ಮಕ್ಕಳ ಶಾಲಾ ಸಮಯದಲ್ಲಿ ಬದಲಾವಣೆ; ಇನ್ನೂ ಅರ್ಧ ಗಂಟೆ ಮುಂಚೆ ತರಗತಿಗಳು ಪ್ರಾರಂಭ!

ಶಾಲಾ ಮಕ್ಕಳ ಅವಧಿಯನ್ನು ಅರ್ಧ ಗಂಟೆಗೆ ಮುಂಚೆ ಮಾಡಬೇಕು, ಅಂದರೆ 9:00 ಬದಲಾಗಿ 8:30 ಕ್ಕೆ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

Bengaluru, Karnataka, India
Edited By: Satish Raj Goravigere

ಸಾಮಾನ್ಯವಾಗಿ ರಾಜ್ಯಾದ್ಯಂತ ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ (private and Government schools) 9 ಗಂಟೆಯಿಂದ ತರಗತಿಗಳು ಆರಂಭವಾಗುತ್ತವೆ. ಇದು ಇಂದು ನಿನ್ನಯ ಪದ್ಧತಿಯಲ್ಲ (School Timings). ಬಹಳ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ಬಹಳ ಹಿಂದೆ 10 ಗಂಟೆಗೆ ಇದ್ದ ಸಮಯವನ್ನು ಒಂಬತ್ತು ಗಂಟೆಗೆ ಬದಲಾಯಿಸಲಾಗಿತ್ತು. 9 ಗಂಟೆಗೆ ಶಾಲೆಯಲ್ಲಿ ಪ್ರಾರ್ಥನೆ ಆರಂಭವಾಗುವ ಪರಿಪಾಠ ಶುರುವಾಗಿ ಬಹಳ ಸಮಯವೇ ಆಗಿ ಹೋಯಿತು. ಆದರೆ ಈಗ ಈ ಸಮಯದಲ್ಲಿ ಬದಲಾವಣೆ ತರಲು ಶಿಕ್ಷಣ ಇಲಾಖೆ (education department) ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿ ಇದೆ.

Major Decision to Change in school Timings

ಗೃಹಲಕ್ಷ್ಮಿ ಹಣ ₹2000 ಯಾರಿಗೆ ಬಂದಿಲ್ವೋ, ಕಡೆಗೂ ಗೊತ್ತಾಯ್ತು ಯಾವಾಗ ಜಮಾ ಆಗುತ್ತೆ ಅಂತ

ಹೈಕೋರ್ಟ್ ಹೇಳಿದ್ದೇನು? (High court suggestion)

ಟ್ರಾಫಿಕ್ ಜಾಮ್ (traffic jam) ತಪ್ಪಿಸಲು ಶಾಲಾ ಮಕ್ಕಳ ಶಾಲಾ ಅವಧಿಯಲ್ಲಿ ಬದಲಾವಣೆ ಮಾಡಬೇಕು, ಈ ಬಗ್ಗೆ ಚರ್ಚೆ ಮಾಡಿ ಎಂದು ಹೈಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ಶಾಲಾ ಮಂಡಳಿಗಳ ಒಕ್ಕೂಟಗಳ ಜೊತೆಗೆ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಬೇಕು ಎಂದು ಹೈಕೋರ್ಟ್ ಶಿಕ್ಷಣ ಇಲಾಖೆಗೆ ತಿಳಿಸಿದೆ.

ಅರ್ಧ ಗಂಟೆ ಬೇಗ ಶಾಲೆ ಶುರು ಮಾಡುವುದು:

ಎಲ್ಲರಿಗೂ ತಿಳಿದಿರುವ ಹಾಗೆ ಅದರಲ್ಲೂ ನಗರ ಪ್ರದೇಶ (City surroundings) ಗಳಲ್ಲಿ ಶಾಲೆಯ ಸಮಯ ಒಂಬತ್ತು ಗಂಟೆಗೆ ಇರುವುದರಿಂದ ಬಹುತೇಕ ಆಫೀಸ್ (office) ಗೆ ತೆರಳುವವರು ಕೂಡ ಅದೇ ಸಮಯಕ್ಕೆ ಹೋಗುತ್ತಾರೆ. ಹಾಗಾಗಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ ಇದನ್ನು ತಪ್ಪಿಸಲು ಶಾಲಾ ಮಕ್ಕಳ ಅವಧಿಯನ್ನು ಅರ್ಧ ಗಂಟೆಗೆ ಮುಂಚೆ ಮಾಡಬೇಕು, ಅಂದರೆ 9:00 ಬದಲಾಗಿ 8:30 ಕ್ಕೆ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ರೇಷನ್ ಕಾರ್ಡ್ ಜೊತೆಗೆ ಈ ಒಂದು ದಾಖಲೆ ಇದ್ರೆ ಮಾತ್ರ ಸಿಗುತ್ತೆ ರೇಷನ್! ಮತ್ತೆ ನಿಯಮ ಬದಲಾವಣೆ

Change in school Timingsಆದರೆ ಈ ಸಮಸ್ಯೆ ಎದುರಿಸಬೇಕು:

ಒಂದು ವೇಳೆ ತರಗತಿಯನ್ನು 9:00 ಗಿಂತ ಮುಂಚೆ ಆರಂಭಿಸಿದರೆ ಹಲವು ಸಮಸ್ಯೆಗಳು ಕೂಡ ಆಗಬಹುದು, ಮೊದಲನೆಯದಾಗಿ ಇದು ಮಕ್ಕಳ ಆರೋಗ್ಯದ (children’ health) ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಇಂದಿಗಿಂತ ಇನ್ನಷ್ಟು ಬೇಗ ಹೇಳಬೇಕು. ಇದರಿಂದ ದೈಹಿಕ ಚಟುವಟಿಕೆಗೆ ಸಮಯ ಇರುವುದಿಲ್ಲ ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮಾನಸಿಕ ಒತ್ತಡವನ್ನು ಕೂಡ ಹೆಚ್ಚಿಸುತ್ತದೆ.

ಮಕ್ಕಳ ಶಾಲೆಯ ಅವಧಿ ಮುಗಿಯುವ ಹೊತ್ತಿಗೆ ಆಫೀಸ್ ಕೂಡ ಮುಗಿಯುವುದರಿಂದ ಬೆಳಗ್ಗೆ ಟ್ರಾಫಿಕ್ ಜಾಮ್ ತಪ್ಪಿಸಿದರು ಸಂಜೆ ಮತ್ತೆ ಟ್ರಾಫಿಕ್ ಜಾಮ್ ಹಾಗೆ ಆಗುತ್ತದೆ. ಮೊದಲೇ ಬೇಗ ಎದ್ದು ಶಾಲೆಗೆ ಬಂದಿರುವ ಮಕ್ಕಳಿಗೆ ಸಂಜೆ ಇನ್ನಷ್ಟು ವಿಳಂಬವಾದರೆ ಕಿರಿಕಿರಿ ಹೆಚ್ಚಾಗುತ್ತದೆ ಹಾಗಾಗಿ ಶಾಲಾ ಸಮಯದಲ್ಲಿ ಬದಲಾವಣೆ ಮಾಡುವುದರ ಬಗ್ಗೆ ಖಾಸಗಿ ಶಾಲಾ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಗೃಹಲಕ್ಷ್ಮಿ, ಗೃಹಜ್ಯೋತಿ ಬೆನ್ನಲ್ಲೇ ಈಗ ರಾಜ್ಯದಲ್ಲಿ ಮಕ್ಕಳ ಆರೈಕೆಗಾಗಿ ಹೊಸ ಯೋಜನೆ ಘೋಷಣೆ

ನಿಜಕ್ಕೂ ಟ್ರಾಫಿಕ್ ಸಮಸ್ಯೆ ಬಗ್ಗೆ ಹರಿಯುತ್ತಾ?

ನಗರ ಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಲು ಮುಖ್ಯವಾಗಿ ಶಾಲಾ ವಾಹನಗಳು, ಕೈಗಾರಿಕೆ (factory), ವಾಣಿಜ್ಯ ಸಂಸ್ಥೆಗಳು (commercial companies) ಕಾರಣವಾಗಿವೆ.

ಹಾಗಾಗಿ ಇವರೆಲ್ಲರನ್ನು ಕರೆದು ಚರ್ಚೆ ನಡೆಸಿ ಒಮ್ಮತದ ಅಭಿಪ್ರಾಯಕ್ಕೆ ಬರುವಂತೆ ಹೈಕೋರ್ಟ್ ಶಿಕ್ಷಣ ಇಲಾಖೆಗೆ ತಿಳಿಸಿದೆ. ಇನ್ನು ಟ್ರಾಫಿಕ್ ದಟ್ಟಣೆ ಎನ್ನುವುದು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಇರುವಂತದ್ದು.

ಹಾಗಾಗಿ ಬೆಂಗಳೂರು (Bengaluru) ನಗರದಲ್ಲಿ ಮಾತ್ರ ಶಾಲಾ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆಯೆ ಅಥವಾ ಇದೇ ನಿಯಮ ರಾಜ್ಯಾದ್ಯಂತ ಅನ್ವಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಶಾಲಾ ಸಮಯದ ಜೊತೆಗೆ ಕೈಗಾರಿಕಾ ಕೆಲಸದ ಸಮಯವನ್ನು ಕೂಡ ಬದಲಾಯಿಸುವುದರ ಬಗ್ಗೆ ಸರ್ಕಾರದ ಜೊತೆಗೆ ಚರ್ಚೆ ನಡೆಸಲಾಗುವುದು.

Major Decision to Change in school Timings