ಗೃಹಿಣಿಯರೇ, ಈ ತಿಂಗಳು ಕಷ್ಟಪಟ್ರೆ ಮುಂದಿನ ತಿಂಗಳಿನಿಂದ ಕುಳಿತಲ್ಲಿಯೇ ಸಿಗುತ್ತೆ 2,000 ರೂಪಾಯಿ! ನಿರ್ಲಕ್ಷ್ಯ ಮಾಡಬೇಡಿ
ಬಹುತೇಕ ಗೃಹಲಕ್ಷ್ಮಿಯರು ಈ ಯೋಜನೆಗೆ (Gruha Lakshmi Scheme) ಅರ್ಜಿ ಹಾಕುವಾಗ ಆಧಾರ್ ಕಾರ್ಡ್ (Aadhaar Card) ಹಾಗೂ ರೇಷನ್ ಕಾರ್ಡ್ (Ration Card) ಪ್ರತಿಯನ್ನು ನೀಡಿರುತ್ತಾರೆ.
ತನ್ನ ಖಾತೆಗೆ 2,000ರೂ. ಜಮಾ ಆಗಿಲ್ಲ ಎನ್ನುವ ಮಹಿಳೆಯರು ಈ ಲೇಖನ ಓದಲೇಬೇಕು. ನಿಮ್ಮ ಖಾತೆಗೆ ಹಣ ಜಮಾ ಆಗದೇ ಇರಲು ನಿಮ್ಮ ನಿರ್ಲಕ್ಶವೂ ಕಾರಣವಾಗಿರಬಹುದು. ಹಾಗಾದ್ರೆ ನಿಮ್ಮಿಂದ ಆಗುತ್ತಿರುವ ತಪ್ಪುಗಳೇನು? ನಿಮ್ಮ ಖಾತೆಗೆ ಇನ್ನೂ ಯಾಕೆ ಗೃಹಲಕ್ಷ್ಮಿ (Gruha lakshmi Scheme) ಹಣ ಬಂದಿಲ್ಲ. ಇದಕ್ಕೇಲ್ಲಾ ಇಲ್ಲಿದೆ ಉತ್ತರ.
ಸಾಮಾನ್ಯವಾಗಿ ಬಹುತೇಕ ಗೃಹಲಕ್ಷ್ಮಿಯರು ಈ ಯೋಜನೆಗೆ (Gruha Lakshmi Scheme) ಅರ್ಜಿ ಹಾಕುವಾಗ ಆಧಾರ್ ಕಾರ್ಡ್ (Aadhaar Card) ಹಾಗೂ ರೇಷನ್ ಕಾರ್ಡ್ (Ration Card) ಪ್ರತಿಯನ್ನು ನೀಡಿರುತ್ತಾರೆ.
ಇದರ ಜೊತೆಗೆ ಕೆಲವು ಮಹಿಳೆಯರು ಬ್ಯಾಂಕ್ ಖಾತೆ (Bank Account Details) ಮಾಹಿತಿಯನ್ನು ಕೂಡ ನೀಡಿರುತ್ತಾರೆ. ಹೀಗೆ ನೀವು ನೀಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ನಿಮಗೆ ಅರ್ಜಿ ಸ್ವೀಕೃತಿಯ ಸಂದೇಶ ಕೂಡ ಬಂದಿದ್ದರೆ ಸ್ವಲ್ಪ ವಿಳಂಬವಾದರೂ ಸರಿ ನಿಮ್ಮ ಖಾತೆಗೆ ಹಣ ಬಂದೇ ಬರುತ್ತದೆ, ಚಿಂತಿಸುವ ಅಗತ್ಯವಿಲ್ಲ.
ಅರ್ಜಿ ಸಲ್ಲಿಸಿದ ಮೇಲೆ ಹೊಸ ಬ್ಯಾಂಕ್ ಖಾತೆ ತೆರೆದರೆ ಹಣ ಬರುತ್ತಾ? ಗೃಹಿಣಿಯರೇ ಈ ಮಿಸ್ಟೇಕ್ ಮಾಡ್ಬೇಡಿ
ಇನ್ನು ಈ ಎಲ್ಲಾ ದಾಖಲೆಗಳು ಸರಿಯಾಗಿದೆ, ಆದರೂ ಹಣ ಬರುತ್ತಿಲ್ಲ ಎಂದು ಯೋಚಿಸುತ್ತಿರುವ ಮಹಿಳೆಯರು ಈ ಮುಖ್ಯವಾಗಿರುವ ಕೆಲಸವನ್ನು ಮಾಡಲೇಬೇಕು. ಗೃಹಲಕ್ಷ್ಮಿ ಯೋಜನೆಯ (Gruha Lakshmi Yojane) ರೇಷನ್ ಕಾರ್ಡ್ ತಿದ್ದುಪಡಿ, ಆಧಾರ್ ಕಾರ್ಡ್ ಸೇಡಿಂಗ್ (Aadhaar card Seeding) ಮಾಡಿಕೊಂಡಿರುವ ಬಗ್ಗೆ ಮಾಹಿತಿ, ಖಾತೆಗೆ ಹಣ ಜಮಾ (DBT) ಆಗದೇ ಇರುವುದಕ್ಕೆ ಕಾರಣ ಎಲ್ಲವನ್ನು ನೀವು ಆನ್ಲೈನ್ ಮೂಲಕವೇ ಚೆಕ್ (Online Checking) ಮಾಡಿಕೊಳ್ಳಬಹುದು.
ಇಷ್ಟಾಗಿಯೂ ಖಾತೆಯಲ್ಲಿ ಸಮಸ್ಯೆ ಇದೆ ಎಂಬುದು ತಿಳಿದು ಬಂದರೆ, ನೀವು ತಕ್ಷಣವೇ ಬ್ಯಾಂಕ್ ಗೆ ಹೋಗಿ ಎನ್ ಪಿ ಸಿ ಐ (NPCI) ಮಾಡಿಸಿಕೊಳ್ಳಬೇಕು.
ಅದೇ ರೀತಿ ಅಗತ್ಯವಿದ್ದರೆ ನಿಮ್ಮ ಸೇವಾ ಕೇಂದ್ರಗಳಿಗೆ ಹೋಗಿ ಮತ್ತೊಮ್ಮೆ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿಕೊಳ್ಳಿ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾದಾಗ ದಿನಕ್ಕೆ ಲಕ್ಷಾಂತರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.
ಫ್ರೀ ಕರೆಂಟ್! ಬಾಡಿಗೆ ಮನೆಯವರು ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಇನ್ಮುಂದೆ ಈ ದಾಖಲೆ ಕಡ್ಡಾಯ
ಇದರಿಂದಾಗಿ ಅದೆಷ್ಟೋ ಮಹಿಳೆಯರ ಅರ್ಜಿ ಸರ್ವರ್ ಸಮಸ್ಯೆಯಿಂದಾಗಿ ಸರ್ಕಾರದ ಡಾಟಾ ಲಿಸ್ಟ್ ಗೆ ಸೇರಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಈಗಲೂ ಕೂಡ ನಿಮ್ಮ ಖಾತೆಗೆ ಹಣ ಜಮಾ ಆಗದೆ ಇರಬಹುದು.
ಇನ್ನು ಕೆಲವೆಡೆ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿ ಕೂಡ ಕೊಟ್ಟಿರುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ತಕ್ಷಣವೇ ನೀವು ಅರ್ಜಿ ಸಲ್ಲಿಸಿದ ಸೇವಾ ಕೇಂದ್ರಗಳಿಗೆ ಹೋಗಿ ಮತ್ತೊಮ್ಮೆ ನಿಮ್ಮ ದಾಖಲೆಗಳನ್ನು ತೋರಿಸಿ ನೀವು ಅರ್ಜಿ ಹಾಕಿದ್ದು ಸರಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬಂದಿಲ್ಲ ಅಂದ್ರೆ ತಪ್ಪದೇ ಈ 3 ಕೆಲಸ ಮಾಡಿ
ಒಂದು ವೇಳೆ ಈ ಕೆಲಸ ಆಗದೆ ಇದ್ದಲ್ಲಿ ನೀವು ಮತ್ತೆ ನ್ಯಾಯಬೆಲೆ ಅಂಗಡಿಗೆ ಹೋಗಿ ರೇಷನ್ ಕಾರ್ಡ್ ತಿದ್ದುಪಡಿ (Ration Card Corrections) ಆಗಿದೆಯೋ ಇಲ್ಲವೋ ಎಂಬ ಅಪ್ಡೇಟ್ ತೆಗೆದುಕೊಳ್ಳಿ.
ಆನ್ಲೈನ್ ಮೂಲಕ ಎಲ್ಲಾ ಮಾಹಿತಿಗಳು ಕೂಡ ಲಭ್ಯವಿದ್ದರೂ ಸಾಕಷ್ಟು ಬಾರಿ ಸರ್ವರ್ ಸಮಸ್ಯೆಯಿಂದಾಗಿ ಎಲ್ಲಾ ವೆಬ್ಸೈಟ್ಗಳು ಕೂಡ ಓಪನ್ ಆಗುವುದಿಲ್ಲ. ಹಾಗಾಗಿ 2000ರೂ. ನಿಮ್ಮ ಖಾತೆಗೆ ಬರಬೇಕು ಅಂದ್ರೆ ನೀವು ನಿಮ್ಮ ಹತ್ತಿರದ ಬ್ಯಾಂಕ್ಗಳು ಹಾಗೂ ಆಧಾರ್ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಕೇಂದ್ರಗಳಿಗೆ ಹೋಗಿ ಎಲ್ಲಾ ದಾಖಲೆಗಳು ಸರಿಯಾಗಿ ಇದೆಯೋ ಇಲ್ಲವೋ ಎಂಬ ಅಪ್ಡೇಟ್ ತೆಗೆದುಕೊಳ್ಳಿ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಒಂದು ರೂಪಾಯಿ ಹಣವನ್ನು ಕೂಡ ಖರ್ಚು ಮಾಡಬೇಕಾಗಿಲ್ಲ, ಆದರೆ ಮುಖ್ಯವಾಗಿ ಇಲ್ಲಿ ಬೇಕಾಗಿರುವುದು ನಿಮ್ಮ ದಾಖಲೆಗಳು ಸರಿಯಾಗಿ ಇರಬೇಕು.
ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಒಟ್ಟಿಗೆ ಬರಲಿದೆ ₹4,000 ರೂಪಾಯಿ; ದಿನಾಂಕ ಫಿಕ್ಸ್!
ಇದೊಂದು ತಿಂಗಳು ನೀವು ನಿಮ್ಮ ದಾಖಲೆಗಳನ್ನು ಸರಿ ಮಾಡಿಕೊಳ್ಳಲು ಬ್ಯಾಂಕ್, ನ್ಯಾಯಬೆಲೆ ಅಂಗಡಿ, ಗ್ರಾಹಕ ಸೇವಾ ಕೇಂದ್ರಗಳಿಗೆ ಅಡ್ಡಾಡಬೇಕಾಗಬಹುದು. ಇವೆಲ್ಲವನ್ನೂ ಸರಿ ಮಾಡಿಕೊಂಡರೆ ಮುಂದಿನ ತಿಂಗಳಿನಿಂದ ಕುಳಿತಲ್ಲಿಯೇ ನಿಮ್ಮ ಖಾತೆಗೆ 2, 000ರೂ. ಗಳು ಜಮಾ ಆಗಿದೆ ಎನ್ನುವ ಮೆಸೇಜ್ ಸ್ವೀಕರಿಸುತ್ತೀರಿ.
ಬ್ಯಾಂಕ್ನಿಂದ ಹಣ ವಿಥ್ ಡ್ರಾ (Money With Draw) ಮಾಡಿಕೊಳ್ಳುವುದು ಅಷ್ಟೇ ನಿಮ್ಮ ಕೆಲಸ. ಹಾಗಾಗಿ ವಿಳಂಬ ಮಾಡದೆ, ನಿರ್ಲಕ್ಷ್ಯ ಮಾಡದೆ ತಕ್ಷಣವೇ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಳ್ಳಿ.
next month without any hassle you will Get Gruha Lakshmi Scheme 2,000 rupees
Follow us On
Google News |