ರೇಷನ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಹೊಸ ಸಮಸ್ಯೆ, ಈಗ ಅಪ್ಡೇಟ್ ಮಾಡಿಸುವ ಅವಕಾಶ ಕೂಡ ಇಲ್ಲ

ಇಷ್ಟೆಲ್ಲಾ ಮಾಹಿತಿ ನಂತರವೂ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸದ ಜನರಿಗೆ, ಯೋಜನೆಯ ಯಾವ ಸೌಲಭ್ಯ ಕೂಡ ಸಿಗುವುದಿಲ್ಲ, ಜೊತೆಗೆ ಈಗ ಹೊಸ ಸಮಸ್ಯೆ ಏನು ಎಂದರೆ ಇಷ್ಟು ದಿನದ ಗಡುವು ನೀಡಿದರೂ ಅಪ್ಡೇಟ್ ಮಾಡಿಸಿಲ್ಲವಾದರೆ ಈಗ ಮಾಡಿಸುವ ಅವಕಾಶ ಕೂಡ ಇಲ್ಲ

ನಮ್ಮ ರಾಜ್ಯದಲ್ಲಿ ಹೊಸ ಸರ್ಕಾರ ಜಾರಿಗೆ ಬಂದ ನಂತರ 5 ಹೊಸ ಯೋಜನೆಗಳನ್ನು (Govt Schemes) ಜಾರಿಗೆ ತರಲಾಗುತ್ತಿದೆ. ಈ 5 ಗ್ಯಾರಂಟಿ ಯೋಜನೆಗಳನ್ನು ಜನರ ಹಿತಕ್ಕಾಗಿ, ಜನರ ಅನುಕೂಲಕ್ಕಾಗಿ ಜಾರಿಗೆ ತರಲಾಗುತ್ತಿದ್ದು, 5ರಲ್ಲಿ 4 ಯೋಜನೆಗಳು ಜಾರಿಗೆ ತರಲಾಗಿದೆ.

ಇನ್ನೊಂದು ಯೋಜನೆ ಈ ವರ್ಷಾಂತ್ಯಕ್ಕೆ ಜಾರಿಗೆ ಬರಲಿದೆ. ಈ ಯೋಜನೆಗಳ ಸೌಲಭ್ಯ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವುದು ಕಡ್ಡಾಯ ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಜೊತೆಗೆ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರ ಹೆಸರು, ಮನೆ ನಡೆಸುವ ಮಹಿಳೆಯ ಹೆಸರೇ ಆಗಿರಬೇಕು ಎಂದು ಕೂಡ ನಿಯಮ ತರಲಾಗಿತ್ತು..

ರಾಜ್ಯದ ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್! ಯುವ ನಿಧಿ ಯೋಜನೆಯ ಪ್ರಮುಖ ಘೋಷಣೆ

Kannada News

ಒಂದು ವೇಳೆ ಯಾರು ಈ ನಿಯಮವನ್ನು ಅನುಸರಿಸುತ್ತಿಲ್ಲವೋ, ಅವರಿಗೆಲ್ಲಾ ರೇಷನ್ ಕಾರ್ಡ್ ತಿದ್ದುಪಡಿ (Ration Card Update) ಮಾಡುವ ಅವಕಾಶವನ್ನು ಕೂಡ ನೀಡಲಾಯಿತು.

ರೇಶನ್ ಕಾರ್ಡ್ ಗೆ ಹೆಸರು ಸೇರಿಸುವುದು, ರೇಷನ್ ಕಾರ್ಡ್ ಇಂದ ಹೆಸರನ್ನು ಡಿಲೀಟ್ (Name Delete) ಮಾಡಿಸುವುದು, ಮುಖ್ಯಸ್ಥೆಯ ಹೆಸರನ್ನು ಡಿಲೀಟ್ ಮಾಡಿಸುವುದು ಈ ತಿದ್ದುಪಡಿ ಮಾಡಿಸಲು ಅವಕಾಶ ನೀಡಿದ ಸರ್ಕಾರ ಈ ಕೆಲಸ ಮಾಡಿಸುವುದಕ್ಕೆ ಸಮಯದ ಗಡುವನ್ನು ಕೂಡ ನೀಡಿತು. ಆದರೆ ಸರ್ವರ್ ಸಮಸ್ಯೆ ಎದುರಾದ ಕಾರಣ ಎಲ್ಲರೂ ಕೂಡ ರೇಷನ್ ಕಾರ್ಡ್ ತಿದ್ದುಪಡಿ (Corrections) ಮಾಡಿಸಲು ಸಾಧ್ಯವಾಗಿಲ್ಲ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವ ಸಲುವಾಗಿ ಸೆಪ್ಟೆಂಬರ್ 14ರ ವರೆಗು ಸಮಯ ನೀಡಲಾಗಿತ್ತು. ನಗರ ಪ್ರದೇಶಗಳಲ್ಲಿ ಹಲವು ಜನರು ರೇಶನ್ ಕಾರ್ಡ್ ತಿದ್ದುಪಡಿ ಮಾಡುವ ಕೆಲಸಗಳು ನಡೆದಿದೆ. ಹೆಚ್ಚಿನ ಜನರು ತಿದ್ದುಪಡಿ ಮಾಡಿಸುವ ಕೆಲಸಗಳನ್ನು ಮಾಡಿದ್ದಾರೆ, ಆದರೆ ಹಳ್ಳಿಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಜನರು ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೋದರು ಕೂಡ, ಸರ್ವರ್ ಸಮಸ್ಯೆ (Server problem) ಇಂದ ಪೋರ್ಟಲ್ ಓಪನ್ ಆಗದ ಕಾರಣ ಹೆಚ್ಚಿನ ಜನರು ಅಪ್ಡೇಟ್ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಸರ್ವರ್ ಸಮಸ್ಯೆ ಇಂದ ಎಲ್ಲರ ರೇಷನ್ ಕಾರ್ಡ್ ಗಳು ಅಪ್ಡೇಟ್ ಆಗಿಲ್ಲ.

ಮಕ್ಕಳ ಶಾಲಾ ಸಮಯದಲ್ಲಿ ಬದಲಾವಣೆ; ಇನ್ನೂ ಅರ್ಧ ಗಂಟೆ ಮುಂಚೆ ತರಗತಿಗಳು ಪ್ರಾರಂಭ!

ಈಗಾಗಲೇ ರೇಶನ್ ಕಾರ್ಡ್ ಅಪ್ಡೇಟ್ ಮಾಡುವುದಕ್ಕೆ ಸಮಯ ನೀಡಿದ್ದರು ಕೂಡ ಎಲ್ಲರ ಷನ್ ಕಾರ್ಡ್ ಅಪ್ಡೇಟ್ ಆಗಿಲ್ಲ. ಸರ್ಕಾರ ನೀಡಿದ್ದ ಸಮಯ ಕೂಡ ಮುಗಿದು ಹೋಗಿದೆ, ಆದರೆ ಸರ್ವರ್ ಕಾರಣದಿಂದ ರೇಷನ್ ಕಾರ್ಡ್ ಅಪ್ಡೇಟ್ ಮಾಡಲು ಸಾಧ್ಯವಾಗಿಲ್ಲ. ಆದರೆ ಸಮಯ ಮುಗಿದು ಹೋಗಿರುವುದರಿಂದ ಸರ್ಕಾರ ಮತ್ತೆ ಈ ಅವಕಾಶ ಕೊಡುತ್ತಾ ಎಂದು ಜನರಲ್ಲಿ ಚಿಂತೆ ಶುರುವಾಗಿದೆ.

BPL Ration Cardಇತ್ತ ಇನ್ನಷ್ಟು ಜನರು ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಕಾದು ಕುಳಿತಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಇರಲೇಬೇಕು, ಹಾಗಾಗಿ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಸರ್ಕಾರ ಅವಕಾಶ ಯಾವಾಗ ಕೊಡುತ್ತದೆ ಎಂದು ಜನರು ಕಾದು ಕುಳಿತಿದ್ದಾರೆ. ಆದರೆ ಹೊಸ ರೇಷನ್ ಕಾರ್ಡ್ ಪಡೆಯಲು ಸರ್ಕಾರ ಇನ್ನು ಅನುಮತಿ ನೀಡಿಲ್ಲ, ಈಗಾಗಲೇ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿರುವವರ ಅರ್ಜಿಗಳನ್ನು ಪರಿಶೀಲಿಸಿ ಅವರಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಿದೆ.

ಗೃಹಲಕ್ಷ್ಮಿ ಹಣ ₹2000 ಯಾರಿಗೆ ಬಂದಿಲ್ವೋ, ಕಡೆಗೂ ಗೊತ್ತಾಯ್ತು ಯಾವಾಗ ಜಮಾ ಆಗುತ್ತೆ ಅಂತ

ಹೊಸ ಸಮಸ್ಯೆ

ಇಷ್ಟೆಲ್ಲಾ ಮಾಹಿತಿ ನಂತರವೂ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸದ ಜನರಿಗೆ, ಯೋಜನೆಯ ಯಾವ ಸೌಲಭ್ಯ ಕೂಡ ಸಿಗುವುದಿಲ್ಲ, ಜೊತೆಗೆ ಈಗ ಹೊಸ ಸಮಸ್ಯೆ ಏನು ಎಂದರೆ ಇಷ್ಟು ದಿನದ ಗಡುವು ನೀಡಿದರೂ ಅಪ್ಡೇಟ್ ಮಾಡಿಸಿಲ್ಲವಾದರೆ ಈಗ ಮಾಡಿಸುವ ಅವಕಾಶ ಕೂಡ ಇಲ್ಲ. ಕಾರಣ ಪ್ರಕ್ರಿಯೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ಇನ್ನು ಮತ್ತೆ ಅಪ್ಡೇಟ್ ಮಾಡಿಸಲು ಸರ್ಕಾರ ಅವಕಾಶ ಮಾಡಿಕೊಡುತ್ತದೆಯೇ ಕಾದು ನೋಡಬೇಕಾಗಿದೆ.

A new problem for those who do not update their ration card

Follow us On

FaceBook Google News