ರೇಷನ್ ಕಾರ್ಡ್ ಜೊತೆಗೆ ಈ ಒಂದು ದಾಖಲೆ ಇದ್ರೆ ಮಾತ್ರ ಸಿಗುತ್ತೆ ರೇಷನ್! ಮತ್ತೆ ನಿಯಮ ಬದಲಾವಣೆ
ರೇಷನ್ ಪಡೆಯುವ ವೇಳೆ ರೇಷನ್ ಕಾರ್ಡ್ (Ration Card) ಜೊತೆಗೆ ತಮ್ಮ ಜಾತಿ ಪ್ರಮಾಣ ಪತ್ರವನ್ನು (Caste Certificate) ಕೂಡ ತೆಗೆದುಕೊಂಡು ಹೋಗುವುದನ್ನು ಕಡ್ಡಾಯ ಮಾಡಲಾಗಿದೆ
ಕಾಂಗ್ರೆಸ್ ಸರ್ಕಾರ (Congress Government) ನಮ್ಮ ರಾಜ್ಯದ ಜನರಿಗಾಗಿ ಹೊರತಂದಿರುವ ಮುಖ್ಯವಾದ ಯೋಜನೆಗಳಲ್ಲಿ ಒಂದು ಅನ್ನಭಾಗ್ಯ ಯೋಜನೆ ಆಗಿದೆ. ಈ ಯೋಜಯಿಂದ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL Card) ಮತ್ತು ಅಂತ್ಯೋದಯ ಕಾರ್ಡ್ (Anthyodaya Card) ಹೊಂದಿರುವ ಎಲ್ಲಾ ಜನರಿಗೆ 10ಕೆಜಿ ಅಕ್ಕಿ ಉಚಿತವಾಗಿ ನೀಡುವ ಭರವಸೆ ನೀಡಿತ್ತು, ಆದರೆ ಅಕ್ಕಿ ಹೊಂದಿಸಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿ ನೀಡಿ ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಹಣ ನೀಡುವ ನಿರ್ಧಾರ ಮಾಡಿತು.
ರೇಷನ್ ಕಾರ್ಡ್ ನಲ್ಲಿರುವ ಮನೆಯ ಯಜಮಾನರ ಬ್ಯಾಂಕ್ ಖಾತೆಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ, 5ಕೆಜಿ ಅಕ್ಕಿಗೆ 170 ರೂಪಾಯಿಗಳು ಒಬ್ಬ ವ್ಯಕ್ತಿಗೆ ಸಿಗುತ್ತದೆ ಎಂದು ಸರ್ಕಾರ ನಿರ್ಧಾರ ಮಾಡಿ, ಅನ್ನಭಾಗ್ಯ ಯೋಜನೆಯ ಈ ಹಣವನ್ನು ಜನರಿಗೆ ತಲುಪುವ ಹಾಗೆ ಮಾಡಲಾಗಿತ್ತು.
ಗೃಹಲಕ್ಷ್ಮಿ, ಗೃಹಜ್ಯೋತಿ ಬೆನ್ನಲ್ಲೇ ಈಗ ರಾಜ್ಯದಲ್ಲಿ ಮಕ್ಕಳ ಆರೈಕೆಗಾಗಿ ಹೊಸ ಯೋಜನೆ ಘೋಷಣೆ
ಈಗಾಗಲೇ ಅನ್ನಭಾಗ್ಯ ಯೋಜನೆಯ (Annabhagya Yojana) ಹಣ ಜನರನ್ನು ತಲುಪಿದೆ. ಇದು ರಾಜ್ಯ ಸರ್ಕಾರದ ನಿಯಮವಾದರೆ, ಕೇಂದ್ರ ಸರ್ಕಾರ ಕೂಡ ಒಂದು ನಿಯಮವನ್ನು ಜಾರಿಗೆ ತಂದಿತು, ಅದೇನೆಂದರೆ ರೇಷನ್ ಕಾರ್ಡ್ (Ration Card) ಗೆ ಆಧಾರ್ ಕಾರ್ಡ್ (Aadhar Card) ಲಿಂಕ್ ಮಾಡುವ ನಿಯಮವನ್ನು ಜಾರಿಗೆ ತಂದಿತು, ಈ ಕೆಲಸ ಮಾಡಿದರೆ ಮಾತ್ರ ಉಚಿತ ರೇಷನ್ ಪಡೆಯಲು ಸಾಧ್ಯ ಎಂದು ಹೇಳಿತು..
ಇದೀಗ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (SC/ST) ಸೇರಿದ ಜನರಿಗೆ ಹೊಸ ನಿಯಮ ಒಂದನ್ನು ಜಾರಿಗೆ ತಂದಿದ್ದು, ಇವರಿಂದ ಜಾತಿ ಪ್ರಮಾಣ ಪತ್ರವನ್ನು ಸಂಗ್ರಹಿಸುವ ಕೆಲಸ ಶುರು ಮಾಡಿದೆ.
ಈ ಕಾರಣದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಇನ್ನುಮುಂದೆ ರೇಷನ್ ಪಡೆಯುವ ವೇಳೆ ರೇಷನ್ ಕಾರ್ಡ್ (Ration Card) ಜೊತೆಗೆ ತಮ್ಮ ಜಾತಿ ಪ್ರಮಾಣ ಪತ್ರವನ್ನು (Caste Certificate) ಕೂಡ ತೆಗೆದುಕೊಂಡು ಹೋಗುವುದನ್ನು ಕಡ್ಡಾಯ ಮಾಡಲಾಗಿದೆ, ಈ ಆದೇಶವನ್ನು ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಸೂಚನೆ ಇಲಾಖೆ ನೀಡಿದ್ದು, ಇನ್ನುಮುಂದೆ ರೇಷನ್ ಪಡೆಯುವುದಕ್ಕೆ ರೇಷನ್ ಕಾರ್ಡ್ ಜೊತೆಗೆ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದೆ.
ಗೃಹಲಕ್ಷ್ಮಿ ಹಣ ಇನ್ನೂ ಯಾರಿಗೆ ಬಂದಿಲ್ವೋ ಅವರು ಕೂಡಲೇ ಈ ಕಚೇರಿಗೆ ಹೋಗಿ! ಮಹತ್ವದ ಮಾಹಿತಿ
ಆದ್ರೆ ಸರ್ಕಾರದ ಈ ನಿರ್ಧಾರದಿಂದ ಜನರಿಗೆ ಸಂತೋಷವಾಗಿಲ್ಲ. ರೇಷನ್ ಕಾರ್ಡ್ ಜೊತೆಗೆ ಜಾತಿ ಪ್ರಮಾಣ ಪತ್ರವನ್ನು ಕೂಡ ತೆಗೆದುಕೊಂಡು ಹೋಗಬೇಕಿರುವುದು ಒಂದು ರೀತಿಯಲ್ಲಿ ಜನರಿಗೆ ತಲೆನೋವಾಗಿ ಪರಿಣಮಿಸಿದೆ, ಹಾಗಾಗಿ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಂದು ವಿಚಾರ ಏನು ಎಂದರೆ ಈಗಾಗಲೇ ಅನ್ನಭಾಗ್ಯ ಯೋಜನೆಯಲ್ಲಿ ಎರಡು ತಿಂಗಳ ಹಣವು ಜನರನ್ನು ತಲುಪಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಜನರನ್ನು ತಲುಪಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಜನರಿಗೆ ಪೂರ್ತಿ 10ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ.
ಬಿಪಿಎಲ್ ರೇಷನ್ ಕಾರ್ಡ್‌ನಲ್ಲಿ 4 ಜನಕ್ಕಿಂತ ಹೆಚ್ಚಿರುವ ಎಲ್ಲರಿಗೂ ಹೊಸ ಅಪ್ಡೇಟ್! ಹೊಸ ನಿಯಮ
ಒಟ್ಟಿನಲ್ಲಿ ಸರ್ಕಾರ ಹೀಗೆ ದಿನದಿಂದ ದಿನಕ್ಕೆ ಹೊಸ ನಿರ್ಧಾರಗಳು, ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುವುದರಿಂದ ಜನರಿಗೆ ಗೊಂದಲ ಹೆಚ್ಚಾಗಿದ್ದು, ಇಷ್ಟೆಲ್ಲಾ ನಿಯಮಗಳು ಬೇಕಾ ಎಂದು ಪ್ರಶ್ನೆ ಶುರುವಾಗಿದೆ.
ಮುಂದೆ ಇನ್ನು ಯಾವೆಲ್ಲಾ ನಿಯಮ ಬದಲಾವಣೆ ಮಾಡಲಾಗುತ್ತದೆ ಎಂದು ಕಾದು ನೋಡಬೇಕಿದೆ. ಆದರೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇನ್ನುಮುಂದೆ ಪೂರ್ತಿ 5 ಕೆಜಿ ನೀಡುವ ಭರವಸೆಯನ್ನು ಸರ್ಕಾರ ನೀಡಿರುವುದು, ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ.
Ration Will Give only if this document is present along with the ration card