ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಇಲ್ಲ ಅವಕಾಶ! ಹೊಸ ಆದೇಶ ಹೊರಡಿಸಿದ ಸರ್ಕಾರ

ಸರ್ಕಾರ 14 ದಿನಗಳ ವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ (ration Card correction) ಅವಕಾಶ ಮಾಡಿಕೊಟ್ಟಿತ್ತು, ಆದರೆ ಇದು ಇನ್ನೂ ಕೂಡ ಹಲವರು ರೇಷನ್ ಕಾರ್ಡ್ ನಲ್ಲಿ ಅಗತ್ಯವಿರುವ ತಿದ್ದುಪಡಿ ಮಾಡಿಕೊಂಡಿಲ್ಲ.

- - - - - - - - - - - - - Story - - - - - - - - - - - - -

ದೇಶದಲ್ಲಿ ಇರುವ ಬಡವರಿಗಾಗಿ ರಾಜ್ಯ ಸರ್ಕಾರ (Karnataka government) ಹಾಗೂ ಕೇಂದ್ರ ಸರ್ಕಾರ (Central Government) ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತವೆ.

ಅದರಲ್ಲೂ ಇತ್ತೀಚಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು (Five guarantee schemes) ನೀವು ಪಡೆದುಕೊಳ್ಳಬೇಕು ಎಂದಿದ್ದರೆ ಅದಕ್ಕೆ ನಿಮ್ಮ ಬಳಿ ಬಿಪಿಎಲ್ ಕಾರ್ಡ್ (BPL Card) ಇರುವುದು ಕಡ್ಡಾಯ.

ಅನ್ನಭಾಗ್ಯ ಯೋಜನೆಯ (Annabhagya Scheme) ಅಡಿಯಲ್ಲಿ ಉಚಿತ ಅಕ್ಕಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಉಚಿತ 2000 ರೂಪಾಯಿಗಳನ್ನು ಪಡೆದುಕೊಳ್ಳಲು ಬಿಪಿಎಲ್ ರೇಷನ್ ಕಾರ್ಡ್(BPL Ration card) ಹಾಗೂ ಅಂತ್ಯೋದಯ ಕಾರ್ಡ್ (Antyodaya card) ಹೊಂದಿರುವವರು ಅರ್ಹರಾಗಿರುತ್ತಾರೆ.

BPL Ration Card

ಅನ್ನಭಾಗ್ಯ ಯೋಜನೆಯ ಅಕ್ಕಿ ಬೇಕೋ ಬದಲಿಗೆ ಹಣ ಬೇಕೋ? ನೀವೇ ಡಿಸೈಡ್ ಮಾಡಿ ಎಂದ ಸರ್ಕಾರ

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ಸರ್ಕಾರ

ಇನ್ನು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಅಂದ್ರೆ ರೇಷನ್ ಕಾರ್ಡ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಮೊದಲನೇದಾಗಿ ಗೃಹಲಕ್ಷ್ಮಿ ಯೋಜನೆಗೆ (Gruha lakshmi Scheme) ಮಹಿಳೆಯ ಹೆಸರನ್ನು ಮೊದಲ ಸದಸ್ಯ ಹೆಸರಾಗಿ ಸೇರಿಸಬೇಕಿತ್ತು.

ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿತು. ಸೆಪ್ಟೆಂಬರ್ ಒಂದರಿಂದ 14ನೇ ತಾರೀಖಿನ ವರೆಗೆ ನೀವು ರೇಷನ್ ಕಾರ್ಡ್ ನಲ್ಲಿ ಯಜಮಾನಿಯ ಹೆಸರು ಬದಲಾವಣೆ ಮಾಡುವುದರ ಜೊತೆಗೆ, ಮೃತ ಸದಸ್ಯರ ಹೆಸರನ್ನು ತೆಗೆದುಹಾಕುವುದು, ಹೊಸ ಸದಸ್ಯರ ಹೆಸರನ್ನು ಸೇರಿಸುವುದು, ವಿಳಾಸ ಬದಲಾವಣೆ, ಹೆಸರುಗಳಲ್ಲಿ ಇರುವ ತಪ್ಪುಗಳನ್ನು ಸರಿಪಡಿಸುವುದು ಈ ಎಲ್ಲಾ ತಿದ್ದುಪಡಿಗಳನ್ನು (Ration Card Correction) ಕೂಡ ಮಾಡಿಕೊಳ್ಳಬಹುದಿತ್ತು.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ದಿನಾಂಕ ಘೋಷಣೆ; ಆದ್ರೆ ಇಂತಹವರಿಗೆ ಸಿಗೋಲ್ಲ ಉಚಿತ ಹಣ

ಎಲ್ಲಿ ಪಡಿತರ ತೆಗೆದುಕೊಳ್ಳುತ್ತಿರೋ ಅದೇ ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಅಥವಾ ಥಂಬ್ ಇಂಪ್ರೆಶನ್ (Biometric or thumb impression) ಮೂಲಕ ತಿದ್ದುಪಡಿ ಮಾಡಿ ರೇಷನ್ ಕಾರ್ಡ್ ಅಪ್ಡೇಟ್ ಮಾಡಲಾಗುತ್ತಿತ್ತು.

BPL Ration Cardಕಾರ್ಡ್ ತಿದ್ದುಪಡಿ ಗಡುವು ಮುಗಿದಿದೆ

ಸರ್ಕಾರ 14 ದಿನಗಳ ವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ (ration Card correction) ಅವಕಾಶ ಮಾಡಿಕೊಟ್ಟಿತ್ತು, ಆದರೆ ಇದು ಇನ್ನೂ ಕೂಡ ಹಲವರು ರೇಷನ್ ಕಾರ್ಡ್ ನಲ್ಲಿ ಅಗತ್ಯವಿರುವ ತಿದ್ದುಪಡಿ ಮಾಡಿಕೊಂಡಿಲ್ಲ.

ಆದರೆ ಸದ್ಯಕ್ಕಂತೂ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಇದುವರೆಗೆ ರೇಷನ್ ಕಾರ್ಡ್ ನಲ್ಲಿ ಅಗತ್ಯವಿದ್ದ ತಿದ್ದುಪಡಿಗಳನ್ನು ಯಾರು ಮಾಡಿಸಿಕೊಂಡಿಲ್ಲವೋ ಅಂತವರಿಗೆ ರೇಷನ್ ಕಾರ್ಡ್ ಆಧಾರದ ಮೇಲೆ ಸಿಗಬಹುದಾದ ಸರ್ಕಾರದ ಯಾವುದೇ ಯೋಜನೆಗಳು ಕೂಡ ಸಿಗಲು ಸಾಧ್ಯವಿಲ್ಲ.

ಗೃಹಿಣಿಯರೇ, ಈ ತಿಂಗಳು ಕಷ್ಟಪಟ್ರೆ ಮುಂದಿನ ತಿಂಗಳಿನಿಂದ ಕುಳಿತಲ್ಲಿಯೇ ಸಿಗುತ್ತೆ 2,000 ರೂಪಾಯಿ! ನಿರ್ಲಕ್ಷ್ಯ ಮಾಡಬೇಡಿ

ಸರ್ಕಾರ ಮತ್ತೊಮ್ಮೆ ಅವಕಾಶ ಕೊಡಲಿದೆಯೇ?

ಮತ್ತೊಮ್ಮೆ ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲೂಬಹುದು ಅಥವಾ ಕೊಡದೆಯೂ ಇರಬಹುದು. ಯಾಕೆಂದರೆ ಈಗಾಗಲೇ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಎರಡು ಲಕ್ಷ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಸದ್ಯದಲ್ಲಿಯೇ ಹೊಸ ಪಡಿತರ ಚೀಟಿ ಕೂಡ ಫಲಾನುಭವಿಗಳ ಕೈ ಸೇರಬಹುದು. ಹಾಗಾಗಿ ಹೊಸ ಪಡಿತರ ಚೀಟಿ ವಿತರಣೆಯಲ್ಲಿ ಸರ್ಕಾರ ನಿರತವಾಗಿರುವುದರಿಂದ ಮತ್ತೆ ಹಳೆಯ ಪಡಿತರ ಚೀಟಿಯಲ್ಲಿ ಬದಲಾವಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಕಡಿಮೆ. ಆದರೂ ಪಡಿತರ ಚೀಟಿ ತಿದ್ದುಪಡಿ ವಿಚಾರವಾಗಿ ಸರ್ಕಾರದ ನಿಲುವು ಏನು ಎಂಬುದು ಸದ್ಯದಲ್ಲೇ ಪ್ರಕಟಣೆಗೊಳ್ಳಲಿದೆ.

Update on Ration Card Correction for Karnataka Government Schemes

Related Stories