ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ದಿನಾಂಕ ಘೋಷಣೆ; ಆದ್ರೆ ಇಂತಹವರಿಗೆ ಸಿಗೋಲ್ಲ ಉಚಿತ ಹಣ
ಉಚಿತ ಅಕ್ಕಿ (Free Rice) ಅಥವಾ ಹಣ ಎನ್ನುವುದು ಈಗ ಜನರೇ ನಿರ್ಧಾರ ಮಾಡಬೇಕಾಗಿದೆ ಒಂದು ವೇಳೆ ಹಣ ಕೊಡುವುದನ್ನೇ ಮುಂದುವರೆಸಿ ಎಂದರೆ ಅಕ್ಕಿಯ ಬದಲು ಪ್ರತಿ ತಿಂಗಳು 34 ರೂಪಾಯಿಗಳಂತೆ ಹಣ ಕೊಡುವುದನ್ನು ಸರ್ಕಾರ ಮುಂದುವರೆಸಬಹುದು.
ಅನ್ನಭಾಗ್ಯ ಯೋಜನೆ (Annabhagya Yojana) ಯ ಅಡಿಯಲ್ಲಿ ಅಕ್ಕಿಯ ಬದಲು ಸರ್ಕಾರ ಫಲಾನುಭವಿಗಳಿಗೆ ಹಣವನ್ನು ನೇರವಾಗಿ ಅವರ ಖಾತೆಗೆ (Bank Account) ವರ್ಗಾವಣೆ (DBT) ಮಾಡುತ್ತಿದೆ. ಜುಲೈ ತಿಂಗಳಿನಿಂದ ಆರಂಭವಾದ ಡಿ ಬಿ ಟಿ ಈಗಲೂ ಕೂಡ ಮುಂದುವರೆದಿದೆ.
ಸಿಗುತ್ತಿಲ್ಲ ಹೆಚ್ಚುವರಿ ಅಕ್ಕಿ
ಕರ್ನಾಟಕ ಸರ್ಕಾರ (Karnataka Government) ಉಚಿತವಾಗಿ ಐದು ಕೆಜಿ ಅಕ್ಕಿ ಕೊಡುವ ಭರವಸೆ ನೀಡಿದ್ದು ಆದರೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬೇಕಾಗಿರುವಷ್ಟು ಅಕ್ಕಿಯನ್ನು ಒದಗಿಸಲು ಯಾವ ರಾಜ್ಯವು ಕೂಡ ಮುಂದಾಗಿಲ್ಲ.
ಒಂದು ವೇಳೆ ಅಕ್ಕಿ ಕೊಡುವುದಾದರೂ ರಾಜ್ಯ ಸರ್ಕಾರ ನೀಡಲು ಸಿದ್ದರಿರುವುದಕ್ಕಿಂತ ಹೆಚ್ಚಿನ ಹಣ ಕೇಳುತ್ತಿದ್ದಾರೆ. ಇದರಿಂದಾಗಿ 1.40 ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತಿ ತಿಂಗಳು ಒದಗಿಸುವುದು ಸುಲಭದ ಮಾತಲ್ಲ.
ಈ ಕಾರಣಕ್ಕಾಗಿ ಸರ್ಕಾರ ಸರ್ವೆ (Government Survey) ಒಂದನ್ನು ನಡೆಸುತ್ತಿದ್ದು ಜನರಿಂದಲೇ ಅಭಿಪ್ರಾಯವನ್ನು (Public Opinion) ಸಂಗ್ರಹಿಸುತ್ತಿದೆ. ನಿಮಗೆ ಅಕ್ಕಿ ಬೇಕೋ ಅಥವಾ ಹಣ ಕೊಡುವುದನ್ನು ಮುಂದುವರಿಸಬೇಕೋ ಎನ್ನುವ ಅಭಿಪ್ರಾಯವನ್ನು ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗೆ ಹೋಗಿ ಜನರಿಂದಲೇ ಸಂಗ್ರಹಿಸುದ್ದಾರೆ.
ಹೌದು, ಉಚಿತ ಅಕ್ಕಿ (Free Rice) ಅಥವಾ ಹಣ ಎನ್ನುವುದು ಈಗ ಜನರೇ ನಿರ್ಧಾರ ಮಾಡಬೇಕಾಗಿದೆ ಒಂದು ವೇಳೆ ಹಣ ಕೊಡುವುದನ್ನೇ ಮುಂದುವರೆಸಿ ಎಂದರೆ ಅಕ್ಕಿಯ ಬದಲು ಪ್ರತಿ ತಿಂಗಳು 34 ರೂಪಾಯಿಗಳಂತೆ ಹಣ ಕೊಡುವುದನ್ನು (Money Transfer) ಸರ್ಕಾರ ಮುಂದುವರೆಸಬಹುದು.
ಈಗಾಗಲೇ ಸಾಕಷ್ಟು ಜನ ಅಕ್ಕಿ ಬೇಡ ಹಣವೇ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಆದರೆ ಹಲವರು ರಾಜ್ಯ ಸರ್ಕಾರದ 5 ಕೆಜಿ ಅಕ್ಕಿಯ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿ ಅಂದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟರೆ ಹೆಚ್ಚು ಅನುಕೂಲ ಎಂಬುದಾಗಿಯೂ ಕೂಡ ಅಭಿಪ್ರಾಯ ಸೂಚಿಸಿದ್ದಾರೆ.
ಅರ್ಜಿ ಸಲ್ಲಿಸಿದ ಮೇಲೆ ಹೊಸ ಬ್ಯಾಂಕ್ ಖಾತೆ ತೆರೆದರೆ ಹಣ ಬರುತ್ತಾ? ಗೃಹಿಣಿಯರೇ ಈ ಮಿಸ್ಟೇಕ್ ಮಾಡ್ಬೇಡಿ
195 ತಾಲೂಕುಗಳಿಗೆ ಸಿಗುವುದಿಲ್ಲ ಹಣ
ಹೌದು, ಸರ್ಕಾರ 195 ತಾಲೂಕುಗಳನ್ನು ಬರಪೀಡಿತ ತಾಲೂಕು (Drought affected taluk) ಎಂದು ಗುರುತಿಸಿದೆ. ಇದರಲ್ಲಿ 161 ತಾಲೂಕುಗಳು ತೀವ್ರ ಹೊರಬೀಡಿತ ಹಾಗೂ 34 ತಾಲೂಕುಗಳನ್ನು ಸಾಮಾನ್ಯ ಬರಬೇಡಿ ತಾಲೂಕು ಎಂದು ಗುರುತಿಸಲಾಗಿದೆ.
ಫ್ರೀ ಕರೆಂಟ್! ಬಾಡಿಗೆ ಮನೆಯವರು ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಇನ್ಮುಂದೆ ಈ ದಾಖಲೆ ಕಡ್ಡಾಯ
ಈ ಪ್ರದೇಶಗಳಲ್ಲಿ ಮಳೆ ಅತಿ ಕಡಿಮೆಯಾಗಿದ್ದು ಸರಿಯಾದ ಬೆಳೆ ಕೂಡ ಕೈಗೆ ಸಿಗುತ್ತಿಲ್ಲ, ಇದೇ ಕಾರಣಕ್ಕೆ ಈ ತಾಲೂಕುಗಳಿಗೆ ಹಣ ಕೊಡುವುದಕ್ಕಿಂತ ಊಟಕ್ಕೆ ಅಕ್ಕಿ ಕೊಡುವುದು ಬಹಳ ಮುಖ್ಯ ಎಂಬುದನ್ನು ಮನಗಂಡ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಈ ತಾಲೂಕುಗಳಿಗೆ ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯನ್ನು ಸೇರಿಸಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡಲು ನಿರ್ಧಾರ ಮಾಡಿದೆ.
ಇನ್ನು ಸಾಮಾನ್ಯ ಜನರು ಅಕ್ಕಿಯ ಬದಲು ಹಣವನ್ನೇ ಕೊಟ್ಟರೆ ಒಳ್ಳೆಯದೋ ಅಥವಾ ಅಕ್ಕಿ ಬೇಕೋ ಎಂಬುದರ ಬಗ್ಗೆ ಸರ್ಕಾರಕ್ಕೆ ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಿದೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬಂದಿಲ್ಲ ಅಂದ್ರೆ ತಪ್ಪದೇ ಈ 3 ಕೆಲಸ ಮಾಡಿ
Annabhagya Yojana money release date announced for this month
Follow us On
Google News |