ಪ್ರತಿ ತಿಂಗಳು ರೇಷನ್ ಪಡೆಯುವ ಎಲ್ಲರಿಗೂ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ಆದೇಶ
ಬೆರಳಚ್ಚು ತಂತ್ರಾಂಶದಲ್ಲಿ ಮುದ್ರೆ ಆಗದ ಇರುವ ಕಾರಣ ಇವರ ಖಾತೆಗಳಿಗೆ ಅನ್ನಭಾಗ್ಯ ಯೋಜನೆಯ ಹಣ ಕೂಡ ಜಮಾ ಆಗುತ್ತಿಲ್ಲ. ಇನ್ನು ಈ ಕುರಿತು ಅನೇಕರು ಈಗಾಗಲೇ ಸರ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ (Ration Card) ಬಹಳ ಮುಖ್ಯವಾದ ದಾಖಲೆ ಎಂದರೆ ತಪ್ಪಾಗುವುದಿಲ್ಲ. ರೇಷನ್ ಕಾರ್ಡ್ ಇಲ್ಲದೆ ನೀವು ಸರ್ಕಾರದ ಅನ್ನಭಾಗ್ಯ (Annabhagya Scheme), ಗೃಹಲಕ್ಷ್ಮೀ (Gruha Lakshmi Yojana) ಅಂತಹ ಯೋಜನೆಗಳಿಂದ ವಂಚಿತರಾಗುತ್ತೀರಿ.
ಇನ್ನು ರೇಷನ್ ಕಾರ್ಡ್ ನಲ್ಲಿ ಯಾವುದೇ ತಪ್ಪುಗಳಿದ್ದರೆ, ಅದರ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಇನ್ನು ಅನ್ನಭಾಗ್ಯ ಯೋಜನೆಯಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದ ಕಾರಣ, 10 ಕೆಜಿ ಅಕ್ಕಿಯ ಬದಲಿಗೆ ಇದೀಗ 5 ಕೆಜಿ ಅಕ್ಕಿ, ಇನ್ನುಳಿದ ಅಕ್ಕಿಯ ಬದಲಿಗೆ ಹಣವನ್ನು ಜಮಾ (Bank Account) ಮಾಡಲಾಗುತ್ತಿದೆ. ಇನ್ನು ಇದೀಗ ಅನೇಕರು ಈ ಲಾಭದಿಂದ ವಂಚಿತರಾಗಿದ್ದಾರೆ.
ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಇಲ್ಲ ಅವಕಾಶ! ಹೊಸ ಆದೇಶ ಹೊರಡಿಸಿದ ಸರ್ಕಾರ
ಹೌದು, ಹಿರಿಯ ನಾಗರಿಕರು ಈ ಲಾಭವನ್ನು ಪಡೆಯಲು ಕಷ್ಟ ಪಡುತ್ತಿದ್ದಾರೆ. ರೇಷನ್ ಕಾರ್ಡ್ ಮೂಲಕ ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು ನೀವು ನಿಮ್ಮ ಬೆರಳಚ್ಚು ನೀಡಬೇಕು. ಈ ವೇಳೆ ಹಿರಿಯ ನಾಗರಿಕರ ಬೆರಳಚ್ಚಿನ ಗುರುತು ತೋರಿಕೆಯಾಗುತ್ತಿಲ್ಲ ಎಂಬ ಕಾರಣದಿಂದ ಅವರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಹೌದು, ಬೆರಳಚ್ಚು ತಂತ್ರಾಂಶದಲ್ಲಿ ಮುದ್ರೆ ಆಗದ ಇರುವ ಕಾರಣ ಇವರ ಖಾತೆಗಳಿಗೆ ಅನ್ನಭಾಗ್ಯ ಯೋಜನೆಯ ಹಣ ಕೂಡ ಜಮಾ ಆಗುತ್ತಿಲ್ಲ. ಇನ್ನು ಈ ಕುರಿತು ಅನೇಕರು ಈಗಾಗಲೇ ಸರ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಅಕ್ಕಿ ಬೇಕೋ ಬದಲಿಗೆ ಹಣ ಬೇಕೋ? ನೀವೇ ಡಿಸೈಡ್ ಮಾಡಿ ಎಂದ ಸರ್ಕಾರ
ಆದರೂ ಸಹ ಈ ವಿಷಯದ ಕುರಿತು ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಿರಿಯ ನಾಗರಿಕರ ಮುನಿಸಿಗೆ ಕಾರಣವಾಗಿದೆ. ಇನ್ನು ಈಗಾಗಲೇ ಅನೇಕರು ಹೊಸ BPL ಕಾರ್ಡ್ ಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇನ್ನು ಇವರ ಅರ್ಜಿಗಳ 75% ಪರಿಶೀಲನೆ ಮಾಡಲಾಗಿದ್ದು, ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಹೊಸ ರೇಷನ್ ಕಾರ್ಡ್ ಗಳನ್ನು ವಿತರಿಸಲಾಗುತ್ತದೆ. ಇದಾದ ಬಳಿಕ ಮತ್ತೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ದಿನಾಂಕ ಘೋಷಣೆ; ಆದ್ರೆ ಇಂತಹವರಿಗೆ ಸಿಗೋಲ್ಲ ಉಚಿತ ಹಣ
ಇನ್ನು ನಿಮ್ಮ ರೇಷನ್ ಕಾರ್ಡ್ ಗೆ EKYC ಮಾಡಿಸುವುದು ಕಡ್ಡಾಯ ಎಂದು ಈಗಾಗಲೇ ರಾಜ್ಯದ ಆಹಾರ ಇಲಾಖೆ ಮಾಹಿತಿ ನೀಡಿದೆ. ರೇಷನ್ ಕಾರ್ಡ್ ಅಕ್ರಮವನ್ನು ತಡೆಯುವ ಸಲುವಾಗಿ ಈ ನಿಯಮವನ್ನು ಆಹಾರ ಮತ್ತು ಸರಬರಾಜು ಇಲಾಖೆ ಜಾರಿಗೆ ತಂದಿದೆ.
ಇನ್ನು ಒಂದು ವೇಳೆ ನೀವು EKYC ಮಾಡಿಸದೆ ಇದ್ದಲ್ಲಿ, ರೇಷನ್ ಕಾರ್ಡ್ ನ ಮೂಲಕ ಸಿಗುವ ಲಾಭಗಳನ್ನು ನೀವು ಪಡೆಯಲು ಸಾಧ್ಯವಿಲ್ಲ. ಅಲ್ಲದೆ ನಿಮ್ಮ ರೇಷನ್ ಕಾರ್ಡ್ ಅನ್ನು ಸಹ ರದ್ದು ಗೊಳಿಸಲಾಗುತ್ತದೆ ಎಂದು ಸರ್ಕಾರವು ಆದೇಶ ಹೊರಡಿಸಿದೆ.
new rules for all those receiving ration every month by BPL Ration Card