ಅರ್ಜಿ ಸಲ್ಲಿಸಿದ ಮೇಲೆ ಹೊಸ ಬ್ಯಾಂಕ್ ಖಾತೆ ತೆರೆದರೆ ಹಣ ಬರುತ್ತಾ? ಗೃಹಿಣಿಯರೇ ಈ ಮಿಸ್ಟೇಕ್ ಮಾಡ್ಬೇಡಿ

ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಸಿಗುತ್ತಿಲ್ಲ ಎಲ್ಲಾ ದಾಖಲೆಗಳು ಸರಿ ಇದ್ರೂ ಕೂಡ ಪಕ್ಕದ ಮನೆಯವರಿಗೆ 2,000/- ಗಳು ಬಂದರೂ ಕೂಡ ನನಗೆ ಮಾತ್ರ ಹಣ ಬಂದಿಲ್ಲ ಅಂತ ಹಲವು ಗೃಹಿಣಿಯರ ಬೇಸರವಾಗಿದೆ

ಅಷ್ಟೇ ಅಲ್ಲದೆ ಸರ್ಕಾರದ ಈ ಯೋಜನೆಯ ಬಗ್ಗೆ ಹಲವು ಮಹಿಳೆಯರು ಖುಷಿ ವ್ಯಕ್ತಪಡಿಸಿದರೆ ಇನ್ನಷ್ಟು ಗೃಹಿಣಿಯರು ತಮಗೆ ಹಣ ಬಂದಿಲ್ಲ ಎನ್ನುವ ಕಾರಣಕ್ಕೆ ಈ ಯೋಜನೆಯ ಬೋಗಸ್ ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಕ್ಕೆ ವಿಳಂಬ ಆಗ್ತಾ ಇದೆ, ಇದಕ್ಕೆ ಕಾರಣ ಏನು ಎಂಬುದಾಗಿ ಈಗಾಗಲೇ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕಕರ್ (Lakshmi Hebbalkar) ಕೂಡ ತಿಳಿಸಿದ್ದಾರೆ

ಫ್ರೀ ಕರೆಂಟ್! ಬಾಡಿಗೆ ಮನೆಯವರು ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಇನ್ಮುಂದೆ ಈ ದಾಖಲೆ ಕಡ್ಡಾಯ

ಮೊದಲನೆಯದಾಗಿ ಕೋಟ್ಯಂತರ ಮಹಿಳೆಯರು ಅರ್ಜಿ ಹಾಕಿರುವುದರಿಂದ ಪ್ರತಿಯೊಬ್ಬರಿಗೂ ಕೂಡ ಹಣ ವರ್ಗಾವಣೆ (Money Transfer) ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಇಂತಹ ಒಂದು ಯೋಜನೆ ಜಾರಿಗೆ ಬಂದಿದ್ದು ಒಟ್ಟಾಗಿ ಕೋಟ್ಯಂತರ ಜನರ ಖಾತೆಗೆ (Bank Account) ಹಣ ಹೋಗಬೇಕಿದೆ. ಆದ್ದರಿಂದ ಈ ಪ್ರಕ್ರಿಯೆ ಸ್ವಲ್ಪ ವಿಳಂಬವಾಗುತ್ತಿದೆ.

ಇನ್ನು ಎರಡನೆಯದಾಗಿ ಹಲವು ಮಹಿಳೆಯರ ಖಾತೆ ಸರಿಯಾಗಿ ಇಲ್ಲ, ಬ್ಯಾಂಕ್ ನಲ್ಲಿ ಇರುವ ಖಾತೆ ಆಕ್ಟಿವ್ ಕೂಡ ಆಗಿಲ್ಲ (Bank Account Not Active) ಹಾಗಾಗಿ ಅವರ ಖಾತೆಗೂ ಕೂಡ ಸರ್ಕಾರ ಹಣ ಹಾಕುವುದಕ್ಕೆ ಸಮಸ್ಯೆ ಆಗುತ್ತಿದೆ.

ಇದರ ಜೊತೆಗೆ ಆರ್ ಬಿ ಐ (RBI) ಹಂತ ಹಂತವಾಗಿ ಹಣವನ್ನು ಬಿಡುಗಡೆ ಮಾಡುತ್ತದೆ, ಹಾಗಾಗಿ ಪ್ರತಿಯೊಬ್ಬರ ಖಾತೆಗೂ ಒಂದೇ ಸಲ ಹಣ ಹೋಗಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ಬಂದು ಸೇರುತ್ತೆ ಅದರ ಬಗ್ಗೆ ಚಿಂತೆ ಮಾಡಬೇಡಿ ಎಂದು ಸಚಿವೆ ತಿಳಿಸಿದ್ದಾರೆ.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬಂದಿಲ್ಲ ಅಂದ್ರೆ ತಪ್ಪದೇ ಈ 3 ಕೆಲಸ ಮಾಡಿ

ಮಿಸ್ಟೇಕ್ ಮಾಡಿದ್ರೆ ಹಣ ಬರೋದಿಲ್ಲ

Gruha Lakshmi Yojaneಕೆಲವರು ಈ ಒಂದು ಮಿಸ್ಟೇಕ್ (Mistake) ಮಾಡುತ್ತಿದ್ದಾರೆ, ಅದೇನೆಂದರೆ ಬ್ಯಾಂಕಿನಲ್ಲಿ ಈಗಾಗಲೇ ಇರುವ ಖಾತೆಯನ್ನು ಆಧಾರವಾಗಿ ಕೊಟ್ಟು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿ ಸಲ್ಲಿಕೆ ಆದ ಬಳಿಕ ಬ್ಯಾಂಕ್ ನಲ್ಲಿ ಹೊಸ ಖಾತೆಯನ್ನು (New Account) ತೆರೆದು ಅದಕ್ಕೆ ಆಧಾರ್ ಕಾರ್ಡ್ ಸೀಡಿಂಗ್ (Aadhaar card Seeding) ಮಾಡಿಕೊಂಡಿದ್ದಾರೆ.

ಈ ರೀತಿ ಮಾಡಿದರೆ ಖಂಡಿತವಾಗಿಯೂ ನಿಮ್ಮ ಹೊಸ ಖಾತೆಗೆ ಹಣ ಬರುವುದಿಲ್ಲ ಅದರ ಬದಲು ನಿಮ್ಮಲ್ಲಿ ಈಗ ಇರುವ ಖಾತೆಯನ್ನು ಒಂದು ವೇಳೆ ಆಕ್ಟಿವ್ ಆಗಿರದೆ ಇದ್ದರೆ ಬ್ಯಾಂಕ್ ಗೆ ಹೋಗಿ ಅದನ್ನು ಸಕ್ರಿಯಗೊಳಿಸಿ.

ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಒಟ್ಟಿಗೆ ಬರಲಿದೆ ₹4,000 ರೂಪಾಯಿ; ದಿನಾಂಕ ಫಿಕ್ಸ್!

ಅದರ ಬದಲು ನೀವು ಹೊಸ ಖಾತೆ ತೆರೆದರೆ ಅದಕ್ಕೆ ಗೃಹಲಕ್ಷ್ಮಿ ಹಣ ಬರುವುದಿಲ್ಲ, ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ನಲ್ಲಿ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿರುತ್ತದೆಯೋ ಅದೇ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಎಂಬುದು ನೆನಪಿರಲಿ.

ಹಾಗಾಗಿ ಗೃಹಿಣಿಯರು ಈ ಒಂದು ಮಿಸ್ಟೇಕ್ ಮಾಡಿದರೆ ಅಥವಾ ಈ ತಪ್ಪನ್ನು ಕೂಡಲೇ ಸರಿಪಡಿಸಿಕೊಳ್ಳಿ ನಿಮ್ಮ ಬ್ಯಾಂಕ್ ನಲ್ಲಿ ಇರುವ ಖಾತೆ ಸಕ್ರಿಯವಾಗಿ (Active) ಇದೆಯೋ ಇಲ್ಲವೋ ನೋಡಿಕೊಳ್ಳಿ

ಕೆಲವೊಮ್ಮೆ ನೀವು ಕನಿಷ್ಠ ಬ್ಯಾಲೆನ್ಸ್ ಅನ್ನು ಖಾತೆಯಲ್ಲಿ ಇಡದೆ ಇದ್ದಾಗಲೂ ಕೂಡ ಅದು ನಿಷ್ಕ್ರಿಯಗೊಳ್ಳುತ್ತದೆ, ಹಾಗಾಗಿ ನೀವು ಬ್ಯಾಂಕ್ ಗಳಿಗೆ ಹೋಗಿ ನಿಮ್ಮ ಖಾತೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಸರ್ಕಾರದಿಂದ ಹಬ್ಬದ ಉಡುಗೊರೆ; ಬಿಡುಗಡೆಯಾಯ್ತು ಹೊಸ ರೇಷನ್ ಕಾರ್ಡ್ ಅಪ್ರೂವಲ್ ಲಿಸ್ಟ್

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗಾಗಲೇ ತಿಳಿಸಿರುವಂತೆ ಇನ್ನು ಕೇವಲ ಒಂದು ವಾರಗಳಲ್ಲಿ 2000 ರೂ. ಪ್ರತಿಯೊಬ್ಬರ ಖಾತೆಗೂ ಬರುತ್ತದೆ, ಅದೇ ರೀತಿ ಸದ್ಯದಲ್ಲಿಯೇ ಸಪ್ಟೆಂಬರ್ (September) ತಿಂಗಳ ಎರಡನೇ ಕಂತನ್ನು ಕೂಡ ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

new bank account after applying for Gruha Lakshmi Yojana

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories