ಇಂತವರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಸಿಗಲ್ಲ, ದುಡ್ಡು ಸಿಗಲ್ಲ! ಸರ್ಕಾರ ಖಡಕ್ ವಾರ್ನಿಗ್
ರೇಷನ್ ಕಾರ್ಡ್ ರದ್ದಾಗುವ ಮೊದಲೇ ಅಗತ್ಯವಿರುವ ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಿ. ಇಲ್ಲವಾದರೆ ಈ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯು ಸಿಗುವುದಿಲ್ಲ ಅಥವಾ ಹಣವೂ ಕೂಡ ನಿಮ್ಮ ಖಾತೆಗೆ (Bank Account) ಜಮಾ ಆಗುವುದಿಲ್ಲ.
ರಾಜ್ಯ ಕಾಂಗ್ರೆಸ್ ಸರ್ಕಾರದ (Karnataka congress government) ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆ (5 guarantee schemes) ಗಲ್ಲಿ ಅನ್ನಭಾಗ್ಯ ಯೋಜನೆ (Annabhagya Yojana) ಕೂಡ ಒಂದು.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕರ್ನಾಟಕದ ಪ್ರತಿಯೊಬ್ಬ ಫಲಾನುಭವಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಸರಿಯಾದ ಸಮಯಕ್ಕೆ ಅಕ್ಕಿ ಹೊಂದಿಸಲು ಸಾಧ್ಯವಾಗದೇ ಇರುವ ಕಾರಣ ಸರ್ಕಾರ ತಾನು ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹಳೆಯ ರೇಷನ್ ಕಾರ್ಡ್‌ಗಳ ಬಗ್ಗೆ ಬಿಗ್ ಅಪ್ಡೇಟ್, 2020ಕ್ಕೂ ಮೊದಲು ಕಾರ್ಡ್ ಮಾಡಿಸಿರುವವರಿಗೆ ಹೊಸ ರೂಲ್ಸ್
ಹೌದು, ಶತಾಯಗತಾಯ ಪ್ರಯತ್ನ ಪಟ್ಟರು ಕೂಡ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯನ್ನು ಪ್ರತಿ ಗ್ರಾಹಕರಿಗೆ ಕೊಡುವ ಸವಾಲು ಎದುರಿಸಲು ಸಾಧ್ಯವಾಗುತ್ತಿಲ್ಲ.
ಕೇಂದ್ರ ಸರ್ಕಾರ (central government) ಕೊಡುತ್ತಿರುವ ಉಚಿತ 5 ಕೆಜಿ ಅಕ್ಕಿಯ ಜೊತೆಗೆ ತಾವು 5 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುವುದಾಗಿ ತಿಳಿಸಿತ್ತು.. ಅಂದರೆ ಪ್ರತಿ ತಿಂಗಳು ತಲಾ ಒಬ್ಬ ವ್ಯಕ್ತಿಗೆ 10 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ಕೊಡುವುದಾಗಿ ಸರ್ಕಾರ ತಿಳಿಸಿತು.
ಬಿಪಿಎಲ್ ಕಾರ್ಡ್ ಇದ್ರೆ ಈ ತಪ್ಪು ಮಾಡಲೇಬೇಡಿ
ಇನ್ನು ರಾಜ್ಯದಲ್ಲಿ ಸಾಕಷ್ಟು ಜನರು ಬಿಪಿಎಲ್ ರೇಷನ್ ಕಾರ್ಡ್ (BPL ration card) ಹೊಂದಿದ್ದಾರೆ, ಇದೇ ಕಾರಣಕ್ಕೆ ಅಂಥವರಿಗೆ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಬದಲು ಹಣವನ್ನು ಕೂಡ ನೇರವಾಗಿ (DBT) ಸರ್ಕಾರ ಅವರ ಖಾತೆಗೆ ವರ್ಗಾವಣೆ ಮಾಡುತ್ತಿದೆ.
ಪ್ರತಿ ತಿಂಗಳು 2.40 ಮೆಟ್ರಿಕ್ ಟನ್ ನಷ್ಟು ಅಕ್ಕಿಯನ್ನು ಸರ್ಕಾರ ಹೊಂದಿಸಬೇಕಿತ್ತು. ಇದು ಸಾಧ್ಯವಾಗದೇ ಇರುವ ಕಾರಣಕ್ಕೆ ಅಕ್ಕಿಯ ಬದಲು ಹಣವನ್ನೇ ಜನರಿಗೆ ನೀಡಲಾಗುತ್ತಿದೆ. ಇನ್ನು ಇದರ ಜೊತೆಗೆ ರೇಷನ್ ಕಾರ್ಡ್ ನ ಪರಿಶೀಲನೆಯನ್ನು ಕೂಡ ಸರ್ಕಾರ ಮಾಡುತ್ತಿದೆ.
ಫ್ರೀ ಕರೆಂಟ್! ಜೀರೋ ಬಿಲ್ ಬಂತು ಅಂತ ಬೀಗಬೇಡಿ, ಈ ತಪ್ಪು ಮಾಡಿದ್ರೆ ಕಟ್ಟಬೇಕು ಪೂರ್ಣ ಬಿಲ್
ರೇಷನ್ ಕಾರ್ಡ್ ರದ್ದಾಗುತ್ತದೆ
ಸರ್ಕಾರದ ಆರು ಮಾನದಂಡಗಳ ಒಳಗೆ ಇಲ್ಲದೆ ಇರುವವರು ಕೂಡ ರೇಷನ್ ಕಾರ್ಡ್ ಹೊಂದಿದ್ದರೆ ಅಂತವರ ರೇಷನ್ ಕಾರ್ಡ್ ರದ್ದತಿ ನಡೆಯುತ್ತಿದೆ. ಶಾಕಿಂಗ್ ವಿಚಾರ ಏನಂದರೆ ಈಗಾಗಲೇ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚಿನ ರೇಷನ್ ಕಾರ್ಡ್ ರದ್ದುಪಡಿಸಲಾಗಿದೆ.
ಇನ್ನು ನಿಮ್ಮ ಬಳಿಯ ರೇಷನ್ ಕಾರ್ಡ್ ಇದ್ದು ಪ್ರತಿ ತಿಂಗಳು ರೇಷನ್ ತೆಗೆದುಕೊಳ್ಳದೆ ಇದ್ದಲ್ಲಿ ಅಥವಾ ಮೂರು ತಿಂಗಳಿನಿಂದ ರೇಷನ್ ಖರೀದಿ ಮಾಡದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ತಕ್ಷಣವೇ ರದ್ದಾಗುತ್ತದೆ.
2ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಸಿದ್ಧತೆ! ಇನ್ನೂ ಹಣ ಸಿಗದ ಗೃಹಿಣಿಯರಿಗೆ ವಿಶೇಷ ಸೂಚನೆ
ಎರಡನೆಯದಾಗಿ ರೇಷನ್ ಪಡೆದುಕೊಂಡು ಅಕ್ಕಿಯನ್ನು ಮಾರಾಟ ಮಾಡುತ್ತಾರೆ ಕೆಲವರು. ಈ ವಿಚಾರವೂ ಕೂಡ ಸರ್ಕಾರದ ಗಮನಕ್ಕೆ ಬಂದರೆ ಅಂತವರ ರೇಷನ್ ಕಾರ್ಡ್ ರದ್ದಾಗುತ್ತದೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಸೌಲಭ್ಯ ಸಿಗಬೇಕು ಆದರೆ ದುರದೃಷ್ಟವಶಾತ್ ಅವರಿಗಿಂತ ಹೆಚ್ಚಾಗಿ ಅನುಕೂಲಸ್ಥರೇ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.
ಇನ್ನು ಬಿಪಿಎಲ್ ಕಾರ್ಡ್ ನಲ್ಲಿ ಮೃತ ಸದಸ್ಯರ ಹೆಸರನ್ನು ಕೂಡ ತೆಗೆಯದೆ ಹಲವು ವರ್ಷಗಳಿಂದ ಪಡಿತರ ಪಡೆದುಕೊಳ್ಳುತ್ತಿರುವವರು ಇದ್ದಾರೆ. ಈ ಎಲ್ಲಾ ವಿಷಯಗಳನ್ನು ಗಣನೆಗೆ ತೆಗೆದುಕೊಂಡ ಸರ್ಕಾರ ಮತ್ತೆ ಪರಿಶೀಲನೆ ಮಾಡಿ ಸರಿಯಾಗಿ ಇಲ್ಲದೆ ಇರುವ ರೇಷನ್ ಕಾರ್ಡ್ ರದ್ದು ಮಾಡುವುದಾಗಿ ತಿಳಿಸಿದೆ.
ಪ್ರತಿ ತಿಂಗಳು ರೇಷನ್ ಪಡೆಯುವ ಎಲ್ಲರಿಗೂ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ಆದೇಶ
ಹಾಗಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಈ ಎಲ್ಲ ವಿಚಾರಗಳನ್ನೂ ತಿಳಿದುಕೊಂಡು ರೇಷನ್ ಕಾರ್ಡ್ ರದ್ದಾಗುವ ಮೊದಲೇ ಅಗತ್ಯವಿರುವ ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಿ. ಇಲ್ಲವಾದರೆ ಈ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯು ಸಿಗುವುದಿಲ್ಲ ಅಥವಾ ಹಣವೂ ಕೂಡ ನಿಮ್ಮ ಖಾತೆಗೆ (Bank Account) ಜಮಾ ಆಗುವುದಿಲ್ಲ.
These people do not get Free rice and money under Annabhagya Yojana
Follow us On
Google News |