ಹಳೆಯ ರೇಷನ್ ಕಾರ್ಡ್‌ಗಳ ಬಗ್ಗೆ ಬಿಗ್ ಅಪ್ಡೇಟ್, 2020ಕ್ಕೂ ಮೊದಲು ಕಾರ್ಡ್ ಮಾಡಿಸಿರುವವರಿಗೆ ಹೊಸ ರೂಲ್ಸ್
ಯಾರ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇಲ್ಲವೋ ಅಂತವರಿಗೆ ಸರ್ಕಾರದಿಂದ ಬಿಡುಗಡೆಯಾಗುವ 2000 ರೂ. ಇರಬಹುದು ಅಥವಾ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಇರಬಹುದು ಇದ್ಯಾವುದೂ ಸಿಗುವುದಿಲ್ಲ.
ರೇಷನ್ ಕಾರ್ಡ್ (ration card) ಮಹತ್ವ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುತ್ತೆ ಯಾಕೆಂದರೆ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಅಂದ್ರೆ ಬಿಪಿಎಲ್ ಕಾರ್ಡ್(BPL card) ಹೊಂದಿರುವುದು ಕಡ್ಡಾಯವಾಗಿದೆ.
ಯಾರ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇಲ್ಲವೋ ಅಂತವರಿಗೆ ಸರ್ಕಾರದಿಂದ ಬಿಡುಗಡೆಯಾಗುವ 2000 ರೂ. ಇರಬಹುದು ಅಥವಾ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಇರಬಹುದು ಇದ್ಯಾವುದೂ ಸಿಗುವುದಿಲ್ಲ.
ಫ್ರೀ ಕರೆಂಟ್! ಜೀರೋ ಬಿಲ್ ಬಂತು ಅಂತ ಬೀಗಬೇಡಿ, ಈ ತಪ್ಪು ಮಾಡಿದ್ರೆ ಕಟ್ಟಬೇಕು ಪೂರ್ಣ ಬಿಲ್
ಈ ತಿದ್ದುಪಡಿಗಳು ಅನಿವಾರ್ಯ
ರೇಷನ್ ಕಾರ್ಡ್ ತಿದ್ದುಪಡಿಗೆ (ration card correction) ಸರ್ಕಾರ 14 ದಿನಗಳ ಕಾಲ ಅವಕಾಶ ಮಾಡಿಕೊಟ್ಟಿತ್ತು. ಯಾಕೆಂದರೆ ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಅಥವಾ ಅನ್ನ ಭಾಗ್ಯ ಯೋಜನೆಯ ಹಣ ಖಾತೆಗೆ ಬರಬೇಕು ಅಂದ್ರೆ ರೇಷನ್ ಕಾರ್ಡ್ ನಲ್ಲಿ ಎಲ್ಲಾ ವಿವರಗಳು ಸರಿಯಾಗಿ ಇರಬೇಕು
ಜೊತೆಗೆ ರೇಷನ್ ಕಾರ್ಡ್ ಅಪ್ಡೇಟ್ (Ration Card Update) ಕೂಡ ಆಗಿರಬೇಕು. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಮಾಡಿಸಿ ಬಹಳಷು ದಿನಗಳಾಗಿದ್ದರೆ ಅದರಲ್ಲಿ ಅಗತ್ಯವಿರುವ ತಿದ್ದುಪಡಿ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹಣ ಸಾಕಷ್ಟು ಜನರ ಖಾತೆಗೆ ಬಂದಿಲ್ಲ ಇದಕ್ಕೆ ಮತ್ತೊಂದು ಮುಖ್ಯವಾಗಿರುವ ಕಾರಣ ಅಂದ್ರೆ ರೇಷನ್ ಕಾರ್ಡ್ ಅಪ್ಡೇಟ್ ಆಗದೆ ಇರುವುದು ಕೂಡ ಹೌದು. ಸರ್ಕಾರ ಜಾರಿಗೆ ತಂದಿರುವ ಯೋಜನೆಗೆ ರೇಷನ್ ಕಾರ್ಡ್ ಅಗತ್ಯ ಎಂಬುದನ್ನ ಅರಿತ ಜನ ಹೊಸ ರೇಷನ್ ಕಾರ್ಡ್ ಮಾಡಿಸಲು ತರಾತುರಿಯಲ್ಲಿ ಇದ್ದಾರೆ.
2ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಸಿದ್ಧತೆ! ಇನ್ನೂ ಹಣ ಸಿಗದ ಗೃಹಿಣಿಯರಿಗೆ ವಿಶೇಷ ಸೂಚನೆ
ಆದರೆ ಸರ್ಕಾರ ಮಾತ್ರ ಚುನಾವಣೆಗೂ (election) ಮೊದಲೇ ಅರ್ಜಿ ಸಲ್ಲಿಸಿರುವ ಎರಡು ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಅವುಗಳನ್ನು ಮೊದಲು ಬಿಡುಗಡೆ ಮಾಡಲಾಗುತ್ತದೆ. ನಂತರವಷ್ಟೇ ಹೊಸ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ಈ ನಡುವೆ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ಹಲವರು ಅದರ ಸರಿಯಾದ ಬಳಕೆ ಕೂಡ ಮಾಡಿಕೊಳ್ಳುತ್ತಿಲ್ಲ.
ಬಿಪಿಎಲ್ ರೇಷನ್ ಕಾರ್ಡ್ ಇರುವುದು ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ಮಾತ್ರ ಆದರೆ ಇಂದು ಎಲ್ಲಾ ಅನುಕೂಲತೆಗಳು ಇರುವವರು ಕೂಡ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಪ್ರತಿ ತಿಂಗಳು ರೇಷನ್ ಪಡೆಯುವ ಎಲ್ಲರಿಗೂ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ಆದೇಶ
ಇನ್ನು ಅವರು ರೇಷನ್ ಕಾರ್ಡ್ ಬಳಸುತ್ತಿಲ್ಲ. ಆದರೆ ಅವರ ಹೆಸರಿನಲ್ಲಿ ಮಾತ್ರ ಕಾರ್ಡ್ ನೀಡಲಾಗಿದೆ, ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸರ್ಕಾರ ಹೇಳಿರುವ ಆರು ಮಾನದಂಡಗಳ ಒಳಗೆ ಇಲ್ಲದೆ ಇರುವ ರೇಷನ್ ಕಾರ್ಡ್ ಅನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ 5 ಲಕ್ಷದಷ್ಟು ರೇಷನ್ ಕಾರ್ಡ್ ರದ್ದು ಕೂಡ ಮಾಡಲಾಗಿದೆ.
ಹಳೆಯ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡದೆ ಇದ್ರೆ ರೇಷನ್ ಸಿಗುವುದಿಲ್ಲ
ಇನ್ನು ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುತ್ತಾರೋ ಅಂತವರು ಯಾವುದಾದರೂ ಅಗತ್ಯವಿರುವ ಬದಲಾವಣೆಗಳು ಇದ್ದರೆ ಅದನ್ನ ತಕ್ಷಣವೇ ಮಾಡಿಕೊಳ್ಳಬೇಕು ಎಂದು ಕೂಡ ಸರ್ಕಾರ ತಿಳಿಸಿದೆ.
ಆಧಾರ್ ಕಾರ್ಡ್ (Aadhaar card) ಅನ್ನು ಹೇಗೆ ಅಪ್ಡೇಟ್ ಮಾಡಿಕೊಳ್ಳುತ್ತೇವೆಯೋ ಅದೇ ರೀತಿ ರೇಷನ್ ಕಾರ್ಡ್ ಕೂಡ ನವೀಕರಣಗೊಳ್ಳಬೇಕು. ರೇಷನ್ ಕಾರ್ಡ್ ನಲ್ಲಿ ಮೃತಪಟ್ಟವರ ಹೆಸರು ಕೂಡ ಇದ್ದರೆ ಅದನ್ನು ತಕ್ಷಣವೇ ತೆಗೆದು ಹಾಕಬೇಕು. ಅದೇ ರೀತಿ ಹೊಸ ಹೆಸರುಗಳ ಸೇರ್ಪಡೆ ಕೂಡ ಮಾಡಿಸಬಹುದು.
ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಇಲ್ಲ ಅವಕಾಶ! ಹೊಸ ಆದೇಶ ಹೊರಡಿಸಿದ ಸರ್ಕಾರ
ಇಷ್ಟು ಮಾತ್ರವಲ್ಲದೆ ರೇಷನ್ ಕಾರ್ಡ್ ನಲ್ಲಿ ಹಲವರ ಹೆಸರುಗಳಲ್ಲಿ ಸಮಸ್ಯೆ ಕೂಡ ಇರುತ್ತೆ, ಅಂತಹ ಅಕ್ಷರಗಳು ತಪ್ಪಾಗಿದ್ದರೆ ಅದನ್ನು ಕೂಡ ಸರಿಪಡಿಸಿಕೊಳ್ಳಬೇಕು. ಇನ್ನು ರೇಷನ್ ಕಾರ್ಡ್ ನ ವಿಳಾಸ ಬದಲಾಗಿದ್ದರೆ, ಅಂದರೆ ನೀವು ಇರುವ ವಿಳಾಸ ಬದಲಾಗಿದ್ದರೆ ರೇಷನ್ ಕಾರ್ಡ್ ನಲ್ಲಿಯೂ ಕೂಡ ಹಳೆಯ ವಿಳಾಸದಿಂದ ಹೊಸ ವಿಳಾಸಕ್ಕೆ ತಿದ್ದುಪಡಿ ಮಾಡಿಕೊಳ್ಳಬೇಕು. ಇಷ್ಟೇ ಅಲ್ಲದೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವುದು ಕೂಡ ಕಡ್ಡಾಯವಾಗಿದೆ.
ಯಾರು ಸಾಕಷ್ಟು ದಿನಗಳ ಹಿಂದೆಯೇ ರೇಷನ್ ಕಾರ್ಡ್ ಪಡೆದುಕೊಂಡಿರುತ್ತಾರೋ ಅಂತವರು ತಮ್ಮ ರೇಷನ್ ಕಾರ್ಡ್ ಅನ್ನು ಅಪ್ಡೇಟ್ (update) ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ
ಇಲ್ಲವಾದರೆ ಸರ್ಕಾರದಿಂದ ಘೋಷಿತವಾಗುವ ಯಾವ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಮುಖ್ಯವಾಗಿ ಮನೆಯಲ್ಲಿ ಒಬ್ಬ ಸದಸ್ಯ ಮೃತಪಟ್ಟು ತುಂಬಾ ವರ್ಷದ ನಂತರವೂ ಅವರ ಹೆಸರನ್ನು ತೆಗೆದು ಹಾಕದೆ ಅಂಥವರ ಹೆಸರಿನಲ್ಲಿ ರೇಷನ್
ಪಡೆದುಕೊಳ್ಳುತ್ತಿರುವವರ ಸಂಖ್ಯೆ ಕೂಡ ಜಾಸ್ತಿ ಇದ್ದು ಇದು ಸರ್ಕಾರದ ಗಮನಕ್ಕೆ ಬಂದರೆ ಭಾರಿ ಪ್ರಮಾಣದ ದಂಡ ಕೂಡ ವಿಧಿಸಬಹುದು.
ಅನ್ನಭಾಗ್ಯ ಯೋಜನೆಯ ಅಕ್ಕಿ ಬೇಕೋ ಬದಲಿಗೆ ಹಣ ಬೇಕೋ? ನೀವೇ ಡಿಸೈಡ್ ಮಾಡಿ ಎಂದ ಸರ್ಕಾರ
ಹಾಗಾಗಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವವರು ಕೂಡ ಈ ಎಲ್ಲ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು, ಹಾಗೆ ಹಳೆಯ ರೇಷನ್ ಕಾರ್ಡ್ ಹೊಂದಿರುವವರು ತಮ್ಮ ರೇಷನ್ ಕಾರ್ಡ್ ನಲ್ಲಿ ಅಗತ್ಯವಿರುವ ಎಲ್ಲಾ ತಿದ್ದುಪಡಿಗಳನ್ನು ಮಾಡಿಕೊಳ್ಳಬೇಕು.
Karnataka Government Big update on old ration cards about Corrections