ಫ್ರೀ ಕರೆಂಟ್! ಜೀರೋ ಬಿಲ್ ಬಂತು ಅಂತ ಬೀಗಬೇಡಿ, ಈ ತಪ್ಪು ಮಾಡಿದ್ರೆ ಕಟ್ಟಬೇಕು ಪೂರ್ಣ ಬಿಲ್

ಸ್ವಂತ ಮನೆ (Own House) ಇದ್ದವರಿಗೆ ಮಾತ್ರವಲ್ಲ ಬಾಡಿಗೆಯಲ್ಲಿ ಉಳಿದುಕೊಂಡಿರುವವರು ಕೂಡ ಬಾಡಿಗೆ ಮನೆಯ (Rented House) ಆರ್ ಆರ್ ನಂಬರ್ (RR no.) ಅನ್ನು ಸಲ್ಲಿಸಿ ಉಚಿತ ವಿದ್ಯುತ್ (Free Electricity) ಪಡೆದುಕೊಳ್ಳಲು ಸಾಧ್ಯವಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಹಲವರಿಗೆ ಉಚಿತ ವಿದ್ಯುತ್ (free Electricity) ಅನ್ನು ಗೃಹ ಜ್ಯೋತಿ ಯೋಜನೆ (Gruha Jyothi scheme) ಅಡಿಯಲ್ಲಿ ನೀಡಲಾಗುತ್ತಿದೆ. 200 ಯೂನಿಟ್ ವಿದ್ಯುತ್ ಗಿಂತ ಹೆಚ್ಚು ಬಳಸಿದರೆ ಜೀರೋ ಬಿಲ್(Zero Electricity bill) ಬರಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಬೇಕು.

ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಕೂಡ ಒಂದು, ಲಕ್ಷಾಂತರ ಗ್ರಾಹಕರು ಈ ಯೋಜನೆಯ ಅಡಿಯಲ್ಲಿ ಇಂದು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

2ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಸಿದ್ಧತೆ! ಇನ್ನೂ ಹಣ ಸಿಗದ ಗೃಹಿಣಿಯರಿಗೆ ವಿಶೇಷ ಸೂಚನೆ

ಫ್ರೀ ಕರೆಂಟ್! ಜೀರೋ ಬಿಲ್ ಬಂತು ಅಂತ ಬೀಗಬೇಡಿ, ಈ ತಪ್ಪು ಮಾಡಿದ್ರೆ ಕಟ್ಟಬೇಕು ಪೂರ್ಣ ಬಿಲ್ - Kannada News

ಗೃಹ ಜ್ಯೋತಿ ಯೋಜನೆಯ ಪ್ಲಸ್ ಪಾಯಿಂಟ್ ಅಂದ್ರೆ ಇದು ಕೇವಲ ಮನೆಯ ಓನರ್ ಅಥವಾ ಸ್ವಂತ ಮನೆ (Own House) ಇದ್ದವರಿಗೆ ಮಾತ್ರವಲ್ಲ ಬಾಡಿಗೆಯಲ್ಲಿ ಉಳಿದುಕೊಂಡಿರುವವರು ಕೂಡ ಬಾಡಿಗೆ ಮನೆಯ (Rented House) ಆರ್ ಆರ್ ನಂಬರ್(RR no.) ಅನ್ನು ಸಲ್ಲಿಸಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಿದೆ. ಹೀಗೆ ಬಾಡಿಗೆ ಮನೆಯಲ್ಲಿ 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುವವರಿಗೆ 0 ಕರೆಂಟ್ ಬಿಲ್ ಬರುತ್ತದೆ.

ಉಚಿತ ಕರೆಂಟ್ ಬಿಲ್ ಪಡೆಯಲು ಈ ಲೆಕ್ಕಚಾರ

ಎಲ್ಲರಿಗೂ ಗೊತ್ತಿರುವ ಹಾಗೆ ಒಂದು ವರ್ಷದಲ್ಲಿ ಬಳಕೆಯಾದ ವಿದ್ಯುತ್ ಬಿಲ್ ನ ಆವರೇಜ್ ಲೆಕ್ಕಾಚಾರದ ಮೇಲೆ 200 ಯೂನಿಟ್ ಗಿಂತ ಒಳಗಡೆ ವಿದ್ಯುತ್ ಖರ್ಚು ಮಾಡಿದರೆ ಮಾತ್ರ ಅಂಥವರಿಗೆ ಉಚಿತ ವಿದ್ಯುತ್ ಸಿಗುತ್ತೆ.

ಇನ್ನು ಪ್ರತಿ ತಿಂಗಳು ನೀವು ಎಷ್ಟು ಯೂನಿಟ್ ವರೆಗೆ ಬಳಸಬಹುದು ? ಈಗ ಎಷ್ಟು ಯೂನಿಟ್ ಬಳಸಿದ್ದೀರಿ ಎಂಬ ಮಾಹಿತಿ ಕೂಡ ನಿಮ್ಮ ಪ್ರತಿ ತಿಂಗಳ ಬಿಲ್ ನಲ್ಲಿ ಲಭ್ಯವಿರುತ್ತದೆ. ಒಂದು ವೇಳೆ ನೀವು ಈ ತಿಂಗಳಿನಲ್ಲಿ ಇನ್ನೂರು ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿ ಮುಂದಿನ ತಿಂಗಳಿನಲ್ಲಿ ಹೆಚ್ಚು ವಿದ್ಯುತ್ ಬಳಸಿದರೆ ಆಗ ಮತ್ತೆ ಸಂಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ. ಇದೇ ಕಾರಣಕ್ಕೆ ವಿದ್ಯುತ್ ಬಿಲ್ 200 ಯೂನಿಟ್ ಒಳಗಡೆ ಬರುವ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯ.

ಪ್ರತಿ ತಿಂಗಳು ರೇಷನ್ ಪಡೆಯುವ ಎಲ್ಲರಿಗೂ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ಆದೇಶ

ಕಡಿಮೆ ಯೂನಿಟ್ ಬರಲು ಏನು ಮಾಡಬೇಕು?

Gruha jyothi schemeಮೊದಲನೇಯದಾಗಿ ಅನಗತ್ಯವಾಗಿ ವಿದ್ಯುತ್ ಅನ್ನು ಬಳಸಬಾರದು. ಎಲ್ಲಿ ಯಾವ ಸಮಯದಲ್ಲಿ ಅಗತ್ಯ ಇಲ್ಲವೋ ಅಂತಹ ಸಮಯದಲ್ಲಿ ಸ್ವಿಚ್ ಆಫ್ ಮಾಡಿರಬೇಕು. ಇನ್ನು ಹೆಚ್ಚು ಸಮಯದವರೆಗೆ ಗೀಸರ್ ಸ್ವಿಚ್ ಹಾಕಿಯೇ ಇಡುವುದು ಅಥವಾ ಇನ್ನಿತರ ಹೆಚ್ಚು ಯೂನಿಟ್ ಖರ್ಚು ಮಾಡುವಂತಹ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಹೆಚ್ಚಾಗಿ ಬಳಸಬಾರದು. ಹೀಗೆ ನಿಮ್ಮ ವಿದ್ಯುತ್ ಬಿಲ್ 200 ಯೂನಿಟ್ ಒಳಗೆ ಬರುವ ಹಾಗೆ ಮಾಡಿಕೊಳ್ಳುವುದು ಬಹಳ ಮುಖ್ಯ.

ಜನರಿಗೆ ಉಚಿತ ವಿದ್ಯುತ್ ಏನೋ ಸಿಗುತ್ತಿದೆ ಆದರೆ ಅಷ್ಟೇ ಪ್ರಮಾಣದಲ್ಲಿ ವಿದ್ಯುತ್ ತಯಾರಿಕೆ ನಮ್ಮಲ್ಲಿ ನಡೆಯುತ್ತಿಲ್ಲ. ಅಂದರೆ ಜನರ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ, ಅದು ಅಲ್ಲದೆ ಉಚಿತ ವಿದ್ಯುತ್ ಘೋಷಣೆ ಆಗಿರುವ ಕಾರಣ ವಿದ್ಯುತ್ ದುಬಾರಿ ಕೂಡ ಆಗುತ್ತಿದೆ.

ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಇಲ್ಲ ಅವಕಾಶ! ಹೊಸ ಆದೇಶ ಹೊರಡಿಸಿದ ಸರ್ಕಾರ

ಈ ವಿದ್ಯುತ್ ವೆಚ್ಚ ಸರಿದೂಗಿಸಲು ಈ ನಡುವೆ ಕೆಲವೆಡೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಜೊತೆಗೆ ಯೂನಿಟ್ ದರವೂ ಕೂಡ ಜಾಸ್ತಿಯಾಗಿದೆ.

ಹಾಗಾಗಿ ಸರ್ಕಾರದಿಂದ ಸಿಗುವ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀವು ಪಡೆದುಕೊಳ್ಳಲು ಸಾಧ್ಯವಾದರೆ ಪ್ರತಿ ತಿಂಗಳ ಖರ್ಚು ವೆಚ್ಚದಲ್ಲಿ ದೊಡ್ಡ ಮೊತ್ತವನ್ನು ಉಳಿಸಲು ಸಾಧ್ಯ. ಅದರಿಂದ ಕಡಿಮೆ ವಿದ್ಯುತ್ ಯುನಿಟ್ ಬರುವಂತೆ ಹಿತಮಿತವಾಗಿ ವಿದ್ಯುತ್ ಬಳಸಿ.

Gruha Jyothi Scheme Zero Electricity bill Update

Follow us On

FaceBook Google News

Gruha Jyothi Scheme Zero Electricity bill Update