲವೋ ಅವರು ಹೆಚ್ಚು ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ ಸದ್ಯದಲ್ಲಿಯೇ ನಿಮ್ಮ ಖಾತೆಗೂ ಕೂಡ ಎಲ್ಲಾ ದಾಖಲೆಗಳು ಸರಿ ಇದ್ದರೆ ಹಣ ಬಂದು ಸೇರುತ್ತದೆ.

ಮೊದಲ ಕಂತು ಈಗಾಗಲೇ ಬಿಡುಗಡೆಯಾಗಿದೆ. ಎರಡನೇ ಕಂತು (Second instalment) ಕೂಡ ಬಿಡುಗಡೆ ಆಗಲಿದ್ದು ಯಾರಿಗೆ ಮೊದಲನೇ ಕಂತಿನ ಹಣ ಬಂದಿಲ್ಲವೋ ಅವರ ಖಾತೆಗೆ ಎರಡು ಕಂತಿನ ತಲಾ ಎರಡು ಸಾವಿರ ರೂಪಾಯಿಗಳಂತೆ ನಾಲ್ಕು ಸಾವಿರ ರೂಪಾಯಿಗಳನ್ನು ಜಮಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.

ಈ ತಿಂಗಳ ಕೊನೆ ಅಂದರೆ ಸೆಪ್ಟೆಂಬರ್ 30ರ ಒಳಗೆ ಫಲಾನುಭವಿಗಳ ಖಾತೆಗೆ ಹಣ ಬಂದು ಸೇರುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.

ಫ್ರೀ ಕರೆಂಟ್! ಜೀರೋ ಬಿಲ್ ಬಂತು ಅಂತ ಬೀಗಬೇಡಿ, ಈ ತಪ್ಪು ಮಾಡಿದ್ರೆ ಕಟ್ಟಬೇಕು ಪೂರ್ಣ ಬಿಲ್

Those who have Not Received Gruha Lakshmi money should immediately go to this office

Related Stories